ETV Bharat / state

ರಾಜ್ಯದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ: ಕಳೆದ ವರ್ಷಕ್ಕಿಂತ ತುಟ್ಟಿಯಾದ ಗೌರಿ ಗಣೇಶನ ಮಣ್ಣಿನ ಮೂರ್ತಿಗಳು

author img

By ETV Bharat Karnataka Team

Published : Sep 17, 2023, 11:03 PM IST

ಈ ಬಾರಿಯ ಚೌತಿಯಲ್ಲಿ ಗೌರಿ ಗಣೇಶ ಮೂರ್ತಿಗಳ ದರ ಹೆಚ್ಚಾಗಿದ್ದು, ಅಲಂಕಾರಿಕ ವಸ್ತು, ಸರಕು ಸಾಗಣೆ ಕಾರಣದಿಂದ ಶೇ. 10 ರಿಂದ 20ರಷ್ಟು ಬೆಲೆ ಜಾಸ್ತಿಯಾಗಿದೆ.

Price increase for Ganesha idols
ರಾಜ್ಯದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ: ಕಳೆದ ವರ್ಷಕ್ಕಿಂತ ತುಟ್ಟಿಯಾದ ಗೌರಿ ಗಣೇಶನ ಮಣ್ಣಿನ ಮೂರ್ತಿಗಳು

ಬೆಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಚೌತಿಯಲ್ಲಿ ಗೌರಿ ಗಣೇಶ ಮೂರ್ತಿಗಳ ದರ ಹೆಚ್ಚಾಗಿದ್ದು, ಅಲಂಕಾರಿಕ ವಸ್ತು, ಸರಕು ಸಾಗಣೆ ಕಾರಣದಿಂದ ಶೇ. 10 ರಿಂದ 20ರಷ್ಟು ಬೆಲೆ ಜಾಸ್ತಿಯಾಗಿದೆ. ಮನೆಗಳಲ್ಲಿ ಪೂಜಿಸಲ್ಪಡುವ ಚಿಕ್ಕ ಮೂರ್ತಿಗಳಿಂದ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಡುವ ದೊಡ್ಡ ಗಾತ್ರದ ಗಣೇಶ ವಿಗ್ರಹಗಳನ್ನು ಭಾನುವಾರ ಜನತೆ ಕೊಂಡೊಯ್ಯುತ್ತಿದ್ದುದು ನಗರಗಳಲ್ಲಿ ಕಂಡುಬಂತು. ಚೌತಿಗಾಗಿ ನಗರದ ಬೀದಿ ಬೀದಿಗಳಲ್ಲಿ ಗಣೇಶ ವಿಗ್ರಹಗಳು ಮಾರಾಟವಾಗುತ್ತಿವೆ.

Price increase for Ganesha idols
ರಾಜ್ಯದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ: ಕಳೆದ ವರ್ಷಕ್ಕಿಂತ ತುಟ್ಟಿಯಾದ ಗೌರಿ ಗಣೇಶನ ಮಣ್ಣಿನ ಮೂರ್ತಿಗಳು

ಹಿಂದಿನ ವರ್ಷ 50 ರಿಂದ 80 ರೂಪಾಯಿಗೆ ಲಭ್ಯವಾಗುತ್ತಿದ್ದ ಮಣ್ಣಿನ ಚಿಕ್ಕ ಗಣೇಶ ಮೂರ್ತಿಗಳು ಈ ಬಾರಿ 100 ರಿಂದ 120 ರೂಪಾಯಿ ಆಗಿವೆ. ಸಾಧಾರಣ ಗಾತ್ರದ ಮೂರ್ತಿಗಳಿಗೆ 1 ಸಾವಿರದಿಂದ 5 ಸಾವಿರ ರೂಪಾಯಿ ಬೆಲೆಯಿದ್ದರೆ, ದೊಡ್ಡ ಗಾತ್ರದ ವಿಗ್ರಹಗಳಿಗೆ 40 ಸಾವಿರದಿಂದ 60 ಸಾವಿರ ರೂಪಾಯಿವರೆಗೂ ಬೆಲೆಯಿದೆ. ಹೀಗಾಗಿ ಮೂರ್ತಿ ಕೊಳ್ಳುವವರು ಚೌಕಾಸಿಯಲ್ಲಿ ತೊಡಗಿದ್ದು ಸಹಜವಾಗಿತ್ತು.

Price increase for Ganesha idols
ರಾಜ್ಯದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ: ಕಳೆದ ವರ್ಷಕ್ಕಿಂತ ತುಟ್ಟಿಯಾದ ಗೌರಿ ಗಣೇಶನ ಮಣ್ಣಿನ ಮೂರ್ತಿಗಳು

ಯಶವಂತಪುರದಲ್ಲಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಚಂದ್ರಯಾನ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದಂತೆ ಗಣಪನನ್ನು ರೂಪಿಸಲಾಗಿದೆ. ಬಿಟಿಎಂ 1ನೇ ಸ್ಟೇಜ್‌ನ ಶ್ರೀ ಗಜಾನನ ಗೆಳೆಯರ ಬಳಗ ರೈತ ಹಾಗೂ ಪರಿಸರ ಅಭಿವೃದ್ಧಿಯ ಮಾದರಿಯಲ್ಲಿ ಗಣೇಶನನ್ನು ನಿರ್ಮಿಸಿದ್ದಾರೆ. ಇದಲ್ಲದೆ, ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ತಾಂಡವ ನೃತ್ಯದ ಕಾಲಭೈರವ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಮುಂಬೈನಲ್ಲಿ ಜನಪ್ರಿಯವಾಗಿರುವ ಲಾಲ್ಬಾಗ್ ರಾಜ, ಪೂನಾದ ದಗಡು ಸೇಟ್ ಹಲ್ವಾಯಿ ಹೀಗೆ ಬಗೆ ಬಗೆಯ ಗಣಪಗಳು ಮಾರುಕಟ್ಟೆಯಲ್ಲಿ ಸಾರ್ವಜನಿಕರನ್ನು ಆಕರ್ಷಸಿವೆ.

Price increase for Ganesha idols
ರಾಜ್ಯದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ: ಕಳೆದ ವರ್ಷಕ್ಕಿಂತ ತುಟ್ಟಿಯಾದ ಗೌರಿ ಗಣೇಶನ ಮಣ್ಣಿನ ಮೂರ್ತಿಗಳು

ಗೌರಿ ಹಬ್ಬಕ್ಕಾಗಿ ಗಜಗೌರಿ, ಮಂಗಳಗೌರಿ, ಮಡಿಗೌರಿ, ಮೈಸೂರು ಗೌರಿ, ಬೆಂಗಳೂರು ಗೌರಿಯರು ಸೇರಿದಂತೆ ತಮ್ಮದೇ ಶೈಲಿಯ ಮೂರ್ತಿಗಳನ್ನು ಮಾಡಿಸಿ ಜನರು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳಿಗೆ ನಿರ್ಬಂಧ ವಿಧಿಸಿರುವುದು, ಗಣೇಶ ಮೂರ್ತಿಗಳ ಬಳಸುವ ಬಣ್ಣ, ಕೃತಕ ಮಣಿಗಳು ಸೇರಿ ಅಲಂಕಾರ ವಸ್ತುಗಳು ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಾಗಿರುವ ಕಾರಣಕ್ಕೆ ಬೆಲೆ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ನೋಟು ನಾಣ್ಯಗಳ ಗಣಪ: ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್​ನಿಂದ ಈ ಬಾರಿ ಗಣೇಶೋತ್ಸವವನ್ನು ನಾಣ್ಯ ಮತ್ತು ನೋಟುಗಳಿಂದ ಅಲಂಕರಿಸಿ ವೈಭವದಿಂದ ವಿಭಿನ್ನವಾಗಿ ಆಚರಿಸಲಾಗುತ್ತಿದೆ. 50 ಲಕ್ಷ ರೂಪಾಯಿ ಮೊತ್ತದ ನಾಣ್ಯಗಳು, ನೋಟುಗಳಿಂದ ಗಣಪನನ್ನು ಅಲಂಕರಿಸಲಾಗಿದೆ. 150ಕ್ಕೂ ಹೆಚ್ಚಿನ ಜನರ ತಂಡ ಹಬ್ಬಕ್ಕೂ ಹದಿನೈದು ದಿನಗಳ ಹಿಂದಿನಿಂದಲೇ ಗಣೇಶನನ್ನು ನೋಟುಗಳಿಂದ ಅಲಂಕಾರ ಮಾಡಿದ್ದಾರೆ.

ಇದನ್ನೂ ಓದಿ: ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಿಸಲು ಭರದ ಸಿದ್ಧತೆ: ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹೂವು, ಹಣ್ಣು, ತರಕಾರಿಗಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.