ETV Bharat / state

ಇಂದು ಸಹ ಸಿಡಿ ಲೇಡಿ ಕೋರ್ಟ್​ಗೆ ಹಾಜರಾಗೋದು ಅನುಮಾನ!

author img

By

Published : Mar 30, 2021, 12:55 PM IST

ಮತ್ತೊಂದೆಡೆ ಎಸ್ಐಟಿ ಅಧಿಕಾರಿಗಳು ನಗರ ಪೊಲೀಸ್ ಕಮೀಷನರ್ ಕಮಲ್‌ ಪಂಥ್​ ನೇತೃತ್ವದಲ್ಲಿ ಸಭೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಪ್ರಭುದೇವ ನಾವಡಗಿ ಅವರ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ.

former-minister-ramesh-jarkiholi-cd-case
ಇಂದು ಸಿಡಿ ಲೇಡಿ ಕೋರ್ಟ್​ಗೆ ಹಾಜರಾಗೋದು ಅನುಮಾನ

ಬೆಂಗಳೂರು: ಪ್ರತಿ ಹಂತದಲ್ಲಿಯೂ ರೋಚಕ ತಿರುವು ಪಡೆಯುತ್ತಿರುವ ಸಿಡಿ ಪ್ರಕರಣ ಸಂಬಂಧ ಯುವತಿ ಹಾಜರಾಗುತ್ತಾಳಾ ? ಇಲ್ಲವೋ..? ಎಂಬ ಗೊಂದಲ ಮುಂದುವರಿದಿದೆ.

ಯುವತಿ ಪರ ವಕೀಲ ಜಗದೀಶ್ ಹೇಳುವ ಪ್ರಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಂದ ಯುವತಿ ಹೇಳಿಕೆ ನೀಡಲು ಅನುಮತಿ ಸಿಕ್ಕಿದೆ. ಆದ್ರೆ ಎಲ್ಲಿ ? ಯಾವಾಗ ? ಎಂದು ಸಮಯ ‌ನಿಗದಿಪಡಿಸಿಲ್ಲ. ಒಂದು ವೇಳೆ ಕೋರ್ಟ್ ಅನುಮತಿ ನೀಡಿದರೆ ಇಂದೇ ಯುವತಿಯನ್ನು ಹಾಜರುಪಡಿಸುವುದಾಗಿ ಆಕೆ ಪರ ವಕೀಲರು ಹೇಳಿಕೆ ನೀಡಿದ್ದಾರೆ.

ಮತ್ತೊಂದೆಡೆ ಎಸ್ಐಟಿ ಅಧಿಕಾರಿಗಳು ನಗರ ಪೊಲೀಸ್ ಕಮೀಷನರ್ ಕಮಲ್‌ ಪಂಥ್​ ನೇತೃತ್ವದಲ್ಲಿ ಸಭೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಪ್ರಭುದೇವ ನಾವಡಗಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ.

ಮುಂದುವರೆದ ಗೊಂದಲ : ಸೆಕ್ಷನ್​ 164 ಪ್ರಕಾರ ಹೇಳಿಕೆ ದಾಖಲಿಸುವ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ. ತನಿಖಾಧಿಕಾರಿಗೆ ದೂರುದಾರರು ಯಾರು ಎಂಬುದು ಇನ್ನೂ ಅಧಿಕೃತವಾಗಿಲ್ಲ. ಯುವತಿ ಖುದ್ದು ಹಾಜರಾಗಿ ಠಾಣೆಗೆ ದೂರು ನೀಡಿಲ್ಲ. ಹೀಗಿರುವಾಗ ನೇರವಾಗಿ ಹೋಗಿ164 ಪ್ರಕಾರ ಹೇಳಿಕೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಯುವತಿ ಮೊದಲು ತನಿಖಾಧಿಕಾರಿ ಎದುರು ಹಾಜರಾಗಬೇಕು‌ ದೂರು ನೀಡಿರುವುದು ಆಕೆಯೇ ಎಂಬುದು ಮೊದಲು‌ ದೃಢವಾಗಬೇಕು. ನಂತರವಷ್ಟೇ ಉಳಿದ ಪ್ರಕ್ರಿಯೆಗಳು. ಹೀಗಾಗಿ ಇಂದು ಯುವತಿ ಕೋರ್ಟ್ ಗೆ ಹಾಜರಾಗೋದು ಅನುಮಾನ ಎನ್ನಲಾಗುತ್ತಿದೆ.

ಓದಿ : ಇನ್ನೊಂದು ಗಂಟೆಯಲ್ಲಿ ಯುವತಿ ಹಾಜರು: ವಕೀಲ ಜಗದೀಶ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಕೇಸ್ ಗೆ ಪ್ರಮುಖ ಬದಲಾವಣೆ ಮಾಡಲಾಗಿದೆ‌. ಸಂತ್ರಸ್ತೆ ನೀಡಿದ‌ ದೂರು ಸಂಬಂಧ ಕಬ್ಬನ್ ಪಾರ್ಕ್ ಠಾಣೆ ತನಿಖಾಧಿಕಾರಿಯಾಗಿದ್ದ ಇನ್‌ಸ್ಟೆಕ್ಟರ್ ಮಾರುತಿ ಜಾಗದಲ್ಲಿ ನಗರ ಪೂರ್ವ ವಿಭಾಗದ ಸಂಚಾರ ಎಸಿಪಿ ಕವಿತಾ ಅವರನ್ನು ತನಿಖಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.