ETV Bharat / state

ಬಾರ್‌ ಕೋಡ್ ಬಳಸಿ ನಕಲಿ ಟಿಕೆಟ್ ಸೃಷ್ಟಿ.. ಬೆಂಗಳೂರಲ್ಲಿ ಫೇಕ್​ ಐಪಿಎಲ್‌ ಟಿಕೆಟ್ ಮಾರುತ್ತಿದ್ದ ಖದೀಮರ ಬಂಧನ

author img

By

Published : Apr 22, 2023, 2:57 PM IST

ಐಪಿಎಲ್​ ಪಂದ್ಯಾಟದಲ್ಲಿ ನಕಲಿ ಬಾರ್​ಕೋಡ್​ನಿಂದ ಅಕ್ರಮ ಹಣ ಸಂಪಾದಿಸುತ್ತಿದ್ದ ವ್ಯಕ್ತಿಗಳ ಬಂಧನವಾಗಿದೆ.

cricket
ಚಿನ್ನಸ್ವಾಮಿ ಸ್ಟೇಡಿಯಂ

ಬೆಂಗಳೂರು: ಕ್ಯೂ ಆರ್ ಕೋಡ್ ಮಾಡುವ ಬಾರ್ ಕೋಡ್ ನಕಲಿ ಸೃಷ್ಟಿಸಿ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪಂದ್ಯ ವೇಳೆ‌ ನಕಲಿ ಟಿಕೆಟ್ ಜಾಲದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸೇರಿದಂತೆ ಇಬ್ಬರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಗಳಿಗೆ ಟಿಕೆಟ್ ನೀಡುವ ಇನ್​ಚಾರ್ಜ್ ಆಗಿರುವ ಸುಮಂತ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ದರ್ಶನ್, ಸುಲ್ತಾನ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಎಲ್ ಪಂದ್ಯಾವಳಿ ವೇಳೆ ಅರೆಕಾಲಿಕ ಸಿಬ್ಬಂದಿಯಾಗಿ ದರ್ಶನ್ ಕೆಲಸ‌ ಮಾಡುತ್ತಿದ್ದ.‌ ತಾತ್ಕಾಲಿಕ ಗುರುತಿನ ಚೀಟಿ ಜೊತೆ ಬಾರ್ ಕೋಡ್ ನೀಡಲಾಗಿತ್ತು.‌

ಇದನ್ನು ಓದಿ: ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಹತ್ಯಾ ದಾಳಿ ಬೆದರಿಕೆ: ಪೊಲೀಸರ ಭದ್ರತಾ ವಿವರವೂ ಸೋರಿಕೆ

ನಕಲಿ ಬಾರ್​ಕೋಡ್​ನಿಂದ ಅಕ್ರಮವಾಗಿ ಹಣ ಸಂಪಾದನೆ‌ : ಇದೇ ತಿಂಗಳು 17 ರಂದು ಆರ್ ಸಿಬಿ ಹಾಗೂ ಸಿಎಸ್ ಕೆ‌ ನಡುವೆ ಪಂದ್ಯ ನಿಗದಿಯಾಗಿತ್ತು. ಈ ಮ್ಯಾಚ್ ಟಿಕೆಟ್ ಬಾರಿ ಡಿಮ್ಯಾಂಡ್ ಕಂಡು ಬಂದಿತ್ತು‌. ಇದನ್ನೇ ದುರ್ಬಳಕೆ‌ ಮಾಡಿಕೊಂಡ ದರ್ಶನ್, ತಮ್ಮ ಐಡಿ ಕಾರ್ಡ್​ನಲ್ಲಿದ್ದ ಬಾರ್ ಕೋಡ್ ತೆಗೆದು ನಕಲಿ ಬಾರ್​ ಕೋಡ್​ ಸೃಷ್ಟಿಸಿಕೊಂಡಿದ್ದ.‌ ನಂತರ ಸ್ನೇಹಿತರ ಮುಖಾಂತರ ನಕಲಿ ಟಿಕೆಟ್​ಗಳನ್ನು 10 ರಿಂದ 15 ಸಾವಿರ ರೂಪಾಯಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ‌ ಮಾಡುತ್ತಿದ್ದರು.

ಸ್ಟೇಡಿಯಂ ಗೇಟ್ 6ರಲ್ಲಿ ಒಂದೇ ಬಾರ್ ಕೋಡ್​ನಿಂದ ಕ್ಯೂ ಆರ್ ಕೋಡ್ ಸೃಷ್ಟಿಸಿ ಅದನ್ನೇ ಸ್ಕ್ಯಾನ್​ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಅನುಮಾನಗೊಂಡ ಸುಮಂತ್ ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಿದ್ದಾರೆ.‌ ಪರಿಶೀಲಿಸಿದಾಗ ದರ್ಶನ್ ಗೆ‌ ನೀಡಲಾಗಿದ್ದ ಬಾರ್ ಕೋಡ್ ನಿಂದಲೇ‌ ಹೆಚ್ಚು ಕ್ಯೂ ಆರ್ ಕೋಡ್ ಮಾಡಿರುವುದು ಕಂಡುಬಂದಿತ್ತು. ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಕ್ರಿಕೆಟ್​ ಕಿಟ್​ನ್ನೇ ಕದ್ದಿದ್ದ ಕಿಡಿಗೇಡಿಗಳು: ಕಳೆದ 10 ದಿನಗಳ ಹಿಂದೆ ದೆಹಲಿ ಹಾಗೂ ಆರ್ ಸಿಬಿ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳ್ಳತನವಾಗಿತ್ತು. ಇದರಿಂದ ದೆಹಲಿ ತಂಡ ದೆಹಲಿ ಪೊಲೀಸರಿಗೆ ದೂರು ನೀಡಿತ್ತು. ದೆಹಲಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದರು. ಈ ತನಿಖೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಕಳವು ಆಗಿರುವುದನ್ನು ಅರಿತ ಡೆಲ್ಲಿ ಟೀಂನವರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಬೆಂಗಳೂರು ಪೊಲೀಸರು ತೀವ್ರ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕಳ್ಳತನವಾಗಿದ್ದ ಕ್ರಿಕೆಟ್​ ಕಿಟ್​ಗಳನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ​ಧನ್ಯವಾದ ತಿಳಿಸಿದ ಡೇವಿಡ್ ವಾರ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.