ETV Bharat / state

ರಾಜ್ಯದಲ್ಲಿ ಎರಡಂಕಿಗೆ ಇಳಿದ ಕೋವಿಡ್ ಸೋಂಕಿತರ ಸಂಖ್ಯೆ: ಇಬ್ಬರು ಸಾವು

author img

By

Published : Mar 21, 2022, 9:50 PM IST

Karnataka COVID report.. ರಾಜ್ಯದಲ್ಲಿಂದು ಇದೇ ಮೊದಲ ಬಾರಿಗೆ ಅತಿ ಕಡಿಮೆ ಸಂಖ್ಯೆಯ ಸೋಂಕಿತರು ಪತ್ತೆಯಾಗಿದ್ದಾರೆ. 71 ಮಂದಿಗೆ ಸೋಂಕು ದೃಢಪಟ್ಟಿದ್ದರೆ, 173 ಸೋಂಕಿತರು ಗುಣಮುಖರಾಗಿದ್ದಾರೆ.

corona-bulletin
ರಾಜ್ಯದಲ್ಲಿಂದು 71 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಇದೇ ಮೊದಲು ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇಂದು 20,272 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ, ಇದರಲ್ಲಿ 71 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,44,785 ಕ್ಕೆ ಏರಿಕೆ ಆಗದ್ದರೆ, ಪಾಸಿಟಿವ್ ದರವೂ 0.35% ರಷ್ಟಿದೆ.

173 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 39,02,813 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,891 ರಷ್ಟಿದೆ. ಸೋಂಕಿಗೆ ಇಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 40,039 ಏರಿಕೆ ಕಂಡಿದೆ. ಡೆತ್ ರೇಟ್​ 2.81% ರಷ್ಟಿದೆ.

ವಿಮಾನ ನಿಲ್ದಾಣದಿಂದ 3,011 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 53 ಸೋಂಕು ತಗುಲಿದ್ದು 17,81,060 ಕ್ಕೆ ಏರಿಕೆ ಆಗಿದೆ. 110 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 17,62,459 ಏರಿಕೆ‌ ಕಂಡಿದೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,952 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,596 ರಷ್ಟಿದೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್..
ಅಲ್ಪಾ- 156

ಬೀಟಾ-08

ಡೆಲ್ಟಾ ಸಬ್ ಲೈನೇಜ್- 4620

ಇತರೆ- 311

ಒಮಿಕ್ರಾನ್- 3081

BAI.1.529- 828

BA1- 98

BA2- 2155
------------------
ಒಟ್ಟು- 8176
------------------

ಇದನ್ನೂ ಓದಿ: ಹಿಜಾಬ್ ತೀರ್ಪು ವಿರೋಧಿಸಿ ಪರೀಕ್ಷೆ ಬಹಿಷ್ಕಾರ: ಮರು ಪರೀಕ್ಷೆ ಸಾಧ್ಯವಿಲ್ಲ- ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.