ETV Bharat / state

ಕ್ರೇಜಿಸ್ಟಾರ್ ರವಿಚಂದ್ರನ್ ಜಡ್ಜ್​ಮೆಂಟ್​ನಲ್ಲಿ ದಿಗಂತ್​ಗೆ ಸಿಗುತ್ತಾ ನ್ಯಾಯ?

author img

By

Published : May 19, 2023, 7:32 PM IST

ಗುರುರಾಜ ಬಿ ಕುಲಕರ್ಣಿ ಅವರ ನಿರ್ದೇಶನದ ಸಿನಿಮಾ ದಿ ಜಡ್ಜ್​​ಮೆಂಟ್​ ಶೂಟಿಂಗ್​ನ ಅನುಭವವನ್ನು ಹಂಚಿಕೊಳ್ಳುವುದಕ್ಕೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ದಿ ಜಡ್ಜ್​​ಮೆಂಟ್​ ಸಿನಿಮಾ ಶೂಟಿಂಗ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಯಿತು
ದಿ ಜಡ್ಜ್​​ಮೆಂಟ್​ ಸಿನಿಮಾ ಶೂಟಿಂಗ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಯಿತು

ದಿ ಜಡ್ಜ್​​ಮೆಂಟ್​ ಸಿನಿಮಾ ಶೂಟಿಂಗ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಯಿತು

ಬೆಂಗಳೂರು : ಪ್ರೇಮಲೋಕದ ಹೆಡ್ ಮಾಸ್ಟರ್ ಅಂತಾ ಕನ್ನಡ ಚಿತ್ರರಂಗದಲ್ಲಿ ಕರೆಯಿಸಿಕೊಂಡಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್. ದೃಶ್ಯಂ 2 ಚಿತ್ರದ ಯಶಸ್ಸಿನ ಬಳಿಕ ರವಿಚಂದ್ರನ್ ಹೊಸ ಬಗೆಯ ಕಥೆಗಳ ಮೂಲಕ ಪ್ರೇಕ್ಷಕರೆದುರು ಬರ್ತಾ ಇದ್ದಾರೆ. ಈಗಾಗಲೇ ಹಲವು ಪ್ರಯತ್ನಗಳು ಅವರ ಸಿನಿಮಾ ಬತ್ತಳಿಕೆಯಿಂದ ಇತ್ತೀಚಿನ ದಿನಗಳಲ್ಲಿ ಬಂದಿವೆ. ಇದೀಗ ದಿ ಜಡ್ಜ್‌ಮೆಂಟ್‌ ಎಂಬ ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ.

ಅದ್ದೂರಿ ಟೈಟಲ್ ಅನಾವರಣ ಮಾಡಿದ ನಿರ್ದೇಶಕ ಗುರುರಾಜ ಬಿ ಕುಲಕರ್ಣಿ, ಸೈಲೆಂಟ್ ಆಗಿ ಕಂಠೀರವ ಸ್ಟುಡಿಯೋದಲ್ಲಿ ಕೋರ್ಟ್ ಮತ್ತು ಜೈಲು ಸೆಟ್ಟು ಹಾಕಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಈ ಶೂಟಿಂಗ್ ಅನುಭವವನ್ನ ಹಂಚಿಕೊಳ್ಳೋದಕ್ಕೆ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ನಿರ್ದೇಶಕ ಗುರುರಾಜ್‌ ಹೇಳುವ ಹಾಗೆ, ಇದೊಂದು ಲಿಗಲ್ ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ. ಈ ಚಿತ್ರದಲ್ಲಿ ರವಿಚಂದ್ರನ್, ಪ್ರಕಾಶ್ ಬೆಳವಾಡಿ, ದಿಗಂತ್, ಧನ್ಯಾ ರಾಮ್ ಕುಮಾರ್, ಮೇಘನಾ ಗಾಂವ್ಕರ್, ರವಿಶಂಕರ್ ಗೌಡ, ಲಕ್ಷ್ಮೀಗೋಪಾಲಸ್ವಾಮಿ, ಟಿ. ಎಸ್ ನಾಗಾಭರಣ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿರುವ ಈ ಚಿತ್ರವನ್ನ ನಿರ್ದೇಶಕರು ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು.

ನ್ಯಾಯಾಧೀಶ ಪಾತ್ರದಲ್ಲಿ ರವಿಚಂದ್ರನ್​: ಜಡ್ಜ್​​ಮೆಂಟ್​ ಹೇಳುವ ನ್ಯಾಯಾಧೀಶರಾಗಿ ರವಿಚಂದ್ರನ್ ಈ ಚಿತ್ರದಲ್ಲಿ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಇದ್ದ ಕಡೆ ನಗುವಿಗೆ ಭರವಿಲ್ಲ. ಅದೇ ರೀತಿ ಜಡ್ಜ್​​ಮೆಂಟ್ ಸಿನಿಮಾ ತಂಡದಲ್ಲಿ ಇಂತಹದೊಂದು ನಗುವಿನ ಸಂಭ್ರಮ ಮನೆ ಮಾಡಿತ್ತು. ರವಿಮಾಮ ಹೇಳುವ ಹಾಗೆ ಈ ಚಿತ್ರದಲ್ಲಿ ದಿಗಂತ್ ಮಾಡಿದ ಕ್ರೈಮ್ ನಿಂದ ಹೇಗೆ ಹೊರಗಡೆ ಕರೆದುಕೊಂಡು ಬರ್ತಾರೆ ಅನ್ನೋದು ಜಡ್ಜ್ ಮೆಂಟ್ ಚಿತ್ರದ ಕಥೆ. ಅಷ್ಟೇ ಅಲ್ಲ ಒಂದು ಲಿಗಲ್ ಥ್ರಿಲ್ಲರ್ ಕಥೆಯಾಗಿರುವುದರಿಂದ ರವಿಚಂದ್ರನ್ ಸತ್ಯವನ್ನ ಎತ್ತಿ ಹಿಡಿಯುವ ನ್ಯಾಯಾಧೀಶನ ಪಾತ್ರ ನಿಜಕ್ಕೂ ಸಮಾಜಕ್ಕೆ ಒಂದು ಸಂದೇಶ ನೀಡುತ್ತೆ ಅನ್ನೋದು ಕ್ರೇಜಿಸ್ಟಾರ್ ವಿಶ್ವಾಸ.

ಇನ್ನು ಶಿವಾಜಿ ಸುರತ್ಕಲ್ 2 ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಗಮನ ಸೆಳೆದಿದ್ದ ಮೇಘನಾ ಗಾಂವ್ಕರ್ ಈ ಚಿತ್ರದಲ್ಲಿ ರವಿಚಂದ್ರನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರವಿ ಸಾರ್ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿರೋದು ತುಂಬಾನೇ ಖುಷಿ ಇದೆ ಅಂದರು.

ದಿಗಂತ್ ಜೋಡಿಯಾಗಿ ಧನ್ಯಾರಾಮ್ ಕುಮಾರ್: ಇನ್ನು ದಿಗಂತ್ ಕಾರ್ಪೆಟ್ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗನ ಪಾತ್ರ. ಯಾವುದೇ ತಪ್ಪು ಮಾಡದೆ ಕ್ರೈಮ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಸನ್ನಿವೇಶ ಅದು ಅಂತಾರೆ ದಿಗಂತ್. ದಿಗಂತ್ ಜೋಡಿಯಾಗಿ ಧನ್ಯಾರಾಮ್ ಕುಮಾರ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ಪ್ರಕಾಶ್ ಬೆಳವಾಡಿ, ರವಿಶಂಕರ್​ಗೌಡ, ರಾಜೇಂದ್ರ ಕಾರಂತ್ ಕೂಡ ಈ ಚಿತ್ರದಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ ಆಕ್ಸಿಡೆಂಟ್, ಲಾಸ್ಟ್ ಬಸ್ ಹತ್ತಿ ಅಮೃತ ಅಪಾರ್ಟ್‌ಮೆಂಟ್ಸ್‌ ಚಿತ್ರಗಳನ್ನ ಮಾಡಿ ಗಮನ ಸೆಳೆದಿರೋ ಗುರುರಾಜ ಬಿ ಕುಲಕರ್ಣಿ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜಿ 9 ಕಮ್ಯೂನಿಕೇಷನ್‌ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ನಿರ್ದೇಶನದ ಜೊತೆಗೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

40 ಪರ್ಸೆಂಟ್ ಚಿತ್ರೀಕರಣ ಮುಕ್ತಾಯ : ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ಬಿ. ಎಸ್ ಕೆಂಪರಾಜು ಸಂಕಲನ ಹಾಗೂ ಎಂ. ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಈಗಾಗ್ಲೇ 40 ಪರ್ಸೆಂಟ್ ಚಿತ್ರೀಕರಣ ಮುಗಿಸಿರೋ ಜಡ್ಜ್​ಮೆಂಟ್ ಚಿತ್ರ ಉಳಿದ ಶೂಟಿಂಗ್ ಮುಗಿಸಿ ಬಹುಬೇಗನೆ ಬಿಡುಗಡೆ ಮಾಡಲು ನಿರ್ದೇಶಕ ಗುರುರಾಜ್ ಬಿ ಕುಲಕರ್ಣಿ ಪ್ಲಾನ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರಾಜೇಶ್ ಕಾಮೆಂಟ್‌ಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದು ಹೀಗೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.