ಬೆಂಗಳೂರಲ್ಲಿ ಒಂದೇ ದಿನದಲ್ಲಿ 20 ಸಾವಿರದ ಸಮೀಪಕ್ಕೆ ಬಂದ ಕೋವಿಡ್ ಪ್ರಕರಣ!

author img

By

Published : Jan 13, 2022, 10:34 AM IST

covid cases close to 20 thousand in Bangalore, Bangalore corona news, Bangalore corona update, ಬೆಂಗಳೂರಿನಲ್ಲಿ 20 ಸಾವಿರ ಸನಿಹಕ್ಕೆ ಕೊರೊನಾ ಪ್ರಕರಣಗಳು, ಬೆಂಗಳೂರು ಕೊರೊನಾ ಸುದ್ದಿ, ಬೆಂಗಳೂರು ಕೊರೊನಾ ಅಪ್​ಡೇಟ್​,

ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನದಲ್ಲಿ 20 ಸಾವಿರದ ಸಮೀಪಕ್ಕೆ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಜನರು ಭೀತರಾಗಿದ್ದಾರೆ.

ಬೆಂಗಳೂರು: ಬೆಂಗಳೂರಲ್ಲಿಂದು 18,374 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.‌ ಮುಂದಿನ 24 ಗಂಟೆಯಲ್ಲಿ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ.

ಓದಿ: ವಿಶ್ವಾದ್ಯಂತ ಒಂದೇ ದಿನ 31 ಲಕ್ಷ ಜನರಿಗೆ ಕೋವಿಡ್ ಪಾಸಿಟಿವ್​!

ಇಂದು ಬೊಮ್ಮನಹಳ್ಳಿ ವಲಯದಲ್ಲಿ 2096, ದಾಸರಹಳ್ಳಿ 367, ಬೆಂಗಳೂರು ಪೂರ್ವ 2,996, ಮಹದೇವಪುರ 2,181 , ಆರ್ ಆರ್‌ನಗರ 1,362, ದಕ್ಷಿಣ ವಲಯ 3,003, ಪಶ್ಚಿಮ 2,110, ಯಲಹಂಕ 1,233, ಅನೇಕಲ್ 698, ಬೆಂಗಳೂರು ಹೊರವಲಯ 1,288 ಸೇರಿ ಒಟ್ಟು 18,374 ಸೋಂಕು ಹಬ್ಬಿದೆ.

ಓದಿ: ಕಳೆದ 24 ಗಂಟೆಗಳಲ್ಲಿ ಸುಮಾರು 2.5 ಲಕ್ಷ ಜನಕ್ಕೆ ಅಂಟಿದ ಕೊರೊನಾ..!

ಮಂಗಳವಾರ 10,800 ಕೋವಿಡ್ ಪ್ರಕರಣ, ಬುಧವಾರ 15,617 ಇಂದು 18,374 ಜನರಲ್ಲಿ ಕೋವಿಡ್​ ದೃಢಪಟ್ಟಿದ್ದು, ಸಿಲಿಕಾನ್​ ಸಿಟಿ ಬೆಚ್ಚಿಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.