ವಿಶ್ವಾದ್ಯಂತ ಒಂದೇ ದಿನ 31 ಲಕ್ಷ ಜನರಿಗೆ ಕೋವಿಡ್ ಪಾಸಿಟಿವ್​!

author img

By

Published : Jan 13, 2022, 9:27 AM IST

worldwide corona cases increase

ವಿಶ್ವಾದ್ಯಂತ ಒಟ್ಟು 7,855 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಜಗತ್ತಿನಾದ್ಯಂತ ಇದುವರೆಗೂ 31 ಕೋಟಿ 72 ಲಕ್ಷದ 90 ಸಾವಿರದ 957 ಪ್ರಕರಣಗಳು ವರದಿಯಾಗಿವೆ. ಒಟ್ಟು ಸಾವಿನ ಸಂಖ್ಯೆ 55 ಲಕ್ಷ 29 ಸಾವಿರ 817 ಕ್ಕೆ ಏರಿದೆ. 26 ಕೋಟಿ 27 ಲಕ್ಷ 69 ಸಾವಿರದ 645 ಮಂದಿ ಗುಣಮುಖರಾಗಿದ್ದಾರೆ.

ನ್ಯೂಯಾರ್ಕ್​: ವಿಶ್ವಾದ್ಯಂತ ಕರೋನಾ ಪ್ರಕರಣಗಳು ಎಲ್ಲೆ ಮೀರಿ ಏರಿಕೆ ಕಾಣುತ್ತಿವೆ. ನಿನ್ನೆ ಒಂದೇ ದಿನ 31 ಲಕ್ಷ ಹೊಸ ಪ್ರಕರಣಗಳು ಬೆಳಕಿಗೆ ಬಂದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಅಮೆರಿಕ ಒಂದರಲ್ಲೇ ಅತಿ ಹೆಚ್ಚಿನ ಅಂದರೆ 8.14 ಲಕ್ಷ ಪಾಸಿಟಿವ್​ ಪ್ರಕರಣಗಳು ಕಂಡು ಬಂದಿವೆ.

ಒಟ್ಟು 7,855 ಜನರು ಕೊರೊನಾದಿಂದ ಪ್ರಪಂಚದಾದ್ಯಂತ ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವದಲ್ಲಿ ಇದುವರೆಗೂ 31 ಕೋಟಿ 72 ಲಕ್ಷದ 90 ಸಾವಿರದ 957 ಪ್ರಕರಣಗಳು ವರದಿಯಾಗಿವೆ. ಒಟ್ಟು ಸಾವಿನ ಸಂಖ್ಯೆ 55 ಲಕ್ಷ 29 ಸಾವಿರ 817 ಕ್ಕೆ ಏರಿದೆ. 26 ಕೋಟಿ 27 ಲಕ್ಷ 69 ಸಾವಿರದ 645 ಮಂದಿ ಗುಣಮುಖರಾಗಿದ್ದಾರೆ. 4 ಕೋಟಿ 89 ಲಕ್ಷ 91 ಸಾವಿರದ 495 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ಅಮೆರಿಕದಲ್ಲಿ ಒಂದೇ ದಿನ 13 ಲಕ್ಷಕ್ಕೂ ಹೆಚ್ಚು ಕೋವಿಡ್ ಸೋಂಕಿತರು​ ಪತ್ತೆ, ಹೊಸ ಜಾಗತಿಕ ದಾಖಲೆ

  • ಅತಿ ಹೆಚ್ಚು ಕೊರೊನಾ ವೈರಸ್ ಸೋಂಕು ಹೊಂದಿರುವ ಅಮೆರಿಕದಲ್ಲಿ ಒಂದೇ ದಿನ 8 ಲಕ್ಷದ 14 ಸಾವಿರದ 494 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 2,269 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 8 ಲಕ್ಷ 66 ಸಾವಿರ 882 ಕ್ಕೆ ತಲುಪಿದೆ. ಒಟ್ಟು ಪ್ರಕರಣಗಳ ಸಂಖ್ಯೆ 6 ಕೋಟಿ 43 ಲಕ್ಷ 44 ಸಾವಿರ 694 ಕ್ಕೆ ಏರಿದೆ.
  • ಅಮೆರಿಕದ ನಂತರದ ಸ್ಥಾನದಲ್ಲಿ ಫ್ರಾನ್ಸ್‌ ಇದ್ದು, ಇಲ್ಲಿ ಹೊಸದಾಗಿ 3,61,719 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನು 246 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 29 ಲಕ್ಷದ 34 ಸಾವಿರಕ್ಕೆ ತಲುಪಿದೆ. ಸಾವಿನ ಸಂಖ್ಯೆ 1,26,305 ಆಗಿದೆ.
  • ಇಟಲಿಯಲ್ಲಿ ಒಟ್ಟು 1,96,224 ಹೊಸ ಪ್ರಕರಣಗಳು ವರದಿಯಾಗಿವೆ. 313 ಸಾವುಗಳು ಕೂಡಾ ಸಂಭವಿಸಿವೆ. ಒಟ್ಟು ಪ್ರಕರಣಗಳ ಸಂಖ್ಯೆ 79 ಲಕ್ಷದ 71 ಸಾವಿರದ 68 ಕ್ಕೆ ಮುಟ್ಟಿದೆ. ಒಟ್ಟು ಸಾವಿನ ಸಂಖ್ಯೆ 1,39,872 ಕ್ಕೆ ಏರಿಕೆ ಕಂಡಿದೆ.
  • ಸ್ಪೇನ್‌ನಲ್ಲಿ 1,79,125 ಹೊಸ ಪ್ರಕರಣಗಳು ವರದಿಯಾಗಿದ್ದರೆ 125 ಸಾವುಗಳು ಸಂಭವಿಸಿವೆ.
  • ಅರ್ಜೆಂಟೀನಾದಲ್ಲಿ 1,31,082 ಜನರು ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು 75 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 66 ಲಕ್ಷ 64 ಸಾವಿರದ 717ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 1,17,670ಕ್ಕೆ ಏರಿಕೆ ಆಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.