ETV Bharat / state

ಸಂಸದ ತೇಜಸ್ವಿ ಸೂರ್ಯಗೆ ದೋಸೆ ಪಾರ್ಸೆಲ್ ಕಳುಹಿಸಿದ ಕಾಂಗ್ರೆಸ್ ಕಾರ್ಯಕರ್ತರು!

author img

By

Published : Sep 10, 2022, 5:32 PM IST

ಕಾಂಗ್ರೆಸ್​ ಕಾರ್ಯಕರ್ತರು ಇಂದು ಸಂಸದ ತೇಜಸ್ವಿ ಸೂರ್ಯ ಅವರಿಗೆ ಆನ್​ಲೈನ್ ಫುಡ್ ಡೆಲಿವರಿ ಮೂಲಕ ಮಸಾಲೆ ದೋಸೆ ಪಾರ್ಸೆಲ್ ಮಾಡಿ ಅವರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

KN_BNG_05_THEJ
ತೇಜಸ್ವಿ ಸೂರ್ಯಗೆ ದೋಸೆ ಪಾರ್ಸೆಲ್

ಬೆಂಗಳೂರು: ಜನರು ಪ್ರವಾಹದಿಂದ ಸಂಕಷ್ಟದಲ್ಲಿರುವಾಗ ಹೋಟೆಲ್​ನಲ್ಲಿ ಮಸಾಲೆ ದೋಸೆ ಸವಿದ ಹಿನ್ನೆಲೆ ಸಂಸದ ತೇಜಸ್ವಿ ಸೂರ್ಯಗೆ ದೋಸೆ ಪಾರ್ಸೆಲ್ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಆನ್​ಲೈನ್ ಫುಡ್ ಡೆಲಿವರಿ ಮೂಲಕ ಜಯನಗರದ ಸಂಸದರ ಕಚೇರಿಗೆ ದೋಸೆ ಪಾರ್ಸೆಲ್ ಮಾಡಿದರು. ವಿದ್ಯಾರ್ಥಿ ಭವನ, ನ್ಯೂ ಸಾಗರ್, ದಾವಣಗೆರೆ ಬೆಣ್ಣೆ ದೋಸೆ, ಮೌರ್ಯ ಹೋಟೆಲ್ ದೋಸೆ, ಸಿಟಿಆರ್ ಹೋಟೆಲ್ ದೋಸೆ ಪಾರ್ಸೆಲ್ ಮಾಡಿದರು. ಮಸಾಲೆ ದೋಸೆ, ಪುಡಿ ಮಸಾಲೆ ದೋಸೆ, ಪೇಪರ್‌ ದೋಸೆ, ಬೆಣ್ಣೆ ಮಸಾಲೆ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ ರವಾನೆ ಮಾಡಿದರು. ಹಣ ಪಾವತಿಸಿ ಡಂನ್ಜೋ ಮೂಲಕ ಪಾರ್ಸೆಲ್ ಕಳುಹಿಸಿದರು.

ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕೆಲ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಈ ನಡುವೆ ಸಂಸದರು ಹೋಟೆಲ್​​ವೊಂದರಲ್ಲಿ ದೋಸೆ ರುಚಿ ಸವಿದು, ಅದರ ಗುಣಗಾನ ಮಾಡಿದ್ದರು. ಈ ರುಚಿ ನೋಡಬೇಕಾ ನೀವು ಹೋಟೆಲ್​ಗೆ ಭೇಟಿ ನೀಡಿ ಎಂದು ಸಲಹೆಯನ್ನೂ ನೀಡಿದ್ದರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿತ್ತು.

ಬೆಂಗಳೂರಿಗರು ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ಬಾರದ ಸಂಸದರು ದೋಸೆ ಸವಿಯುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ಮೀಡಿಯಾದಲ್ಲೂ ಸದ್ದು ಮಾಡಿತ್ತು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ: ಬೆಣ್ಣೆ ದೋಸೆ ಪ್ರಚಾರ ಮಾಡಿದ ತೇಜಸ್ವಿ ಸೂರ್ಯ ವಿಡಿಯೋ ವೈರಲ್: ಪ್ರವಾಹ ಸಂಕಷ್ಟದಲ್ಲಿರುವ ಬೆಂಗಳೂರಿಗರಿಂದ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.