ETV Bharat / state

ಸಿಡಿ ವಿವಾದ: ರಮೇಶ್ ಜಾರಕಿಹೊಳಿ ವಿರುದ್ಧ ಸಂಕೇತ್ ಏಣಗಿ ಟ್ವೀಟ್​ ವಾರ್​

author img

By

Published : Mar 27, 2021, 11:19 AM IST

Updated : Mar 27, 2021, 11:53 AM IST

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್​ ಮುಖಂಡ ಸಂಕೇತ್ ಆಕ್ರೋಶ ಹೊರ ಹಾಕಿದ್ದಾರೆ.

Congress leader spark, Congress leader spark against former minister, Congress leader spark against former minister Ramesh Jarkiholi, Congress leader Sanket yenagi, Congress leader Sanket yenagi tweet, ಕಾಂಗ್ರೆಸ್​ ಮುಖಂಡ ಆಕ್ರೋಶ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್​ ಮುಖಂಡ ಆಕ್ರೋಶ, ಕಾಂಗ್ರೆಸ್​ ನಾಯಕ ಸಂಕೇತ್ ಏಣಗಿ, ಕಾಂಗ್ರೆಸ್​ ನಾಯಕ ಸಂಕೇತ್ ಏಣಗಿ ಟ್ವೀಟ್,
ರಮೇಶ್ ಜಾರಕಿಹೊಳಿ ವಿರುದ್ಧ ಸಂಕೇತ್ ಟ್ವೀಟ್​ ಮೂಲಕ ಆಕ್ರೋಶ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವಹೇಳನ ಮಾಡಿ ಕಾಂಗ್ರೆಸ್ ಮುಖಂಡ ಹಾಗೂ ಸುಪ್ರೀಂ ಕೋರ್ಟ್ ಅಡ್ವೋಕೇಟ್ ಸಂಕೇತ್ ಏಣಗಿ ಟ್ವೀಟ್ ಮಾಡಿದ್ದಾರೆ.

  • ಸದ್ಯ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ಅಂಶವೆಂದರೆ, #ಸಾಂವಿಧಾನಿಕ ಹುದ್ದೆ ಯಲ್ಲಿದ್ದುಕೊಂಡು #ಅನಾಚಾರ ಮಾಡಿರುವುದು ದೊಡ್ಡ ಅಪರಾಧವೊ, ಅಥವಾ, ಅನಾಚಾರ ಜನಸಾಮಾನ್ಯರ ಎದುರಿಗೆ #ಅನಾವರಣ ವಾಗಿರುವುದು ಅಪರಾಧವೊ ?

    ಆದರೆ, ಈಗಾಗಲೇ #ಕರ್ನಾಟಕದ ಜನತೆಗೆ ಇದರ ಬಗ್ಗೆ ಸ್ಪಷ್ಟ ಅರಿವು ಮತ್ತು ಉತ್ತರ ಸಿಕ್ಕಿದೆ..

    ~ ಸಂಕೇತ ಏಣಗಿ.

    — Sanket Yenagi (@Sanket_Yenagi) March 27, 2021 " class="align-text-top noRightClick twitterSection" data=" ">

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮುಂದಿಟ್ಟುಕೊಂಡು ಆಕ್ರೋಶ ಹೊರಹಾಕಿದ ಏಣಗಿ, ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಅನಾಚಾರ ಮಾಡಿರುವುದು ದೊಡ್ಡ ಅಪರಾಧ. ಅನಾಚಾರ ಜನಸಾಮಾನ್ಯರ ಎದುರು ಅನಾವರಣವಾಗಿದೆ. ಈ ಅನಾವರಣ ಅಪರಾಧವೋ? ರಾಜ್ಯದ ಜನರಿಗೆ ಸ್ಪಷ್ಟ ಅರಿವು ಮತ್ತು ಇದರ ಬಗ್ಗೆ ಉತ್ತರ ಸಿಕ್ಕಿದೆ ಎಂದು ಟ್ವೀಟ್​ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರವಾಗಿ ಕಾಂಗ್ರೆಸ್ ನಾಯಕರು ನಿರಂತರವಾಗಿ ಟೀಕೆ ಹಾಗೂ ಲೇವಡಿ ಮಾಡುತ್ತಾ ಬಂದಿದ್ದು, ಇದೀಗ ಮುಂದುವರಿದ ಭಾಗವಾಗಿ ಸಂಕೇತ್ ಸಹ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಸಹ ತಮ್ಮ ಪ್ರಕರಣದ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಇದನ್ನು ಅಲ್ಲಗಳೆಯುತ್ತಿದ್ದಾರೆ. ಒಟ್ಟಾರೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಾ ಸಾಗಿದ್ದು, ಈ ಮಧ್ಯೆ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮದೇ ಆದ ವೇದಿಕೆಯಡಿ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.

Last Updated : Mar 27, 2021, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.