ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ, ಗುರುಗಳು ಹೇಳಿದಂತೆ ಕೇಳಬೇಕು: ಸಿಎಂ ಬೊಮ್ಮಾಯಿ

author img

By

Published : Mar 20, 2023, 6:17 PM IST

Updated : Mar 20, 2023, 6:27 PM IST

cm-bommai-reaction-on-urigowda-nanjegowda-movie
ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ, ಗುರುಗಳು ಹೇಳಿದಂತೆ ಕೇಳಬೇಕು: ಸಿಎಂ ಬೊಮ್ಮಾಯಿ ()

ಉರಿಗೌಡ ಹಾಗೂ ನಂಜೇಗೌಡ ಸಿನಿಮಾಗೆ ಬ್ರೇಕ್ ಬಿದ್ದಿದೆ. ಈಗಾಗಲೇ ಸ್ವಾಮೀಜಿ ಸ್ಪಷ್ಟವಾಗಿ ನನಗೂ ಹೇಳಿದ್ದಾರೆ, ಹೀಗಾಗಿ ಇಲ್ಲಿಗೆ ಈ ವಿಚಾರವನ್ನು ಬಿಡುತ್ತಿದ್ದೇವೆ ಎಂದು ಸಚಿವ ಆರ್​ ಅಶೋಕ್​ ಹೇಳಿದ್ದಾರೆ.

ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ, ಗುರುಗಳು ಹೇಳಿದಂತೆ ಕೇಳಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರು: ಉರಿಗೌಡ, ನಂಜೇಗೌಡ ಸಿನಿಮಾ ಸ್ಥಗಿತಗೊಳಿಸಲು ಗುರುಗಳು ತಿಳಿಸಿದ ಹಿನ್ನೆಲೆಯಲ್ಲಿ ಗುರುಗಳು ಹೇಳಿದಂತೆ ಕೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಸಚಿವ ಹಾಗೂ ಸಿನಿಮಾ ನಿರ್ಮಾಪಕ ಮುನಿರತ್ನ ಅವರು ಸಿನಿಮಾ ಮಾಡುತ್ತಿರುವ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿ, ಮುನಿರತ್ನ ಅವರು ಸಿನಿಮಾ ಮಾಡಲು ಹೊರಟಿದ್ದು, ಅದರ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ಅವರಿಂದ ಪೂರ್ತಿ ಮಾಹಿತಿ ತಿಳಿದ ನಂತರ ಮಾತನಾಡುವುದಾಗಿ ಹೇಳಿದರು. ಶ್ರೀಗಳು ಬೇಡ ಎಂದಿದ್ದಕ್ಕೆ ಮುನಿರತ್ನ ಹಿಂದೆ ಸರಿದಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ನಂತರ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಚುನಾವಣೆ ಹತ್ತಿರ‌ ಬಂದಾಗ ಕೆಲವು ಪುಡಾರಿಗಳು ಬರ್ತಾರೆ. ವೋಟ್ ಹಾಕಲಿಲ್ಲ‌ ಅಂದ್ರೆ ಹಕ್ಕುಪತ್ರ ಕೊಡಲ್ಲ‌ ಅಂತಾರೆ. ಆದರೆ ನಾನು ಈ ತರದ ರಾಜಕಾರಣ ಮಾಡಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ‌ ಕೆಲವು ತಾಂಡಗಳಿಗೆ ಊರಿನ ಹೆಸರು ಇರಲಿಲ್ಲ. ಊರಿಗೆ ಅಡ್ರೆಸ್ ಇರಲಿಲ್ಲ. ಬಡವರಿಗೆ ಏನ್ ಬೇಕಾದರೂ ಮಾಡು ಅಂತಾ ಸಿಎಂ ಹೇಳಿದ್ದರು. ಶ್ರೀರಂಗಪಟ್ಟಣದಲ್ಲೂ ಗ್ರಾಮವೊಂದನ್ನ ಘೋಷಿಸಿದ್ದೇನೆ. ಕಾಫಿ ಬೆಳೆಯುತ್ತಿದ್ದ ಬಡ ರೈತರಿಗೆ 40 ಸಾವಿರ ಎಕರೆ ಲೀಸ್ ಗೆ‌ ಕೊಟ್ಟಿದ್ದೇವೆ ಎಂದರು.

ಮನೆ ಬಾಗಿಲಿಗೆ‌ ಕಂದಾಯ ಪತ್ರಗಳನ್ನು ಕೊಟ್ಟಿದ್ದೇವೆ. 62 ಸಾವಿರ ರೈತರ ಮನೆಗೆ ಕಂದಾಯ ದಾಖಲೆಗಳನ್ನ ತಲುಪಿಸಿದ್ದೇವೆ. ಆ್ಯಸಿಡ್‌ ದಾಳಿಗೊಳಗಾದವರ ಬಗ್ಗೆ ಸಿಎಂ ಬಳಿ‌ ಮಾತನಾಡಿದ್ದೆ. ಹಿಂದಿನ ಸರ್ಕಾರಗಳು 2/3 ಸಾವಿರ ಕೊಡುತ್ತಿದ್ದರು. ಈಗ ನಮ್ಮ ಸರ್ಕಾರ 10 ಸಾವಿರ ಕೊಡುತ್ತಿದೆ ಎಂದು ಹೇಳಿದರು.

ಕುಮಾರಸ್ವಾಮಿ ಉರಿಗೌಡ, ನಂಜೇಗೌಡ ಇಲ್ಲ ಅಂತ ಸಾಬೀತು ಪಡಿಸಲಿ: ಉರಿಗೌಡ ಹಾಗೂ ನಂಜೇಗೌಡ ಸಿನಿಮಾಗೆ ಬ್ರೇಕ್ ಬಿದ್ದಿದೆ. ನಿನ್ನೆ ಸ್ವಾಮೀಜಿ ಪೋನ್ ಮೂಲಕ ಮಾತಾಡಿದರು. ಆ ರೀತಿಯ ಸಿನಿಮಾ ಬೇಡ ಅಂತ ನನಗೆ ಹೇಳಿದರು. ನಾನು ಕೂಡ ಮುನಿರತ್ನಗೆ ಹೇಳಿದ್ದೆ. ಉರಿಗೌಡ, ನಂಜೇಗೌಡ ಇದು ರಾಜಕೀಯ ವಿಚಾರ ಆಗಲಾರದು. ಈ ವಿಚಾರವನ್ನು ಜಾತಿಗೋಸ್ಕರ ಬಳಕೆ ಮಾಡಬಾರದು ಎಂದರು

ಈಗಾಗಲೇ ಇತಿಹಾಸ ಆಗಿದೆ ಪುಸ್ತಕದಲ್ಲೂ ಇದೆ. ಕುಮಾರಸ್ವಾಮಿ ಕಾಲ್ಪನಿಕ ವ್ಯಕ್ತಿಗಳು ಅಂತಾರೆ. ಹಾಗಾದರೆ ಪುಸ್ತಕದಲ್ಲಿ ಹೇಗೆ ಬಂತು? ಆವತ್ತೆ ಕೇಸ್ ಹಾಕಬಹುದಿತ್ತು. ಎಲ್ಲಾ ಪಕ್ಷದಲ್ಲಿ ಒಕ್ಕಲಿಗ ಸಮುದಾಯದವರು ಇದ್ದಾರೆ. ಉರಿಗೌಡ, ನಂಜೇಗೌಡ ವಿಚಾರ ಇಲ್ಲಿಗೆ ಬಿಡಬೇಕು. ಯಾರಿಗೂ ಪಾಳೆಗಾರಿಕೆ ಮಾಡಲು ಕೊಟ್ಟಿಲ್ಲ. ಕುಮಾರಸ್ವಾಮಿ ಉರಿಗೌಡ ನಂಜೇಗೌಡ ಇಲ್ಲ ಅಂತ ಸಾಬೀತು ಪಡಿಸಲಿ. ನಾವು ಉರಿಗೌಡ ನಂಜೇಗೌಡ ಇದಾರೆ ಅಂತ ಪ್ರೂ ಮಾಡ್ತೀವಿ. ಈಗಾಗಲೇ ಸ್ವಾಮೀಜಿ ಸ್ಪಷ್ಟವಾಗಿ ನನಗೂ ಹೇಳಿದ್ದಾರೆ, ಹೀಗಾಗಿ ಇಲ್ಲಿಗೆ ಈ ವಿಚಾರವನ್ನು ಬಿಡುತ್ತಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಕ್ಷಮಾಪಣೆ ಕೇಳಬೇಕು- ಅಶೋಕ್​: ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನನಗೂ ಸಿದ್ದರಾಮಯ್ಯ ಕಂಡ್ರೆ ಮರುಕ ಆಗ್ತಿದೆ. ಕಳೆದ ಆರು ತಿಂಗಳು ಸಿದ್ದರಾಮಯ್ಯ ಓಡು ಮಗಾ ಓಡು ಮಗಾ ಅಂತಾ ಓಡ್ತಾವ್ರೆ. ಎಲ್ಲು ಹೋದ್ರು ಕ್ಷೇತ್ರ ಸಿಕ್ತಿಲ್ಲ. ಒಂದು ಕಡೇ ಉರಿಗೌಡ ನಂಜೇಗೌಡ ನೋಡಿ ಊರಿ ಹತ್ಕೊಂಡಿದೆ. ಈಗ ವರುಣ ಕ್ಷೇತ್ರ ಅಂತಾವ್ರೆ. ನನ್ನ ಪ್ರಕಾರ ವರುಣಾದಲ್ಲೂ ನಿಲ್ಲಲ್ಲ ಅನ್ಸುತ್ತೆ. ಯಾಕೆಂದರೆ ಅಲ್ಲೂ ಸಿದ್ದರಾಮಯ್ಯ ಸೋಲ್ತಾರೆ. ಟಿಪ್ಪು ಜಯಂತಿ ಮಾಡಿದ್ದು ತಪ್ಪು. ಅಂತ ಸಿದ್ದರಾಮಯ್ಯ ಕ್ಷಮಾಪಣೆ ಕೇಳಬೇಕು. ಹೀಗೆ ಹೇಳಿದರೆ ಜನರು ಯಾವುದಾದರೂ ಕ್ಷೇತ್ರ ಸಿದ್ದರಾಮಯ್ಯಗೆ ಕೊಡಬಹುದು. ಇಲ್ಲ ಅಂದ್ರೆ ಓಡು ಮಗಾ ಎಂದು ಸಿದ್ದರಾಮಯ್ಯ ಓಡಬೇಕು. ಸಿದ್ದರಾಮಯ್ಯ ಇಲ್ಲ ಬೇರೆ ರಾಜ್ಯ ನೋಡಿಕೊಳ್ಳಬೇಕು. ಇಲ್ಲಂತೂ ಅವರಿಗೆ ಕ್ಷೇತ್ರ ಸಿಗಲ್ಲ ವ್ಯಂಗ್ಯವಾಡಿದರು.

ಇದನ್ನೂ ಓದಿ:ಸಚಿವ ಮುನಿರತ್ನ ಅವರನ್ನು ಕರೆಸಿ ನಿರ್ಮಲಾನಂದ ಶ್ರೀಗಳು ಮಾತನಾಡಿದ್ದಾರೆ : ಸಚಿವ ಆರ್​ ಅಶೋಕ್

Last Updated :Mar 20, 2023, 6:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.