ETV Bharat / state

ಬೇಲಿಯೇ ಎದ್ದು ಹೊಲ ಮೇಯ್ದಂತೆ ಕೇಂದ್ರ ಚುನಾವಣಾ ಆಯೋಗದ ನಿಲುವು.. ಮಾಜಿ ಸಂಸದ ಉಗ್ರಪ್ಪ

author img

By

Published : Sep 23, 2019, 7:43 PM IST

ಮಾಜಿ ಸಂಸದ ವಿ. ಎಸ್. ಉಗ್ರಪ್ಪ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲವೇ ಚುನಾವಣೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು. ಇದರ ಕರ್ತವ್ಯ ಚುನಾವಣಾ ಆಯೋಗದ್ದು. ಆದರೆ, ಆಯೋಗ ಕೇಂದ್ರದ ಒಂದು ವಿಭಾಗವಾಗಿದೆ. ಬಿಜೆಪಿ ಕಪಿಮುಷ್ಠಿಯಲ್ಲಿ ಆಯೋಗ ಸಿಲುಕಿಕೊಂಡಿದೆ. ಇದರಿಂದ ಬೇಲಿಯೇ ಎದ್ದು ಹೊಲ ಮೇಯ್ದಿಂತಾಗಿದೆ ಎಂದರು.

ಬೆಂಗಳೂರು: ಚುನಾವಣಾ ಆಯೋಗದ ಪರ ವಕೀಲರು ನಡೆದುಕೊಂಡ ರೀತಿ ಇವತ್ತು ಬೇಲಿ ಎದ್ದು ಹೊಲ ಮೇಯ್ದಿದೆ ಅನ್ನುವಂತಾಗಿದೆ ಎಂದು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್​ನಲ್ಲಿ ನಡೆದ ನಡಾವಳಿ ಸಾಕ್ಷಿಯಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲ ಚುನಾವಣೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು. ಇದರ ಕರ್ತವ್ಯ ಚುನಾವಣಾ ಆಯೋಗದ್ದು. ಆದರೆ, ಆಯೋಗ ಕೇಂದ್ರದ ಒಂದು ವಿಭಾಗವಾಗಿದೆ. ಬಿಜೆಪಿ ಕಪಿಮುಷ್ಠಿಯಲ್ಲಿ ಆಯೋಗ ಸಿಲುಕಿಕೊಂಡಿದೆ. 17 ಶಾಸಕರ ಅನರ್ಹತೆ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇಂತಹ ವೇಳೆ ಅವರು ಮಧ್ಯಪ್ರವೇಶ ಮಾಡಿದ್ದಾರೆ. ಕೇಸ್ ವಿಚಾರಣೆ ವೇಳೆ ಆಯೋಗದ ಪರ ರಾಕೇಶ್ ದ್ವಿವೇದಿ ಅಪಿಯರ್ ಆಗಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇವತ್ತಿನ ಪ್ರಕರಣಕ್ಕೂ ಆಯೋಗಕ್ಕೂ ಸಂಬಂಧವಿಲ್ಲ. ಆದರೆ, ಚುನಾವಣಾ ಆಯೋಗದ ವಕೀಲರು ಅಪಿಯರ್ ಆಗಿದ್ದಾರೆ. ಸುಮೋಟು ಅಡಿ ಅಪಿಯರ್ ಆಗಿದ್ದು ಅಭಿಪ್ರಾಯ ತಿಳಿಸಿದ್ದಾರೆ. ಪ್ರಧಾನಿ ಮೋದಿ, ಶಾ ನಿರ್ದೇಶನದಂತೆ ಅಭಿಪ್ರಾಯ ತಿಳಿಸಿದ್ದಾರೆ. ನೋಟಿಸ್ ಇಲ್ಲದೆ ಅವರು ಇಂಟರ್‌ಫಿಯರ್ ಆಗಿದ್ದು ಹೇಗೆ? ಅನರ್ಹರು ಚುನಾವಣೆಗೆ ನಿಲ್ಲೋಕೆ ಅರ್ಹರು ಅಂತಾ ಹೇಳಿದ್ದು ಹೇಗೆ? ಆಯೋಗದ ವಕೀಲರ ಮಧ್ಯಪ್ರವೇಶಕ್ಕೆ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಂಸದ ವಿ ಎಸ್ ಉಗ್ರಪ್ಪ..

ಕಳೆದ ಸಾರಿಯೂ ಅನ್ಯಾಯ:

ಕಳೆದ ಲೋಕಸಭೆ ಚುನಾವಣೆಯಲ್ಲೂ ವಂಚನೆಯಾಗಿದೆ. ಇವಿಎಂಗಳ ದುರ್ಬಳಕೆ ಆಗಿರುವ ಸಾಧ್ಯತೆಯಿದೆ. ಇದರ ಹಿಂದೆ ಚುನಾವಣಾ ಆಯೋಗವೇ ನಿಂತಿರುವುದು ಗಮನಕ್ಕೆ ಬಂದಿದೆ. ಸುಪ್ರೀಂಕೋರ್ಟ್ ವಕೀಲರ ಮಿಸ್ ಕಾಂಡಾಕ್ಟ್‌ನ ಗಮನಿಸಬೇಕು. ನೋಟಿಸ್ ಇಲ್ಲದೆ ವಿಚಾರಣೆಯಲ್ಲಿ ವಕೀಲರು ಹೇಗೆ ಹಾಜರಾದ್ರು. ಚುನಾವಣಾ ಆಯೋಗದ ವಕೀಲರು ಮಧ್ಯಪ್ರವೇಶ ಮಾಡಿದ್ದು ಹೇಗೆ? ಇದೆಲ್ಲವನ್ನೂ ಸುಪ್ರೀಂಕೋರ್ಟ್ ಗಮನಿಸಬೇಕು. ಇದೆಲ್ಲವನ್ನ ಮಾನದಂಡವಾಗಿ ಪರಿಗಣಿಸಿ ಸುಪ್ರೀಂಕೋರ್ಟ್‌ ಆದೇಶ ನೀಡಬೇಕು ಎಂದರು.

ಅನರ್ಹರು ನಿಲ್ಲಲು ಸಾಧ್ಯವಿಲ್ಲ:

ಅನರ್ಹರು ಚುನಾವಣೆ ನಿಲ್ಲೋಕೆ ಸಾಧ್ಯವಿಲ್ಲ. ಇದನ್ನು ರಾಜ್ಯ ಚುನಾವಣಾಧಿಕಾರಿಯೇ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಕೇಶ್ ದ್ವಿವೇದಿ ನೋಟಿಸ್ ಇಲ್ಲದೆ ಇಂಟರ್ಫಿಯರ್‌ ಆಗಿದ್ದು ಹೇಗೆ? ಸುಪ್ರೀಂಕೋರ್ಟ್ ಮೇಲೂ ಒತ್ತಡ ತರುವಂತೆ ಕೆಲಸ ನಡೆದಿದೆ. ಚುನಾವಣಾ ಆಯೋಗದ ವಕೀಲರ ನಡೆ ಸಂವಿಧಾನ ಉಲ್ಲಂಘನೆಯಾಗಿದೆ. ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಹೋಗಿದ್ದಾರೆ. ಸ್ಪೀಕರ್ ಪರವಾಗಿ ದೆಹಲಿಗೆ ತೆರಳಿದ್ದಾರೆ. ಹಾಲಿ ಸ್ಪೀಕರ್ ಕೂಡ ಇದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೂ ಉಗ್ರಪ್ಪ ಗಂಭೀರ ಆರೋಪ ಮಾಡಿದರು.

ಎಲೆಕ್ಷನ್ ಕಮೀಷನ್ ಈವರೆಗೆ ಎಲ್ಲೂ ಪಾರ್ಟಿಯಾಗಿಲ್ಲ. ಸ್ವಯಂಪ್ರೇರಿತವಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಯಡಿಯೂರಪ್ಪ ಕೂಡ ದೆಹಲಿಗೆ ತೆರಳಿದ್ದಾರೆ. ಅವರು, ಶಾ ಮೋದಿ ಜೊತೆ ಇದನ್ನೇ ಮಾತನಾಡಿರಬೇಕು. ಚುನಾವಣಾ ಆಯೋಗದ ನಡವಳಿಕೆಗೆ ಪ್ರೇರೇಪಿಸರಬೇಕು. ದೇಶದ ಚುನಾವಣೆ ಮ್ಯಾನುಪಲೇಟ್ ಆಗ್ತಿದೆ. ಚುನಾವಣಾ ಆಯೋಗವೇ ಇಂತಹ ಕೆಲಸಕ್ಕೆ ಕೈಹಾಕಿ, ಆಡಳಿತ ಪಕ್ಷದ ಪರವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

Intro:newsBody:ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಕೇಂದ್ರ ಚುನಾವಣಾ ಆಯೋಗದ ನಿಲುವು: ಉಗ್ರಪ್ಪ

ಬೆಂಗಳೂರು: ಇವತ್ತು ಬೇಲಿ ಎದ್ದು ಹೊಲ ಮೇಯ್ದಿದೆ ಅನ್ನುವಂತಾಗಿದೆ. ಚುನಾವಣಾ ಆಯೋಗದ ಪರ ವಕೀಲರು ನಡೆದುಕೊಂಡ ರೀತಿ ಬೇಸರ ತರಿಸಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸುಪ್ರೀಂನಲ್ಲಿ ನಡೆದ ನಡಾವಳಿ ಸಾಕ್ಷಿಯಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲ ಚುನಾವಣೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು. ಇದರ ಕರ್ತವ್ಯ ಚುನಾವಣಾ ಆಯೋಗದ್ದು. ಆದರೆ ಆಯೋಗ ಕೇಂದ್ರದ ಒಂದು ವಿಭಾಗವಾಗಿದೆ. ಬಿಜೆಪಿ ಕಪಿಮುಷ್ಠಿಯಲ್ಲಿ ಆಯೋಗ ಸಿಲುಕಿಕೊಂಡಿದೆ. 17 ಶಾಸಕರ ಅನರ್ಹತೆ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇಂತಹ ವೇಳೆ ಅವರು ಮಧ್ಯ ಪ್ರವೇಶ ಮಾಡಿದ್ದಾರೆ. ಕೇಸ್ ವಿಚಾರಣೆ ವೇಳೆ ಆಯೋಗದ ಪರ ರಾಕೇಶ್ ದ್ವಿವೇದಿ ಅಪಿಯರ್ ಆಗಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಇವತ್ತಿನ ಪ್ರಕರಣಕ್ಕೂ ಆಯೋಗಕ್ಕೂ ಸಂಬಂಧವಿಲ್ಲ. ಆದರೆ ಚುನಾವಣಾ ಆಯೋಗದ ವಕೀಲರು ಅಪಿಯರ್ ಆಗಿದ್ದಾರೆ. ಸುಮೋಟು ಅಡಿ ಅಪಿಯರ್ ಆಗಿದ್ದು ಅಭಿಪ್ರಾಯ ತಿಳಿಸಿದ್ದಾರೆ. ಪ್ರಧಾನಿ ಮೋದಿ, ಶಾ ನಿರ್ದೇಶನದಂತೆ ಅಭಿಪ್ರಾಯ ತಿಳಿಸಿದ್ದಾರೆ. ನೊಟೀಸ್ ಇಲ್ಲದೆ ಅವರು ಇಂಟರ್ಪಿಯರ್ ಆಗಿದ್ದು ಹೇಗೆ? ಅನರ್ಹರು ಚುನಾವಣೆಗೆ ನಿಲ್ಲೋಕೆ ಅರ್ಹರು ಅಂತ ಹೇಳಿದ್ದು ಹೇಗೆ? ಆಯೋಗದ ವಕೀಲರ ಮಧ್ಯಪ್ರವೇಶಕ್ಕೆ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾರಿ ಯು ಅನ್ಯಾಯ
ಕಳೆದ ಲೋಕಸಭೆ ಚುನಾವಣೆಯಲ್ಲೂ ವಂಚನೆಯಾಗಿದೆ. ಇವಿಎಂಗಳ ದುರ್ಬಳಕೆ ಆಗಿರುವ ಸಾಧ್ಯತೆಯಿದೆ. ಇದರ ಹಿಂದೆ ಚುನಾವಣಾ ಆಯೋಗವೇ ನಿಂತಿರುವುದು ಗಮನಕ್ಕೆ ಬಂದಿದೆ. ಸುಪ್ರೀಂಕೋರ್ಟ್ ವಕೀಲರ ಮಿಸ್ ಕಾಂಡಾಕ್ಟ್ ಅನ್ನ ಗಮನಿಸಬೇಕು. ನೊಟೀಸ್ ಇಲ್ಲದೆ ವಿಚಾರಣೆಯಲ್ಲಿ ವಕೀಲರು ಹೇಗೆ ಹಾಜರಾದ್ರು. ಚುನಾವಣಾ ಆಯೋಗದ ವಕೀಲರು ಮಧ್ಯಪ್ರವೇಶ ಮಾಡಿದ್ದು ಹೇಗೆ? ಇದೆಲ್ಲವನ್ನೂ ಸುಪ್ರೀಂಕೋರ್ಟ್ ಗಮನಿಸಬೇಕು. ಇದೆಲ್ಲವನ್ನ ಮಾನದಂಡವಾಗಿ ಪರಿಗಣಿಸಿ ಸುಪ್ರೀಂ ಆದೇಶ ನೀಡಬೇಕು ಎಂದರು.
ಅನರ್ಹರು ನಿಲ್ಲಲು ಸಾಧ್ಯವಿಲ್ಲ
ಅನರ್ಹರು ಚುನಾವಣೆ ನಿಲ್ಲೋಕೆ ಸಾಧ್ಯವಿಲ್ಲ. ಇದನ್ನು ರಾಜ್ಯ ಚುನಾವಣಾಧಿಕಾರಿಯೇ ಸ್ಪಷ್ಟಪಡಿಸಿದ್ದಾರೆ. ಆದರೆ ರಾಕೇಶ್ ದ್ವಿವೇದಿ ನೊಟೀಸ್ ಇಲ್ಲದೆ ಇಂಟರ್ ಆಗಿದ್ದು ಹೇಗೆ? ಸುಪ್ರೀಂಕೋರ್ಟ್ ಮೇಲೂ ಒತ್ತಡ ತರುವಂತೆ ಕೆಲಸ ನಡೆದಿದೆ. ಚುನಾವಣಾ ಆಯೋಗದ ವಕೀಲರ ನಡೆ ಸಂವಿಧಾನ ಉಲ್ಲಂಘನೆಯಾಗಿದೆ. ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಹೋಗಿದ್ದಾರೆ. ಸ್ಪೀಕರ್ ಪರವಾಗಿ ದೆಹಲಿಗೆ ತೆರಳಿದ್ದಾರೆ. ಹಾಲಿ ಸ್ಪೀಕರ್ ಕೂಡ ಇದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೂ ಉಗ್ರಪ್ಪ ಗಂಭೀರ ಆರೋಪ ಮಾಡಿದರು.
ಎಲೆಕ್ಷನ್ ಕಮೀಷನ್ ಪಾರ್ಟಿಯಾಗಿಲ್ಲ. ಇಲ್ಲಿಯವರೆಗೆ ಎಲ್ಲೂ ಪಾರ್ಟಿಯಾಗಿಲ್ಲ. ಸ್ವಯಂಪ್ರೇರಿತವಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಯಡಿಯೂರಪ್ಪ ಕೂಡ ದೆಹಲಿಗೆ ತೆರಳಿದ್ದಾರೆ. ಅವರು, ಶಾ ಮೋದಿ ಜೊತೆ ಇದನ್ನೇ ಮಾತನಾಡಿರಬೇಕು. ಚುನಾವಣಾ ಆಯೋಗದ ನಡವಳಿಕೆಗೆ ಪ್ರೇರೇಪಿಸರಬೇಕು. ದೇಶದ ಚುನಾವಣೆ ಮ್ಯಾನಿಪಲೇಟ್ ಆಗ್ತಿದೆ. ಚುನಾವಣಾ ಆಯೋಗವೇ ಇಂತ ಕೆಲಸಕ್ಕೆ ಕೈಹಾಕಿದೆ. ಆಡಳಿತ ಪಕ್ಷದ ಪರವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.