ETV Bharat / state

ಸೌಟು, ಸ್ಪೂನಲ್ಲೇ ಚಾಕು: ಥೇಟ್​ ಜೋಗಿ ಸಿನಿಮಾ ಥರ ಇದೆ ಪರಪ್ಪನ ಅಗ್ರಹಾರ ಕೈದಿಗಳ ಆಯುಧಗಳು

author img

By

Published : Oct 9, 2019, 9:34 AM IST

Updated : Oct 9, 2019, 3:02 PM IST

ಚಾಕು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುವ ಬಗ್ಗೆ ಮಾಹಿತಿ ಬಂದ ಹಿನ್ನಲೆ ಸಿಸಿಬಿ ಪೊಲೀಸರು ಜೈಲಿಗೆ ದಾಳಿ ನಡೆಸಿ ಮೊಬೈಲ್​ ಸಿಮ್ ಕಾರ್ಡ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರು‌ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ಖೈದಿಗಳ ಬಳಿ ಸಿದ್ದ ಆಯುಧಗಳನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ದಾಳಿ ವೇಳೆ ಕೆಲ ಮೊಬೈಲ್​, ಸಿಮ್​ ಕಾರ್ಡ್​ಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕೆಲವು ಆಯುಧಗಳು ಸಿಕ್ಕಿದ್ದು, ಇದನ್ನು ಸೌಟು, ಸ್ಪೂನ್ ಮೊದಲಾದ ಜೈಲಲ್ಲೇ ಸಿಕ್ಕುವ ವಸ್ತುಗಳಿಂದ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಥೇಟ್​ ಜೋಗಿ ಸಿನಿಮಾದಲ್ಲಿ ಜೈಲಿನ ಸನ್ನಿವೇಶ ತೋರಿಸುವ ವೇಳೆ ಕಾಣುವ ಆಯುಧಗಳು ವಾಸ್ತವದಲ್ಲೂ ಕಂಡಿದ್ದು ಅಚ್ಚರಿ ಉಂಟುಮಾಡಿದೆ.

ಇನ್ನು ಜೈಲಿನಲ್ಲಿರುವ ಖೈದಿಗಳು ಜೈಲಿನಲ್ಲೇ ಕುಳಿತು ಹಫ್ತಾ ವಸೂಲಿ ಮಾಡಿ ಹೊರಗಿನ ಪ್ರಪಂಚದ ರೌಡಿ ಚಟುವಟಿಕೆ ಹೊಂದಿದ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದರು. ಹೀಗಾಗಿ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಬಂದಿದ್ದು ಸಿಸಿಬಿ ಎಸಿಪಿಗಳ ನೇತೃತ್ವದಲ್ಲಿ ಜೈಲಿನಲ್ಲಿ ಪರಿಶೀಲನೆ ನಡೆಸಲಾಗಿದೆ.

ದಾಳಿ ಬಳಿಕ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​ ಮಾತನಾಡಿ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ,ರೌಡಿ ಚಟುವಟಿಕೆಗೆ ಬ್ರೇಕ್ ಹಾಕಲು ಮುಂದಾಗಿದ್ದೇವೆ. ಬೆಳಗ್ಗೆಯೇ ಕಾರಾಗೃಹದ ಮೇಲೆ ದಾಳಿ ಮಾಡಿದ್ದು, ಪ್ರತಿ ಬ್ಯಾರಕ್ ನಲ್ಲೂ ತಪಾಸಣೆ ಮಾಡಲಾಗಿದೆ. ದಾಳಿ ವೇಳೆ 37 ಚಾಕು ಮತ್ತು ಡ್ಯಾಗರ್ ಗಳು ಸಿಕ್ಕಿವೆ. ಗಾಂಜಾ ಮತ್ತು ಗಾಂಜಾ ಸೇವನೆ ಮಾಡುವ ಪೈಪ್​ಗಳನ್ನು ಜಪ್ತಿ ಮಾಡಲಾಗಿದೆ. ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳು ಸಿಕ್ಕಿದ್ದು, ಅದರ ಬಗ್ಗೆ ತನಿಖೆ ನಡೆಸಲಾಗ್ತಿದೆ‌. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಒಳಗಿದ್ದು, ಅವ್ರು ಅಲ್ಲಿಂದಲೇ ಅಪರಾಧ ಚಟುವಟಿಕೆ ಮಾಡಲಾಗ್ತಿರೋ ಬಗ್ಗೆ ಮಾಹಿತಿ ಹಿನ್ನಲೆ ದಾಳಿ ನಡೆಸಲಾಗಿದೆ. ತನಿಖೆಯ ದೃಷ್ಟಿಯಿಂದ ಕೆಲ ವಿಷಯಗಳನ್ನ ಗೌಪ್ಯವಾಗಿಡಬೇಕಾಗುತ್ತೆ‌‌. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತೆ ಎಂದು ತಿಳಿಸಿದ್ದಾರೆ.

Intro:ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರ ದಾಳಿ
ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಜೈಲಿನಲ್ಲಿ ಪರಿಶೀಲನೆ ಬುಲೆಟಿನ್ ಸ್ಕ್ರಿಪ್ಟ್
ಬೈಟ್ ಕೊಡ್ತಾರೆ ಮತ್ತೆ ಅಪ್ಡೇಟ್ ಮಾಡ್ತಿನಿ

ಪರಪ್ಪನ ಅಗ್ರಹಾರ ವಿಶುವಲ್ ಬಳಸಿ
ಮತ್ತೆ ಬೈಟ್ ವಿಶುವಲ್ ಕೊಡ್ತಿನಿ

ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರು‌ ದಾಳಿ ನಡೆಸಿದ್ದಾರೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ದಾಳಿ ವೇಳೆ ಕೆಲ ಮೊಬೈಲ್​, ಸಿಮ್​ ಕಾರ್ಡ್​ಗಳು ವಶಕ್ಕೆ ಪಡೆದಿದ್ದಾರೆ.

ಇನ್ನು ಜೈಲಿನಲ್ಲಿರುವ ಖೈದಿಗಳು ಜೈಲಿನಲ್ಲೇ ಕುಳಿತು ಹಫ್ತಾ ವಸೂಲಿ ನಡೆಸಿ ಹೊರಗಿನ ಪ್ರಪಂಚದ ರೌಡಿ ಚಟುವಟಿಕೆ ಹೊಂದಿದ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದರು. ಹೀಗಾಗಿ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಬಂದಿದ್ದು
ಸಿಸಿಬಿ ಎಸಿಪಿಗಳ ನೇತೃತ್ವದಲ್ಲಿ ಜೈಲಿನಲ್ಲಿ ಪರಿಶೀಲನೆ ಮುಂದುವರೆದಿದೆ.Body:KN_BNG_02_JAIL_7204498Conclusion:KN_BNG_02_JAIL_7204498
Last Updated :Oct 9, 2019, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.