ETV Bharat / state

ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಮೇಲ್ ಐಡಿ ಬಳಕೆದಾರನ ಮಾಹಿತಿ ಕೋರಿದ ತನಿಖಾಧಿಕಾರಿಗಳು

author img

By ETV Bharat Karnataka Team

Published : Dec 3, 2023, 12:34 PM IST

Bomb threat to School case: ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ನಡೆಸುತ್ತಿದೆ.

Bomb threat to School case
ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ

ಬೆಂಗಳೂರು: ಶಾಲೆಗಳಿಗೆ ಬಾಂಬ್​ ಬೆದರಿಕೆ ಇ-ಮೇಲ್ ರವಾನೆಯಾದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಸೈಪ್ರಸ್ ಮೂಲದ ಮೇಲ್ ಸರ್ವಿಸ್ ಪ್ರೊವೈಡರ್ ಕಂಪನಿಯಿಂದ ಮಾಹಿತಿ ಕೋರಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡದಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ಬೆದರಿಕೆ ಸಂದೇಶ ಕಳುಹಿಸಲಾದ ಸೈಪ್ರಸ್ ಮೂಲದ ಮೇಲ್ ಸರ್ವಿಸ್ ಪ್ರೊವೈಡರ್​ನಿಂದ ಅದರ ಬಳಕೆದಾರರ ಮಾಹಿತಿ ಕೋರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮೈಕಾ, ಕೌಲಾಲಂಪುರ್ ಬಳಿಕ ಬೆಂಗಳೂರಿನಲ್ಲಿ ಬೆದರಿಕೆ: ಎರಡು ಪ್ರತ್ಯೇಕ ಐಡಿಗಳಿಂದ ಮೇಲ್ ಕಳುಹಿಸಲಾಗಿದ್ದು, ಅವೆರಡೂ ಸಹ ಸೈಪ್ರಸ್ ಮೂಲದ ಬೀಬಲ್.ಕಾಮ್ ಎಂಬ ಸರ್ವಿಸ್ ಪ್ರೊವೈಡರ್​ನಲ್ಲಿ ನೋಂದಣಿಯಾಗಿವೆ. ಆದ್ದರಿಂದ ಅವುಗಳ ಬಳಕೆದಾರರು ಯಾರು ಎಂಬುದರ ಕುರಿತು ಮಾಹಿತಿ ಕೋರಲಾಗಿದೆ. ಕಳೆದ ನವೆಂಬರ್ 12ರಂದು ಸೈಪ್ರಸ್ ಮೂಲದ ಬೀಬಲ್.ಕಾಮ್ ಬಳಸಿ ಜಮೈಕಾದ 70 ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ರವಾನಿಸಲಾಗಿತ್ತು. ನವೆಂಬರ್ 23ರಂದು ಬೀಬಲ್ ಸರ್ವಿಸ್ ಪ್ರೊವೈಡರ್ ಮೂಲಕವೇ ಮಲೇಷ್ಯಾದ ರಾಜಧಾನಿ ಕೌಲಾಲಂಪುರ್​ನ 19 ಇಂಟರ್​ನ್ಯಾಷನಲ್ ಶಾಲೆಗಳಿಗೆ ಬಾಂಬ್ ಬೆದರಿಕೆಯ ಸಂದೇಶ ರವಾನಿಸಲಾಗಿತ್ತು.

ಡಿಸೆಂಬರ್ 1 ರಂದು ಬೆಂಗಳೂರು ನಗರದ 48 ಹಾಗೂ ಗ್ರಾಮಾಂತರ ವಿಭಾಗದ 20 ಶಾಲೆಗಳೂ ಸೇರಿದಂತೆ ಒಟ್ಟು 68 ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇ–ಮೇಲ್‌ ರವಾನೆಯಾಗಿದ್ದವು. ಬಳಿಕ ಪರಿಶೀಲಿಸಿದಾಗ ಇದೊಂದು ಹುಸಿ ಬೆದರಿಕೆ ಎಂಬುದು ಬಯಲಾಗಿತ್ತು.

ಇದನ್ನೂ ಓದಿ: ಶಾಲೆಗಳಿಗೆ ಬಾಂಬ್​ ಬೆದರಿಕೆ ಇ- ಮೇಲ್ ಪ್ರಕರಣ​: ಇಂದು ಎಂದಿನಂತೆ ಕಾರ್ಯನಿರ್ವಹಿಸಿದ ಶಾಲೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.