ETV Bharat / state

ಯಮ ಸ್ವರೂಪಿ ಬಿಎಂಟಿಸಿ ಬಸ್​ಗೆ ಇಬ್ಬರು ಬಲಿ: ಡಿಪೋ ಮ್ಯಾನೇಜರ್​ ಸಸ್ಪೆಂಡ್​

author img

By

Published : Jan 6, 2020, 5:37 PM IST

ನಗರದ ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಬಸ್​ ಬ್ರೇಕ್​ ಫೆಲ್ಯೂರ್​ ಆಗಿ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್​ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

bus accident
ಬಿಎಂಟಿಸಿ ಬಸ್​ ಅಪಘಾತ

ಬೆಂಗಳೂರು: ನಗರದ ಸುಮ್ಮನಹಳ್ಳಿ ಬಳಿ ಇಂದು ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಎಂಟಿಸಿ ಬಸ್​ನ ಬ್ರೇಕ್ ವಿಫಲಗೊಂಡ ಹಿನ್ನೆಲೆಯಲ್ಲಿ ಸರಣಿ ಅಪಘಾತ ನಡೆದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಂಟಿಸಿ ಎಂ.ಡಿ ಶಿಖಾ

ಘಟನೆಯಿಂದ ಒಟ್ಟು10 ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದು, 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಾಗಳಾಗಿವೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಯಲ್ಲಿ‌ ದಾಖಲಿಸಲಾಗಿದೆ.

ಸದ್ಯ ಅಪಘಾತದಿಂದ ಮೃತಪಟ್ಟವರಿಗೆ ಅಂತ್ಯಸಂಸ್ಕಾರದ ಖರ್ಚಿಗಾಗಿ 25ಸಾವಿರ ಪರಿಹಾರ ನೀಡಿದ್ದೀವಿ ಎಂದು ಬಿಎಂಟಿಸಿ ಎಂ.ಡಿ. ಶಿಖಾ ಅವರು ತಿಳಿಸಿದ್ದಾರೆ. ಗಾಯಾಳುಗಳಿಗೆ ಬಿಎಂಟಿಸಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತನಿಖೆಯ ನಂತರ ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಾಗಿ ತಿಳಿಸಿದರು.

ಅಲ್ಲದೇ ಪ್ರಾಥಮಿಕ ವರದಿ ಮಾಡಿ ಸಂಬಂಧಪಟ್ಟ ಡಿಪೋ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಸೂಪರಿಂಡೆಂಟ್ ರನ್ನ ಸಸ್ಪೆಂಡ್ ಮಾಡಿದ್ದೀವಿ. ಬಸ್​ಗಳನ್ನು ಪ್ರತಿನಿತ್ಯ ತಪಾಸಣೆ ‌ಮಾಡ್ತೀವಿ, ಡ್ರೈವರ್​ಗಳು‌ ಬಸ್ ಫಾಲ್ಟ್ ಬಗ್ಗೆ ‌ವರದಿ ನೀಡ್ತಾರೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳತ್ತೇವೆ ಎಂದು ತಿಳಿಸಿದರು.

Intro:BmtcBody:ಬಿಎಂಟಿಸಿ ಬಸ್ ಮತ್ತೆ ಯಮಸ್ವರೂಪಿಯಾಗಿದೆ,ನಗರದ ಸುಮ್ಮನಹಳ್ಳಿ ಬಳಿ ಸರಣಿ ಅಪಘಾತವಾಗಿದ್ದು ಘಟನೆಯಲ್ಲಿ ಇಬ್ರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ, ಒಟ್ಟು10 ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದು 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಾಗಳಾಗಿವೆ.ಬಸ್ ಬ್ರೇಕ್ ಫೇಲ್ ಆಗಿದ್ದು, ಬೆಳಗ್ಗೆ 35ನೆ ಡಿಪೋ ವಿಭಾಗದ ಬಸ್ ಅಪಘಾತ ಆಗಿದೆ, ಗಾಯಾಳುಗಳನ್ನ ಲಕ್ಷ್ಮಿ ಆಸ್ಪತ್ರೆಯಲ್ಲಿ‌ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ‌.

ಸದ್ಯ ಮೃತಪಟ್ಟವರಿಗೆ ಅಂತ್ಯಸಂಸ್ಕಾರದ ಕರ್ಚಿಗಾಗಿ 25ಸಾವಿರ ಪರಿಹಾರ ನೀಡಿದ್ದೀವಿ ಎಂದು ಬಿಎಂಟಿಸಿ ಎಂ.ಡಿ ಶಿಕಾ ಅವರು ತಿಳಿಸಿದ್ದಾರೆ,ಗಾಯಾಳುಗಳಿಗೆ ಬಿಎಂಟಿಸಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ, ಅಪಘಾತದ ತನಿಖೆಯ ನಂತರ ಸತ್ತವರ ಕುಟುಂಬಕ್ಕೆ ಪರಿಹಾರ ಕೊಡುವುದಾಗಿ ತಿಳಿಸಿದರರು.

ಪ್ರಾಥಮಿಕ ವರದಿ ಮಾಡಿ ಸಂಬಂಧ ಪಟ್ಟ ಡಿಫೊ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ರನ್ನ ಸಸ್ಪೆಂಡ್ ಮಾಡಿದ್ದೀವಿ,ಬಸ್ ಗಳನ್ನು ಪ್ರತಿನಿತ್ಯ ತಪಾಸಣೆ ‌ಮಾಡ್ತೀವಿ ,ಡ್ರೈವರ್ ಗಳು‌ ಬಸ್ ಪಾಲ್ಟ್ ಬಗ್ಗೆ ‌ವರದಿ ನೀಡ್ತಾರೆ,ತನಿಖೆ ಬಳಿಕ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳತ್ತೀವಿ ಎಂದರು.Conclusion: byte attached
ETV Bharat Logo

Copyright © 2024 Ushodaya Enterprises Pvt. Ltd., All Rights Reserved.