ETV Bharat / state

ಸಿಎಂ ಸಿದ್ದರಾಮಯ್ಯ ’ಸುಳ್ಳು‘ ಬಜೆಟ್ ಮಂಡಿಸಿದ್ದಾರೆ - ಆರ್.ಅಶೋಕ್ ಟೀಕೆ.. ಆಯವ್ಯಯದ ಬಗ್ಗೆ ಇನ್ನಿತರ ನಾಯಕರು ಹೇಳಿದ್ದೇನು?

author img

By

Published : Jul 7, 2023, 3:24 PM IST

bjp-leaders-reaction-on-congress-government-budget
ಸಿಎಂ ಸಿದ್ದರಾಮಯ್ಯ ನಾಲಾಯಕ್ ಬಜೆಟ್ ಮಂಡಿಸಿದ್ದಾರೆ - ಆರ್.ಅಶೋಕ್, ಆಯವ್ಯದ ಬಗ್ಗೆ ಇತರೆ ಜಿಜೆಪಿ ನಾಯಕರು ಹೇಳಿದ್ದೇನು?

ಸಿದ್ದರಾಮಯ್ಯ ಅವರು ಮಂಡಿಸಿದ ಆಯವ್ಯಯ ಸುಳ್ಳು, ಮೋಸದ ಬಜೆಟ್​ ಎಂದು ಮಾಜಿ ಸಚಿವ ಆರ್​ ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ನಾಲಾಯಕ್ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಂಡಿಸಿದ ಆಯವ್ಯಯ ಸುಳ್ಳು, ಮೋಸ, ಮೇಕೇದಾಟಿಗೆ 10 ಸಾವಿರ, ಮಹದಾಯಿಗೆ 10 ಸಾವಿರ ಕೋಟಿ ಇಡ್ತೀನಿ ಅಂದ್ರು. ಆದರೆ ಇಡೀ ಆಯವ್ಯಯ ಪುಸ್ತಕ ನೋಡಿದರೆ ಎಲ್ಲೂ ಹಣ ಇಟ್ಟಿಲ್ಲ ಎಂದು ಕಿಡಿಕಾರಿದರು.

ನರೇಂದ್ರ ಮೋದಿ ಬೈಯ್ಯೋದು, ಬೊಮ್ಮಾಯಿ ಬೈಯ್ಯೋದು ಅಷ್ಟೇ. ಒಂದು ರಾಜ್ಯ ಅಭಿವೃದ್ಧಿ ಆಗಬೇಕಾದರೆ, ಹಣ ಖರ್ಚು ಮಾಡಬೇಕು. ಬೆಂಗಳೂರು ಅಭಿವೃದ್ಧಿಗೆ ಏನೂ ಇಟ್ಟಿಲ್ಲ. ಬೆಂಗಳೂರು ಅತಿ ಹೆಚ್ಚು ಟ್ಯಾಕ್ಸ್ ನೀಡುತ್ತೆ. ಈ ಸರ್ಕಾರ ಪೊಳ್ಳು ಭರವಸೆ ಜಾರಿಗೆ ತರಲು ಬಜೆಟ್​ ಮಾಡಿದೆ ಬಿಟ್ರೆ ಏನೂ ಇಲ್ಲ. ನೀರಾವರಿ ಇಲಾಖೆಯಲ್ಲಿ ಬಿಜೆಪಿ ಮಾಡಿರೋ ಯೋಜನೆ ಜಾರಿಗೆ ತರಲು ಆರು ವರ್ಷ ಬೇಕು ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವಧಿಯಲ್ಲಿ ಇದ್ದ ಬಾಕಿ ಕಾಮಗಾರಿ ತೋರಿಸಿಲ್ಲ. ಅದೆಲ್ಲ ತೋರಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕಾಗೆ ಹಾರಿಸುವ ಬಜೆಟ್ ಆಗಿದೆ - ಸುನೀಲ್ ಕುಮಾರ್: ಬಜೆಟ್​ ಕುರಿತು ವಿಧಾನಸೌಧದಲ್ಲಿ ಮಾಜಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, 128 ಪುಟದ ಈ ಬಜೆಟ್​ನ್ನು ಒಂದು ಲೈನ್ ನಲ್ಲಿ ಹೇಳುವುದಾದರೆ.‌ ಕೇಂದ್ರ ಸರ್ಕಾರವು ಏನೂ ಕೊಡಲಿಲ್ಲ. ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಮುಂದೆ ನಾನೂ ಏನೂ ಮಾಡಲು ಆಗುವುದಿಲ್ಲ ಎಂಬಂತಿದೆ. ಬಜೆಟ್ ಎಂದರೆ ಆರ್ಥಿಕ‌ ಮುನ್ನೋಟ ಆಗಿದೆ. ಇದರಲ್ಲಿ ರಾಜಕೀಯದ ಹಿನ್ನೋಟ ಇದೆ ಎಂದು ಟೀಕಿಸಿದರು.

ಇದು ಕಾಗೆ ಹಾರಿಸುವ ಬಜೆಟ್ ಆಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಹೇಳುವ ಭಾಷಣವನ್ನು ಬಜೆಟ್​ನಲ್ಲಿ ಹೇಳಿದ್ದಾರೆ. ಕನಸು ಇಲ್ಲ ದಾರಿಯೂ ಇಲ್ಲ ಎಂಬ ಬಜೆಟ್ ಇದಾಗಿದೆ. ಎನ್​ಇಪಿಯನ್ನು ಕೈ ಬಿಡುತ್ತೇವೆ ಎಂದಿದ್ದಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಅಲುಗಾಡಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ಭಾಗಕ್ಕೂ ನ್ಯಾಯ ಒದಗಿಸದ ವಿಚಿತ್ರ ಬಜೆಟ್ ಇದಾಗಿದೆ. ಬಜೆಟ್ ಮೇಲಿನ ಚರ್ಚೆ ವೇಳೆ ಇದೆಲ್ಲವನ್ನೂ ಪ್ರಸ್ತಾಪಿಸುತ್ತೇವೆ. ಹಿಂದಿನ ಸರ್ಕಾರದ ಯೋಜನೆಗಳಿಗೆ ಮರು ನೇಮಕ ಮಾಡುವ ಕೆಲಸ ಆಗಿದೆ. ಕಾಂಗ್ರೆಸ್ ಯಾವತ್ತೂ ಅಲ್ಪಸಂಖ್ಯಾತರಿಗೆ ಒತ್ತು ನೀಡುವ ಕೆಲಸ ಮಾಡುತ್ತಾರೆ‌ ಎಂದು ಕಿಡಿಕಾರಿದರು.

ಬಜೆಟ್ ನಿಂದ ಡಿಕೆಶಿಗೂ ನಿರಾಶೆ ಆಗಿದೆ - ವಿಜಯೇಂದ್ರ: ವಿಧಾನಸೌಧದಲ್ಲಿ ಬಜೆಟ್​ ಕುರಿತು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಬಜೆಟ್ ನಿಂದ ನಿರಾಶೆ ಆಗಿರೋದು ಕರ್ನಾಟಕ ಮಾತ್ರವಲ್ಲ ಡಿಕೆಶಿ ಅವರಿಗೂ ನಿರಾಶೆ ಆಗಿದೆ. ಡಿಕೆಶಿ ಅವರು ಚುನಾವಣೆ ಮೊದಲು ಪಾದಯಾತ್ರೆ ಮಾಡಿದ್ರು. ಮೇಕೇದಾಟಿಗೆ 3 ಸಾವಿರ, ಮಹದಾಯಿಗೆ 10 ಕೋಟಿ ಮೀಸಲು ಅಂತ ಹೇಳಿದ್ರು. ಆದರೆ ಹಣ ಮೀಸಲಿಟ್ಟಿಲ್ಲ. ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಟೀಕಿಸಿದರು.

ಆಶಾ, ಅಂಗನವಾಡಿ ಕಾರಗಯಕರ್ತೆಯರಿಗೆ ಹಣ ಮೀಸಲಿಟ್ಟಿಲ್ಲ. ಇಡೀ ಬಜೆಟ್ ಪೊಲಿಟಿಕಲ್ ಸ್ಟೇಟ್ಮೆಂಟ್ ಅಂದ್ರೆ ತಪ್ಪಾಗಲ್ಲ. ನಿಜವಾಗಲು ಇದು ದುರಾದೃಷ್ಟ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ‌. ಬಿಜೆಪಿ ಆರ್ಥಿಕ ಶಿಸ್ತು ಕಾಪಾಡದಿದ್ರೆ ಇವತ್ತು ಕಷ್ಟ ಆಗ್ತಿತ್ತು. ಬಂಡವಾಳ ಹೂಡಿಕೆಯಲ್ಲೂ 9.8ಲಕ್ಷ ಕೋಟಿ MOU ಆಗಿದೆ. ಭ್ರಷ್ಟಾಚಾರ ಅಂತ ಆರೋಪಿಸಿ ಗೂಬೆ ಕೂರಿಸಿದ್ದಾರೆ. ಭ್ರಷ್ಟಾಚಾರ ನಡೆದಿದ್ರೆ GST ಹೆಚ್ಚಳವಾಗ್ತಿತ್ತಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಲೆಕ್ಕ: ಆದಾಯ ಸಂಗ್ರಹಕ್ಕೆ ಹೆಚ್ಚು ಒತ್ತು, ₹85,818 ಕೋಟಿ ಸಾಲದ ಮೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.