ETV Bharat / state

Big Bull: ಕೃಷಿಮೇಳದಲ್ಲಿ ₹1 ಕೋಟಿ ಮೌಲ್ಯದ ಹೋರಿ 'ಕೃಷ್ಣ'ನ ನೋಡಲು ಮುಗಿಬಿದ್ದ ಜನ

author img

By

Published : Nov 11, 2021, 9:15 PM IST

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಿಂದ ಒಡೆಯನ ಸಹಿತ ಬಂದಿದ್ದ 'ಕೃಷ್ಣ' ಉದ್ದನೆಯ ಹಾರ ಧರಿಸಿ ಅಲಂಕಾರಗೊಂಡಿದ್ದ. ಅಚ್ಚರಿಯೆಂದರೆ, ಈತನ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿಗೂ ಹೆಚ್ಚು!

big-bull-exhibition-in-bengalore
ಹೋರಿ ಪ್ರದರ್ಶನ

ಬೆಂಗಳೂರು: ನಗರದ ಜಿಕೆವಿಕೆ ಆವರಣದಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ (Bengaluru Agricultural Fair) ಅಳಿವಿನಂಚಿನಲ್ಲಿರುವ ಹಳ್ಳಿಕಾರ್​ ತಳಿಯ ಹೋರಿಯನ್ನು ಪ್ರದರ್ಶನಕ್ಕಿಡಲಾಗಿತ್ತು.

ಬಹಳ ವಿಶೇಷವಾದ ತಳಿಯಾದ್ದರಿಂದ ಜಿಟಿಜಿಟಿ ಮಳೆಯ ನಡುವೆಯೂ ಜನ 'ಕೃಷ್ಣ' (ಹೋರಿ)ನನ್ನು ಬೆರಗುಗಣ್ಣಿನಿಂದ ನೋಡಿ ಖುಷಿಪಟ್ಟರು.


ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಿಂದ ಒಡೆಯನಸಹಿತ ಬಂದಿದ್ದ 'ಕೃಷ್ಣ' ಉದ್ದನೆಯ ಹಾರ ಧರಿಸಿ ಅಲಂಕಾರಗೊಂಡಿದ್ದ. ಈತನ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿಗೂ ಹೆಚ್ಚು.

'ದಕ್ಷಿಣ ಭಾರತದಲ್ಲೇ ಹೋರಿಗಳ ಮೂಲ ತಳಿ ಈ ಹಳ್ಳಿಕಾರ್. ಸದ್ಯ ಇದು ನಶಿಸಿ ಹೋಗುತ್ತಿರುವ ತಳಿಯಾಗಿದೆ. ಕೃಷ್ಣನನ್ನು ಉತ್ತಮ ಗುಣಮಟ್ಟದ ಬಿತ್ತನೆಗಾಗಿ ಬಳಸಲಾಗುತ್ತದೆ. ಪ್ರೌಢಾವಸ್ಥೆಗೆ ಬಂದ ನಂತರ ಸಂತಾನೋತ್ಪತ್ತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಹಳ್ಳಿಕಾರ್ ಕರುಗಳು ಹುಟ್ಟಲು ಸಾಧ್ಯ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದಲೂ ಬೇಡಿಕೆ ಇದೆ. ಹೀಗಾಗಿ, ಕೃಷ್ಣನ ಬೆಲೆ ಕೋಟಿಗಟ್ಟಲೆ' ಎಂದು ಹೋರಿಯ ಮಾಲೀಕ ಬೋರೇಗೌಡ ತಿಳಿಸಿದರು.

ಕೃಷ್ಣ ಹೋರಿಗೆ 3 ವರ್ಷ 8 ತಿಂಗಳು ವಯಸ್ಸಾಗಿದೆ. ಇದು 15-20 ವರ್ಷ ಬದುಕಬಲ್ಲದು. ತಿಂಗಳಿಗೆ ಎಂಟು ಬಾರಿ ಸಂತಾನೋತ್ಪತ್ತಿಗೆ ಇದರಿಂದ ವೀರ್ಯಾಣು ಸಂಗ್ರಹಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಮೊದಲನೇ ದಿನದ ಕೃಷಿ ಮೇಳಕ್ಕೆ ಮಳೆರಾಯನ ಅಡ್ಡಿ: ವ್ಯಾಪಾರಿಗಳಲ್ಲಿ ನಿರಾಶೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.