ETV Bharat / state

Weekend Curfew: ಸಾರ್ವಜನಿಕ ಸೇವೆಗೆ ಲಭ್ಯವಿರುವ ಕೆಎಸ್ಆರ್​ಟಿಸಿ ಬಸ್​ಗಳೂ ಖಾಲಿ ಖಾಲಿ

author img

By

Published : Jan 8, 2022, 11:28 AM IST

Updated : Jan 8, 2022, 12:02 PM IST

Weekend Curfew in Bengaluru: ಕೋವಿಡ್​ ಹಾಗೂ ಒಮಿಕ್ರಾನ್​ ಹರಡದಂತೆ ಜನಸಂದಣಿ ನಿಯಂತ್ರಿಸಲು ವಾರಾಂತ್ಯದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ಕೆಎಸ್​​ಆರ್​ಟಿಸಿ ಬಸ್​ಗಳ ಸಂಚಾರವಿದ್ದು,​​ ಜನರಿಲ್ಲದೇ ಖಾಲಿ ಖಾಲಿಯಾಗಿ ನಿಲ್ದಾಣದಿಂದ ತೆರಳುತ್ತಿದ್ದ ದೃಶ್ಯ ಕಂಡು ಬಂತು.

Weekend Curfew
ಬೆಂಗಳೂರು ವಾರಾಂತ್ಯದ ಕರ್ಫ್ಯೂ

ಬೆಂಗಳೂರು: ರಾಜಧಾನಿಯ ಹೃದಯಭಾಗ ಮೆಜೆಸ್ಟಿಕ್​ನಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎದುರಿಗೆ ರೈಲ್ವೆ ನಿಲ್ದಾಣ ಹಾಗೂ ಪಕ್ಕದಲ್ಲೇ ಮೆಟ್ರೋ ರೈಲು ಸೇವೆ ಇದ್ದು, ಈ ನಾಲ್ಕು ಸಾರಿಗೆ ಸೇವೆಗಳಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಆದರೆ, ಕೋವಿಡ್​ ವಾರಾಂತ್ಯದ ನಿಷೇಧಾಜ್ಞೆ ಹೇರಿಕೆ ಹಿನ್ನೆಲೆಯಲ್ಲಿ ಮೆಜೆಸ್ಟಿಕ್​ ಜನ ಹಾಗೂ ಸಾರಿಗೆ ಸಂಚಾರವಿಲ್ಲದೇ ಬಣಗುಡುತ್ತಿದೆ. ಸದ್ಯ ಲಭ್ಯವಿರುವ ಕೆಎಸ್​​ಆರ್​ಟಿಸಿ ಬಸ್​ಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.

ಮಜೆಸ್ಟಿಕ್​ನ ಬಿಎಂಟಿಸಿ ಘಟಕದಲ್ಲಿ ಬಸ್​ಗಳು ಕೇವಲ ಅಗತ್ಯ ಸೇವೆಗಷ್ಟೇ ಮೀಸಲಾಗಿದ್ದು, ಸಾರ್ವಜನಿಕರ ಸೇವೆಗೆ ನಿಷೇಧವಿದೆ. ಇತ್ತ ಕೆಎಸ್​​ಆರ್​ಟಿಸಿ ಬಸ್​ ಸಂಚಾರ ಇದ್ದರೂ ಬಸ್​ಗಳು​​ ಜನರಿಲ್ಲದೇ ಖಾಲಿ ಖಾಲಿಯಾಗಿ ನಿಲ್ದಾಣದಿಂದ ತೆರಳುತ್ತಿದ್ದ ದೃಶ್ಯ ಕಂಡು ಬಂತು.

ಕೆಎಸ್​ಆರ್​ಟಿಸಿ ಬಸ್​ಗಳೂ ಖಾಲಿ ಖಾಲಿ

ಶೇ. 10ರಷ್ಟು ಬಸ್ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ರೈಲ್ವೆ ಪ್ರಯಾಣಿಕರು ಮಾತ್ರ ಬಸ್ ಅವಲಂಬಿಸಿದ್ದಾರೆ. ಹೀಗಾಗಿ ಮೆಜೆಸ್ಟಿಕ್​ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಬೆಳಗಿನ ಜಾವ ಸುಮಾರು 4 ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್ ಸಂಚಾರ ಇರುತ್ತಿತ್ತು. ಆದರೆ, ಇಂದು ರಾಜಧಾನಿಯಲ್ಲಿ ಕೇವಲ 500 ಬಸ್ ಮಾತ್ರ ಸಂಚರಿಸುತ್ತಿವೆ.

ಸಿಬ್ಬಂದಿಗೆ ಇರುವ ಷರತ್ತುಗಳೇನು?

  • ಕರ್ತವ್ಯ ನಿರ್ವಹಿಸುವಾಗ ಚಾಲನಾ ಸಿಬ್ಬಂದಿ ಮುಖಗವಸು ಧರಿಸುವುದು.
  • ಚಾಲಕನು ಸ್ಟಾನಿಟೈಸರ್‌ ಬಳಸಿಕೊಂಡು, ಶುಚಿತ್ವ ಕಾಪಾಡುವುದು.
  • ಬಸ್​ನಲ್ಲಿ ಆಸನಗಳು ಖಾಲಿಯಿದ್ದಾಗ ಮಾತ್ರ ಪ್ರಯಾಣಿಕರಿಗೆ ಅನುಮತಿಸುವುದು.
  • ನಿಗದಿತ ನಿಲುಗಡೆಗಳಲ್ಲೇ ಪ್ರಯಾಣಿಕರನ್ನು ಬಸ್​ಗೆ ಹತ್ತಿಸಿಕೊಳ್ಳುವುದು, ಇಳಿಸುವುದು.
  • ಎಲ್ಲಾ ಪ್ರಯಾಣಿಕರ ಗುರುತಿನ ಚೀಟಿ ಪರಿಶೀಲಿಸುವುದು.

ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಕ್ರಮಗಳು:

  1. ಪ್ರಯಾಣಿಕರು ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಕಡ್ಡಾಯವಾಗಿ ಧರಿಸುವುದು.
  2. ಮಾಸ್ಕ್​​ ಧರಿಸದವರಿಗೆ ಬಸ್​​ನಲ್ಲಿ ಪ್ರಯಾಣಿಸಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು.
  3. ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರು ಕ್ಯೂನಲ್ಲೇ ಬಸ್​​ ಹತ್ತಬೇಕು.
  4. ಜ್ವರ, ಇತರ ಅನಾರೋಗ್ಯವಿದ್ದರೆ ಬಸ್​​ನಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ.

ಇದನ್ನೂ ಓದಿ: Weekend Curfew: ನಿಷೇಧಾಜ್ಞೆಯಿಂದ ಬಿಕೋ ಎನ್ನುತ್ತಿವೆ ಬೆಂಗಳೂರಿನ ರಸ್ತೆಗಳು.. ಉಲ್ಲಂಘಿಸಿದರೆ ಕಟ್ಟನಿಟ್ಟಿನ ಕ್ರಮ

Last Updated : Jan 8, 2022, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.