ETV Bharat / state

COVID Vaccination: ರಾಜ್ಯದಲ್ಲಿ​ ಯಾವ ಜಿಲ್ಲೆ ಫಸ್ಟ್​​, ಯಾವುದಕ್ಕೆ ಕೊನೆ ಸ್ಥಾನ​?

author img

By

Published : Jun 26, 2021, 2:03 PM IST

ಮಹಾಮಾರಿಯನ್ನು ಮಟ್ಟ ಹಾಕಲು ರಾಜ್ಯದಲ್ಲೂ ವ್ಯಾಕ್ಸಿನೇಷನ್​​ ನಡೆಯುತ್ತಿದ್ದು ಆದ್ಯತೆ ಮೇರೆಗೆ ಲಸಿಕೆ ಕೊಡಲಾಗುತ್ತಿದೆ. ಕೋವಿಡ್ ವ್ಯಾಕ್ಸಿನೇಷನ್​​​ ಡ್ರೈವ್​​ನಲ್ಲಿ ಹಾವೇರಿ ಜಿಲ್ಲೆ ಹಿಂದುಳಿದಿದ್ದು, ಮೊದಲ ಸ್ಥಾನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಇದೆ.

bangalore is in first place in Covid Vaccination Drive
ಕೋವಿಡ್ ವ್ಯಾಕ್ಸಿನೇಶನ್​​​ ಡ್ರೈವ್

ಬೆಂಗಳೂರು: ದೇಶಕ್ಕೆ ಕೊರೊನಾ ಸೋಂಕು ಕಾಲಿಟ್ಟು ಎಲ್ಲೆಡೆ ಆವರಿಸಿದಾಗ ಅದ್ಯಾವಾಗ ಲಸಿಕೆ ಸಿಗುತ್ತಪ್ಪಾ ಅಂತ ಜನರು ಕಾಯುತ್ತಿದ್ದರು. ಅದರಂತೆ ವರ್ಷದ ಆರಂಭದಲ್ಲಿ ಸೋಂಕಿಗೆ ಲಸಿಕೆ ಸಿದ್ಧವಾಗಿ ಎಲ್ಲೆಡೆ ಲಸಿಕಾ ಅಭಿಯಾನ ಉಚಿತವಾಗಿ ನಡೆಯುತ್ತಿದೆ. ರಾಜ್ಯದಲ್ಲೂ ವ್ಯಾಕ್ಸಿನೇಷನ್​​ ನಡೆಯುತ್ತಿದ್ದು ಆದ್ಯತೆ ಮೇರೆಗೆ ಲಸಿಕೆ ಕೊಡಲಾಗುತ್ತಿದೆ. ಕೋವಿಡ್ ವ್ಯಾಕ್ಸಿನೇಶನ್​​​ ಡ್ರೈವ್​​ನಲ್ಲಿ ಹಾವೇರಿ ಜಿಲ್ಲೆ ಹಿಂದುಳಿದಿದ್ದು, ಮೊದಲ ಸ್ಥಾನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಇದೆ.

Covid Vaccination Coverage
ಕೋವಿಡ್ ವ್ಯಾಕ್ಸಿನೇಷನ್ ಕವರೇಜ್

ಕೊರೊನಾವನ್ನು ನಿಯಂತ್ರಿಸಲು ದೇಶಾದ್ಯಂತ ಜನವರಿ 16 ರಿಂದ ಕೋವಿಡ್ ಲಸಿಕಾಭಿಯಾನ ಪ್ರಾರಂಭಿಸಲಾಯಿತು. ಮೊದಲ ಹಂತವಾಗಿ ಕೊರೊನಾ ವಾರಿಯರ್ಸ್ ಅಂದರೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದ್ದು, ಬಳಿಕ ಫ್ರಂಟ್ ಲೈನ್ ವರ್ಕರ್ಸ್​ ಆದ ಪೊಲೀಸ್ ಸಿಬ್ಬಂದಿ, ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಲಾಗ್ತಿದೆ.‌ ಇದಾದ ನಂತರ ಮಾರ್ಚ್ 1 ರಿಂದ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಯಿತು. ಇದೀಗ 18 ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಲಸಿಕಾ ಅಭಿಯಾನ ಶುರುವಾಗಿದೆ.

Covid Vaccination Coverage
ಕೋವಿಡ್ ವ್ಯಾಕ್ಸಿನೇಷನ್ ಕವರೇಜ್

ಆದರೆ ರಾಜ್ಯದ ಹಲವು ಜಿಲ್ಲೆಗಳು ಲಸಿಕಾ ಅಭಿಯಾನದಲ್ಲಿ ಶೇ. 40 ರಷ್ಟು ಕೂಡ ಸಾಧಿಸಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರ ಶೇ. 50ರಷ್ಟು ಲಸಿಕಾ ಅಭಿಯಾನ ಪೂರೈಸಿದ್ದು, ಉಳಿದಂತೆ ಹಲವು ಜಿಲ್ಲೆಗಳು ಶೇ. 20-30% ರ ಅಸುಪಾಸಿನಲ್ಲಿವೆ. ಇತ್ತ ಕೊರೊನಾ ಮೂರನೇ ಅಲೆಯು ಅಪ್ಪಳಿಸುವ ಸಾಧ್ಯತೆ ಕುರಿತು ತಜ್ಞರು ಮಾಹಿತಿ ನೀಡಿದ್ದು, ಇದೀಗ ಪೂರ್ಣ ಪ್ರಮಾಣದಲ್ಲಿ ಲಸಿಕಾ ಅಭಿಯಾನವನ್ನು ಕೈಗೊಳ್ಳಬೇಕಿದೆ.

ಕೋವಿಡ್ ವ್ಯಾಕ್ಸಿನೇಷನ್ ಕವರೇಜ್

ಮೊದಲ ಡೋಸ್ ಪಡೆದವರು:

  • 18-44 ವರ್ಷ ವಯಸ್ಸು- 52,06,190.
  • 45 ವರ್ಷ ಮೇಲ್ಪಟ್ಟವರು- 1,06,11,739.
  • ಒಟ್ಟು - 1,73,63,581.

ಎರಡನೇ ಡೋಸ್ ಪಡೆದವರು:

  • 18-44 ವರ್ಷ ವಯಸ್ಸು- 45,688.
  • 45 ವರ್ಷ ಮೇಲ್ಪಟ್ಟವರು- 26,25,343.
  • ಒಟ್ಟು- 34,08,896.

ರಾಜ್ಯದಲ್ಲಿ ಒಟ್ಟಾರೆ ಈ ತನಕ 2,07,72,477 ಜನರಿಗೆ ಲಸಿಕೆಯನ್ನ ಹಾಕಲಾಗಿದೆ‌. ಇದರಲ್ಲಿ ಮೊದಲ ಡೋಸ್ ಲಸಿಕೆಯನ್ನು 1,73,63,581 ಮಂದಿ ಪಡೆದಿದ್ದು, ಎರಡನೇ ಡೋಸ್​ ಅನ್ನು 34,08,896 ಮಂದಿ ಪಡೆದಿದ್ದಾರೆ.

ಜಿಲ್ಲಾವಾರು ವ್ಯಾಕ್ಸಿನೇಷನ್‌ ಅಂಕಿ-ಅಂಶ

ಶೇ. 30 ರಷ್ಟು ದಾಟದ ಜಿಲ್ಲೆಗಳ ಪಟ್ಟಿ:

ಜಿಲ್ಲೆ- ಶೇಕಡಾವಾರು

1) ಹಾವೇರಿ- 18.14%.

2) ಕಲಬುರಗಿ- 18.31%.

3) ವಿಜಯಪುರ- 22.88%.

4) ಬೆಳಗಾವಿ - 22.93%.

5) ರಾಯಚೂರು- 23.36%.

6) ಯಾದಗಿರಿ- 24.12%.

7) ದಾವಣಗೆರೆ- 24.70%.

8) ಬೀದರ್ - 27.18%.

9) ಬಾಗಲಕೋಟೆ- 27.42%.

10) ಧಾರವಾಡ- 27.94%.

11) ಬಳ್ಳಾರಿ- 27.96%.

12) ಕೊಪ್ಪಳ- 28.91%.

13) ಚಾಮರಾಜನಗರ- 29.70%.

14) ಗದಗ- 29.94%.

15) ಶಿವಮೊಗ್ಗ- 30.53%.

16) ಚಿತ್ರದುರ್ಗ - 30.55%.

ಶೇ. 30ಕ್ಕಿಂತ ಹೆಚ್ಚು ಲಸಿಕಾಭಿಯಾನ ಪೂರೈಸಿದ ಜಿಲ್ಲೆಗಳು:

17) ಉಡುಪಿ- 31.11%.

18) ಚಿಕ್ಕಮಗಳೂರು - 32.41%.

19) ಹಾಸನ - 33.03%.

20) ಚಿಕ್ಕಬಳ್ಳಾಪುರ- 33.86%.

21) ಮಂಡ್ಯ- 33.92%.

22) ಉತ್ತರ ಕನ್ನಡ- 34.53%.

23) ಬೆಂಗಳೂರು ಗ್ರಾಮಾಂತರ- 35.09%.

24) ದಕ್ಷಿಣ ಕನ್ನಡ- 35.36%.

25) ಕೊಡಗು- 37.97%.

26) ಕೋಲಾರ- 38.59%.

27) ಮೈಸೂರು- 39.31%.

28) ರಾಮನಗರ- 40.12%.

29) ಉಡುಪಿ - 42.91%.

30) ಬೆಂಗಳೂರು- 57.59%

ಇದನ್ನೂ ಓದಿ: ದೆಹಲಿ ಪ್ರತಿಭಟನೆಗೆ ಬೆಂಬಲ.. ಬೆಂಗಳೂರಲ್ಲಿ ರೈತರನ್ನು ವಶಕ್ಕೆ ಪಡೆದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.