ETV Bharat / state

ನೌಕರರು, ಅಧಿಕಾರಿಗಳು ಆಸ್ತಿ ವಿವರ ಸಲ್ಲಿಕೆಗೆ ಮಾ. 31 ಡೆಡ್​ಲೈನ್​.. ಸುತ್ತೋಲೆ ಹೊರಡಿಸಿದ ಸರ್ಕಾರ

author img

By

Published : Feb 4, 2023, 7:15 AM IST

ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರಗಳನ್ನು ಮಾರ್ಚ್ 31ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

Representative image
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸರ್ಕಾರಿ ನೌಕರರು, ಅಧಿಕಾರಿಗಳು ಆಸ್ತಿ ವಿವರಗಳನ್ನು ಡಿಸೆಂಬರ್ 31ರ ಬದಲಿಗೆ ಮಾರ್ಚ್ 31ರೊಳಗೆ ಅಗತ್ಯ ದಾಖಲೆಗಳೊಂದಿಗೆ ಎಲ್ಲಾ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ನೌಕರರು ತಮ್ಮ ಚರ/ಸ್ಥಿರಾಸ್ತಿಯನ್ನು ವಿವರಗಳ ಬಗ್ಗೆ ಇನ್ನು ಪ್ರತಿ ವರ್ಷದ ಡಿಸೆಂಬರ್ 31ರ ಅಂತ್ಯಕ್ಕೆ ಸಲ್ಲಿಸುತ್ತಿದ್ದ ವಿವರಗಳನ್ನು ಇನ್ನು ಮುಂದೆ ಮಾರ್ಚ್ 31ರ ಅಂತ್ಯಕ್ಕೆ ಸಲ್ಲಿಸಬೇಕು. 2022ರ ಜನವರಿ 1 ರಿಂದ 2023 ರ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು 15 ತಿಂಗಳ ವಿವರಗಳನ್ನು ಏಪ್ರಿಲ್ ತಿಂಗಳಲ್ಲಿ ಸಲ್ಲಿಸಬೇಕು. ಮುಂದಿನ ಬಾರಿಯಿಂದ ಆಸ್ತಿ ಹೊಣೆಗಾರಿಕೆ ವಿವರಗಳನ್ನು ಪ್ರತಿ 12 ತಿಂಗಳಿಗೊಮ್ಮೆ ಆಯಾ ಅರ್ಥಿಕ ವರ್ಷದ ಏಪ್ರಿಲ್​ 1ರಿಂದ ಮಾರ್ಚ್ 31 ರವರೆಗೆ ವಿಳಂಬವಿಲ್ಲದೆ ಸಕಾಲದಲ್ಲಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಸುತ್ತೋಲೆ
ಸುತ್ತೋಲೆ

ಇದನ್ನೂ ಓದಿ: ಕಂದಾಯ ಅದಾಲತ್‌ ಕಾರ್ಯಕ್ರಮ ಡಿಸೆಂಬರ್ 31 ರ ವರೆಗೆ ವಿಸ್ತರಿಸಿ ಸರ್ಕಾರದ ಆದೇಶ

ಜೆಡಿಎಸ್ ಅಸಮಾಧಾನ: ದೇಶದ ಉನ್ನತ ನಾಗರಿಕ ಸೇವಾಧಿಕಾರಿಗಳನ್ನು ಪಾರದರ್ಶಕವಾಗಿ ಹಾಗೂ ತ್ವರಿತಗತಿಯಲ್ಲಿ ನೇಮಕ ಮಾಡುವಲ್ಲಿ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ ಸಿ) ಹೆಸರು ಗಳಿಸಿದೆ. ಆದರೆ, ಪೂರ್ವಭಾವಿ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ ಎಂದು ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ.

  • ಕಬ್ಬಿಣದ ಕಡಲೆ ಎಂದೇ ಈ ಪರೀಕ್ಷೆಯನ್ನು ಪರಿಗಣಿಸುವಾಗ, ಅಲ್ಲಿನ ಪ್ರಶ್ನೆಗಳನ್ನು ಕೇವಲ ಹಿಂದಿಯಲ್ಲಿ ಭಾಷಾಂತರಿಸಿ ಕೊಟ್ಟರೆ ಹೇಗೆ? ಇದರಿಂದ ಹಿಂದಿ ಭಾಷಿಕರಿಗೆ ಅನುಕೂಲವಾಗಿ, ಕನ್ನಡವು ಸೇರಿದಂತೆ ಹಲವು ಪ್ರಾದೇಶಿಕ ಭಾಷಾ ಅಭ್ಯರ್ಥಿಗಳಿಗೆ ತೊಡಕಾಗುತ್ತದೆ. ಹೀಗಾಗಿ, ಅವರು ಅವಕಾಶ ವಂಚಿತರಾಗುತ್ತಾರೆ.
    3/4

    — Janata Dal Secular (@JanataDal_S) February 3, 2023 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಈ ಸಲದ ಅಧಿಸೂಚನೆಯ ಪ್ರಕಾರ ಎಂದಿನಂತೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪೂರ್ವಭಾವಿ ಪರೀಕ್ಷೆ ಬರೆಯಲು ಅವಕಾಶವಿದೆ. ಬ್ಯಾಂಕಿಂಗ್ ಪರೀಕ್ಷೆ ನಡೆಸುವ ಐಬಿಪಿಎಸ್ ಹಾಗೂ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗವು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿದ್ದು, ಯುಪಿಎಸ್​ಸಿ ಕೂಡ ಇದಕ್ಕೆ ಸಮ್ಮತಿಸಬೇಕೆಂಬುದು ಸಕಾರಣ ಬೇಡಿಕೆಯಾಗಿದೆ ಎಂದು ಒತ್ತಾಯಿಸಿದೆ.

  • ಸಂವಿಧಾನದ ಪರಿಚ್ಛೇದದಡಿಯಲ್ಲಿ ಬರುವ ಎಲ್ಲ ಭಾಷೆಗಳಲ್ಲೂ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು ಸೂಕ್ತ ಎಂಬುದು ಅನೇಕ ತಜ್ಞರ ಅಭಿಪ್ರಾಯ. ಈ ಸಂಬಂಧ ಯುಪಿಎಸ್ ಸಿಯು ಸೂಕ್ತ ಕ್ರಮ ಕೈಗೊಂಡು, ಪ್ರಾದೇಶಿಕ ಭಾಷೆಗಳಲ್ಲಿ ಪೂರ್ವಭಾವಿ ಪರೀಕ್ಷೆ ಬರೆಯುವ ವ್ಯವಸ್ಥೆ ಕಲ್ಪಿಸಬೇಕಿದೆ. ಇದರಿಂದಾಗಿ, ಸಮಬಲದ ಸ್ಪರ್ಧಾತ್ಮಕ ವಾತಾವರಣ ಮೂಡುತ್ತದೆ.
    4/4

    — Janata Dal Secular (@JanataDal_S) February 3, 2023 " class="align-text-top noRightClick twitterSection" data=" ">

ಇದನ್ನೂ ಓದಿ: UPSC ಫಲಿತಾಂಶ ಪ್ರಕಟ: ಶ್ರುತಿ ಶರ್ಮಾ ಟಾಪರ್‌; ಅಗ್ರ 4 ಸ್ಥಾನ ಮಹಿಳೆಯರ ಸಾಧನೆ

ಪ್ರಾದೇಶಿಕ ಭಾಷಾ ಅಭ್ಯರ್ಥಿಗಳಿಗೆ ತೊಡಕು: ಕಬ್ಬಿಣದ ಕಡಲೆ ಎಂದೇ ಈ ಪರೀಕ್ಷೆಯನ್ನು ಪರಿಗಣಿಸುವಾಗ, ಅಲ್ಲಿನ ಪ್ರಶ್ನೆಗಳನ್ನು ಕೇವಲ ಹಿಂದಿಯಲ್ಲಿ ಭಾಷಾಂತರಿಸಿ ಕೊಟ್ಟರೆ ಹೇಗೆ? ಇದರಿಂದ ಹಿಂದಿ ಭಾಷಿಕರಿಗೆ ಅನುಕೂಲವಾಗಿ, ಕನ್ನಡವು ಸೇರಿದಂತೆ ಹಲವು ಪ್ರಾದೇಶಿಕ ಭಾಷಾ ಅಭ್ಯರ್ಥಿಗಳಿಗೆ ತೊಡಕಾಗುತ್ತದೆ. ಹೀಗಾಗಿ, ಅವರು ಅವಕಾಶ ವಂಚಿತರಾಗುತ್ತಾರೆ. ಸಂವಿಧಾನದ ಪರಿಚ್ಛೇದದಡಿಯಲ್ಲಿ ಬರುವ ಎಲ್ಲ ಭಾಷೆಗಳಲ್ಲೂ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಸೂಕ್ತ ಎಂಬುದು ಅನೇಕ ತಜ್ಞರ ಅಭಿಪ್ರಾಯ. ಈ ಸಂಬಂಧ ಯುಪಿಎಸ್ ಸಿಯು ಸೂಕ್ತ ಕ್ರಮ ಕೈಗೊಂಡು, ಪ್ರಾದೇಶಿಕ ಭಾಷೆಗಳಲ್ಲಿ ಪೂರ್ವಭಾವಿ ಪರೀಕ್ಷೆ ಬರೆಯುವ ವ್ಯವಸ್ಥೆ ಕಲ್ಪಿಸಬೇಕಿದೆ. ಇದರಿಂದಾಗಿ, ಸಮಬಲದ ಸ್ಪರ್ಧಾತ್ಮಕ ವಾತಾವರಣ ಮೂಡುತ್ತದೆ ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ.

ಇದನ್ನೂ ಓದಿ: 1,472 ಐಎಎಸ್, 864 ಐಪಿಎಸ್, 1,057 ಐಎಫ್​ಎಸ್​ ಹುದ್ದೆಗಳು ಖಾಲಿ: ಲೋಕಸಭೆಗೆ ಕೇಂದ್ರದ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.