ETV Bharat / state

ಡಿಸಿಎಂ ಡಿಕೆಶಿಗೆ ವಿಧಾನಸೌಧದಲ್ಲಿ 4 ಕೊಠಡಿ: ಐವರು ಸಚಿವರಿಗೆ ಸರ್ಕಾರಿ ನಿವಾಸ ಹಂಚಿಕೆ

author img

By

Published : May 24, 2023, 6:48 AM IST

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಮತ್ತೆ ಮೂವರು ಸಚಿವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

vidhana soudha
ವಿಧಾನಸೌಧ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾಲ್ಕು ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಡಿಕೆಶಿ ಅವರ ಇಚ್ಚೆಯಂತೆ 335, 336, 337, 337 A ಸಂಖ್ಯೆಯ ಉತ್ತರ ದಿಕ್ಕಿನಲ್ಲಿರುವ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಒಳಗೊಂಡಂತೆ ಮತ್ತೆ ಮೂವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಯಿತು. ಒಬ್ಬರು ಸಚಿವರಿಗೆ ನಾಲ್ಕು ಕೊಠಡಿ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಕಳೆದ ಬಾರಿ ಸಚಿವರಾಗಿದ್ದಾಗಲೂ ಡಿಕೆಶಿಗೆ 335 ಮತ್ತು 336 ಕೊಠಡಿ ನೀಡಲಾಗಿತ್ತು. ಈ ಬಾರಿಯೂ ಅದೇ ಕೊಠಡಿಯನ್ನು ಅವರು ಕೇಳಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ, ಅದರ ಪಕ್ಕದ ಎರಡು ಕೊಠಡಿಗಳನ್ನೂ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಓರ್ವ ಸಚಿವರಿಗೆ ಎರಡು ಖಾತೆಗಳಿದ್ದರೂ ಎರಡು ಕೊಠಡಿ (ಸಚಿವರ ಚೇಂಬರ್ ಹಾಗೂ ಪಕ್ಕದ ಸಚಿವರ ಸಿಬ್ಬಂದಿ ಕೊಠಡಿ) ಹಂಚಲಾಗುತ್ತದೆ. ಆದರೆ, ಈ ಸಲ ಡಿಕೆಶಿಗೆ ನಾಲ್ಕು ಕೊಠಡಿ ಹಂಚಿರುವ ಬೆಳವಣಿಗೆ ಹುಬ್ಬೇರಿಸಿದೆ.

ಉಳಿದಂತೆ, ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 327 ಮತ್ತು 327 ಎ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 329 ಮತ್ತು 329 ಎ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದೆ ಮೂವರು ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿತ್ತು. ಸಚಿವ ಕೆ.ಜೆ.ಜಾರ್ಜ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 317 ಮತ್ತು 317 ಎ ಮತ್ತು ಎಂ.ಬಿ.ಪಾಟೀಲ್ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 344 ಮತ್ತು 344 ಎ ಹಾಗೂ ಬಿ.ಜೆಡ್.ಜಮೀರ್​ ಅಹಮ್ಮದ್ ಖಾನ್ ಅವರಿಗೆ ವಿಕಾಸ ಸೌಧದ ಮೊದಲನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 143 ಮತ್ತು 146 ಹಂಚಿ ಸರ್ಕಾರ ಆದೇಶ ಹೊರಡಿಸಿತ್ತು.

ಇದನ್ನೂ ಓದಿ : ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಆರೋಪ, ಮುಖ್ಯಅಧೀಕ್ಷಕ ಕೃಷ್ಣಕುಮಾರ್ ವಿರುದ್ಧ ಇದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಸರ್ಕಾರಿ ನಿವಾಸ ಹಂಚಿಕೆ: ಐದು ಸಚಿವರಿಗೆ ಸರ್ಕಾರಿ ನಿವಾಸವನ್ನು ಹಂಚಿ ಆದೇಶಿಸಲಾಗಿದೆ. ಡಿ.ಕೆ.ಶಿವಕುಮಾರ್​ಗೆ ಗಾಂಧಿ ಭವನ ರಸ್ತೆಯ ನಂ - 1 ರ ಕುಮಾರ ಕೃಪಾ ಈಸ್ಟ್ ಕ್ವಾಟ್ರಸ್ ಹಂಚಲಾಗಿದೆ. ಸಚಿವ ಎಂ.ಬಿ.ಪಾಟೀಲ್​ಗೆ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಲೇಜ್ ನಂ.1 ಅನ್ನು ಹಂಚಿಕೆ ಮಾಡಲಾಗಿದೆ. ಕೆ.ಜೆ.ಜಾರ್ಜ್​ಗೆ ರೇಸ್ ಕೋರ್ಸ್ ರಸ್ತೆಯ ನಂ.2 ರೇಸ್ ವ್ಯೂ ಕಾಟೇಜ್ ನೀಡಲಾಗಿದೆ. ಹಾಗೆಯೇ, ಸಚಿವ ಜಿ.ಪರಮೇಶ್ವರಿಗೆ ಸದಾಶಿವನಗರದ ಆರ್.ಎಂ.ಎ ಬಡಾವಣೆಯ 9ನೇ ಕ್ರಾಸ್​ನ ನಂ-94/ಎ ಮನೆಯನ್ನು ನೀಡಲಾಗಿದೆ. ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೆ ರೇಸ್ ಕೋರ್ಸ್ ರಸ್ತೆಯ ನಂ - 4 ರೇಸ್ ವ್ಯೂ ಕಾಟೇಜ್ ನೀಡಲಾಗಿದೆ.

ಇದನ್ನೂ ಓದಿ : ಮುಂಗಾರು ಪೂರ್ವ ಮಳೆ ಅವಾಂತರಕ್ಕೆ ರಾಜ್ಯದಲ್ಲಿ ಈವರೆಗೆ 52 ಮಂದಿ ಸಾವು: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.