ETV Bharat / state

ಪ್ರಧಾನಿ ಮೋದಿ ಜನ್ಮದಿನ: ಸಸಿ ನೆಟ್ಟು ಆಚರಿಸಿದ ನಟ ಅನಂತನಾಗ್

author img

By

Published : Sep 17, 2022, 4:52 PM IST

ಹಿರಿಯ ನಟ ಅನಂತ​ನಾಗ್ ಸಸಿ ನೆಟ್ಟು ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ ಆಚರಿಸಿದರು.

ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ನಟ ಅನಂತನಾಗ್
ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ನಟ ಅನಂತನಾಗ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನದ ನಿಮಿತ್ತ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತನಾಗ್ ಅವರು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಜೊತೆಗೂಡಿ ಸದಾಶಿವ ನಗರದ ಪೂಜಾರಿ ಲೇಔಟ್​​ನಲ್ಲಿ ಸಸಿ ನೆಟ್ಟು, ಪ್ರಧಾನಿ ಜನ್ಮದಿನ ಆಚರಿಸಿದರು.

ಬಳಿಕ ಮಾತನಾಡಿದ ಅವರು ಮೋದಿಯವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವವು ದೇಶಕ್ಕೆ ಹೊಸ ಚೈತನ್ಯ ತಂದಿದೆ. ಭಗವಂತ ಅವರಿಗೆ ಆಯುರ್​ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಅನಂತನಾಗ್ ಹಾರೈಸಿದರು.

ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ನಟ ಅನಂತನಾಗ್
ಪ್ರಧಾನಿ ಮೋದಿ ಜನ್ಮದಿನ ಆಚರಿಸಿದ ನಟ ಅನಂತನಾಗ್

ಅಶ್ವತ್ಥ ನಾರಾಯಣ ಅವರು ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿ ನಿರಂತರ ಮೂರು ಅವಧಿಯಿಂದ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರವನ್ನು ಇವರು ಮಾದರಿ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಇದೇ ವೇಳೆ, ಹಿರಿಯ ನಟ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅರುಣ್, ರಾಜೀವ್ ಮುಂತಾದವರು ಭಾಗವಹಿಸಿದ್ದರು.

(ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ.. ರಂಗೋಲಿಯಲ್ಲಿ ಅರಳಿದ ಪ್ರಧಾನ ಸೇವಕ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.