ETV Bharat / state

ಡಂಜೊ, ಪೋರ್ಟರ್ ಮೂಲಕ ಮನೆಬಾಗಿಲಿಗೆ ಡ್ರಗ್ಸ್: ಐವರ ಬಂಧನ, ₹2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

author img

By

Published : Aug 2, 2022, 7:00 PM IST

ವೈಟ್ ಫೀಲ್ಡ್‌ನ ಪಿಜಿಯಲ್ಲಿ ವಾಸವಾಗಿದ್ದ ವಿಶಾಲ್ ಕುಮಾರ್, ಭೀಮಾಂಶು ಠಾಕೂರ್, ಸಾಗರ್, ಮಹಾಬಲಿಸಿಂಗ್ ಹಾಗೂ ಸುಬರ್ಜಿತ್ ಸಿಂಗ್ ಎಂಬ ಆರೋಪಿಗಳನ್ನು ಬಂಧಿಸಿ 2 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್ ಜಪ್ತಿ
ಡ್ರಗ್ಸ್ ಜಪ್ತಿ

ಬೆಂಗಳೂರು: ಡಾರ್ಕ್​ನೆಟ್​ ವೆಬ್​ಸೈಟ್ ಮುಖಾಂತರ ಡ್ರಗ್ಸ್ ಖರೀದಿಸಿ ನಿರುದ್ಯೋಗಿಗಳಿಂದ ಪ್ಯಾಕ್ ಮಾಡಿಸಿ ಡಂಜೊ ಹಾಗೂ ಪೋರ್ಟರ್ ಸರ್ವಿಸ್ ಅಪ್ಲಿಕೇಷನ್​ಗಳ ಬಳಸಿಕೊಂಡು ಕೊರಿಯರ್ ಮೂಲಕ ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪತ್ತೆ ಹಚ್ಚಿದೆ. ಈ ಸಂಬಂಧ ಐವರು ಅಂತಾರಾಜ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರ‌ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿದ್ದಾರೆ

ಸಾಫ್ಟ್​ವೇರ್​ ಅಪ್ಲಿಕೇಷನ್​ಗಳ ದುರ್ಬಳಕೆ: ದೆಹಲಿ ಮೂಲದ ವೈಟ್‌ಫೀಲ್ಡ್ ಪಿಜಿಯಲ್ಲಿ ವಾಸವಾಗಿದ್ದ ವಿಶಾಲ್ ಕುಮಾರ್, ಭೀಮಾಂಶು ಠಾಕೂರ್, ಸಾಗರ್, ಮಹಾಬಲಿಸಿಂಗ್ ಹಾಗೂ ಸುಬರ್ಜಿತ್ ಸಿಂಗ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 2 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ ಕ್ರಿಸ್ಟೆಲ್, ಎಲ್ಎಸ್ ಡಿ ಸ್ಟ್ರಿಪ್ಸ್, ಕೊಕೈನ್, ಹ್ಯಾಶಿಶ್ ಆಯಿಲ್, ಚರಸ್ ಹಾಗೂ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದ ಆರೋಪಿಗಳು ವಿವಿಧ ಅಪ್ಲಿಕೇಷನ್​ಗಳನ್ನ‌ು ದುರ್ಬಳಕೆ ಮಾಡಿಕೊಂಡು ದಂಧೆ ನಡೆಸುತ್ತಿದ್ದರು‌.

ಡಾರ್ಕ್​ನೆಟ್​ ವೆಬ್ ಮೂಲಕ ವಿವಿಧ ಬಗೆಯ ಮಾದಕ ವಸ್ತುಗಳನ್ನು‌ ಕ್ರಿಪ್ಟೊ ಕರೆನ್ಸಿ ಮೂಲಕ ಖರೀದಿಸಿ ಶೇಖರಿಸುತ್ತಿದ್ದರು‌. ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಚೆನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಠಡಿ ಬಾಡಿಗೆಗೆ ಪಡೆದು ಡ್ರಗ್ಸ್​ಗಳನ್ನು‌ ಇಡುತ್ತಿದ್ದರು. ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ತಮ್ಮತ್ತ ಸೆಳೆದುಕೊಂಡು ಅವರ ಮುಖಾಂತರ ಕೊರಿಯರ್ ಮೂಲಕ ಏಜೆಂಟ್​ಗಳು ವಾಸವಿದ್ದ ಪಿಜಿಗಳಿಗೆ ಡ್ರಗ್ಸ್ ತಲುಪಿಸುತ್ತಿದ್ದರು.‌

"ಹಲವು ವರ್ಷಗಳಿಂದ ದಂಧೆ ನಡೆಸುತ್ತಿದ್ದರೂ ಯಾರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ. ಸದ್ಯ ಐವರನ್ನು ಬಂಧಿಸಿದ್ದು ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ" ಎಂದು ನಗರ‌ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

ಇದನ್ನೂ ಓದಿ: ರಾತ್ರಿ ಸುರಿದ ಭಾರಿ ಮಳೆ: ದ್ವೀಪದಂತಾದ ಹೊನ್ನಾಳಿಯ ಗ್ರಾಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.