ETV Bharat / state

ತಾಂತ್ರಿಕ ಸಮಸ್ಯೆಯಿಂದ ಇಂದಿನ ಕೋವಿಡ್ ಬುಲೆಟಿನ್ ಅಪೂರ್ಣ: ಕೇವಲ 133 ಮಂದಿಗೆ ಸೊಂಕು ದೃಢ

author img

By

Published : Jun 26, 2022, 10:12 PM IST

ತಾಂತ್ರಿಕ ಸಮಸ್ಯೆಯಿಂದ ಕೋವಿಡ್ ಪರೀಕ್ಷೆಯ ಸಂಪೂರ್ಣ ಅಂಕಿ-ಅಂಶ ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಂದಿನ ಕೋವಿಡ್ ಬುಲೆಟಿನ್​ನಲ್ಲಿ ಕಡಿಮೆ ಸೋಂಕಿತರ ವರದಿಯಾಗಿದೆ.

133-people-tested-covid-positive-in-karnataka
ತಾಂತ್ರಿಕ ಸಮಸ್ಯೆಯಿಂದ ಇಂದಿನ ಕೋವಿಡ್ ಬುಲೆಟಿನ್ ಅಪೂರ್ಣ: ಕೇವಲ 133 ಮಂದಿಗೆ ಸೊಂಕು ದೃಢ

ಬೆಂಗಳೂರು: ತಾಂತ್ರಿಕ‌ ಸಮಸ್ಯೆಯಿಂದ ಇಂದು ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ವರದಿಯಾಗಿದೆ. ಕೇವಲ 133 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ಸಮಸ್ಯೆಯಿಂದ ಸಮರ್ಪಕವಾಗಿ ಕೋವಿಡ್ ಪರೀಕ್ಷಾ ವರದಿ ದಾಖಲಾಗಿಲ್ಲ ಎಂದು ತಿಳಿಸಿದೆ.

ತಾಂತ್ರಿಕ ಸಮಸ್ಯೆಯಿಂದ ಕೋವಿಡ್ ಪರೀಕ್ಷೆಯ ಸಂಪೂರ್ಣ ಅಂಕಿ-ಅಂಶ ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಂದಿನ ಕೋವಿಡ್ ಬುಲೆಟಿನ್​ನಲ್ಲಿ ಕಡಿಮೆ ಸೋಂಕಿತರ ವರದಿಯಾಗಿದೆ. ಸಂಪೂರ್ಣ ಮಾಹಿತಿಯನ್ನು ಪೋರ್ಟಲ್‌ನಲ್ಲಿ ದಾಖಲಿಸಿದ ಬಳಿಕ ಮುಂಬರುವ ಕೋವಿಡ್ ಬುಲೆಟಿನ್​ನಲ್ಲಿ ಅಪ್​ಡೇಟ್ ಮಾಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಪ್ರಕಟಿಸಲಾದ ಕೋವಿಡ್ ಬುಲೆಟಿನ್‌ನಲ್ಲಿ ರಾಜ್ಯದಲ್ಲಿ 133 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. ಇಂದು 32,575 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 517 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ 4,438 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.0.40, ವಾರದ ಸೋಂಕಿತರ ಪ್ರಮಾಣ ಶೇ.3.51 ಹಾಗೂ ಈ ವಾರದ ಸಾವಿನ ಪ್ರಮಾಣ ಶೇ.0.01 ಇದೆ. ಬೆಂಗಳೂರಿನಲ್ಲಿ 131 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,79,98,823ಕ್ಕೆ ಏರಿಕೆ ಆಗಿದೆ. 487 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೆ ಕೋವಿಡ್ ಸಾವಿನ ಸಂಖ್ಯೆ16,967 ಇದೆ. ರಾಜಧಾನಿಯಲ್ಲಿ 4,211 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ದೇಶದಲ್ಲಿಂದು 11,739 ಕೋವಿಡ್​ ಕೇಸ್​ ಪತ್ತೆ, 90 ಸಾವಿರದ ಗಡಿ ದಾಟಿದ ಸಕ್ರಿಯ ಪ್ರಕರಣಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.