ETV Bharat / state

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಡಾ ರಾಜ್​ಕುಮಾರ್ ಅಕಾಡೆಮಿಯಿಂದ 11 ಮಂದಿ ಪಾಸ್..

author img

By

Published : May 23, 2023, 6:37 PM IST

Updated : May 23, 2023, 7:48 PM IST

ಡಾ.ರಾಜ್​ಕುಮಾರ್ ಅಕಾಡೆಮಿಯಿಂದ 11 ಮಂದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

11-candidates-from-rajkumar-academy-passed-the-upsc-exam
ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್​ಕುಮಾರ್ ಅಕಾಡೆಮಿಯಿಂದ 11 ಮಂದಿ ಪಾಸ್..

ಬೆಂಗಳೂರು: 2022 ಹಾಗೂ 2023ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (UPSC) ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್​ ಅಕಾಡೆಮಿಯಿಂದ ಈ ಬಾರಿ ಬರೋಬ್ಬರಿ 11 ಮಂದಿ ಪಾಸ್ ಆಗುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ. ಒಳ್ಳೆಯ ಆಶಯ ಇಟ್ಟುಕೊಂಡು, ಆರಂಭಿಸಿದ ರಾಜ್​ ಕುಟುಂಬದ ಈ ಕೆಲಸಕ್ಕೆ ಒಳ್ಳೆ ಪ್ರತಿಫಲ ಸಿಕ್ಕಿದೆ. ಡಾ. ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಅಣ್ಣಾವ್ರ ಕುಟುಂಬ ಕೆಲವು ವರ್ಷಗಳ ಹಿಂದೆ ಆರಂಭಿಸಿದ್ದು, ಈ ಅಕಾಡೆಮಿ ಅತ್ಯುತ್ತಮ ಸಾಧನೆ ಮಾಡಿದೆ.

ರಾಜ್​ಕುಮಾರ್ ಹೆಸರಲ್ಲಿ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ಅಕಾಡೆಮಿ ಮೂಲಕ ತರಬೇತಿ ನೀಡಲಾಗುತ್ತದೆ. ಈ ಅಕಾಡೆಮಿಯಿಂದ ಹಲವರು ರ‍್ಯಾಂಕ್‌ ಪಡೆದು ಈ ಅಕಾಡೆಮಿಯಿಂದ ಪಾಸ್ ಆಗುತ್ತಿದ್ದಾರೆ. ಕಳೆದ ವರ್ಷ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅಕಾಡೆಮಿಯ ಕೀರ್ತಿಯನ್ನು ಹೆಚ್ಚಿಸಿದ್ದರು. ಈ ಬಾರಿ 11 ಮಂದಿ ಪಾಸ್ ಆಗುವ ಮುಖಾಂತರ ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯ ಗೌರವವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಅಕಾಡೆಮಿಯನ್ನ ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಮತ್ತು ಯುವ ಪತ್ನಿ ಶ್ರೀದೇವಿ ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯನ್ನ ಮುನ್ನಡೆಸುತ್ತಿದ್ದಾರೆ.

ಡಾ.ರಾಜ್​ಕುಮಾರ್ ಅಕಾಡೆಮಿಯಿಂದ ತೇರ್ಗಡೆಯಾದವರ ಪಟ್ಟಿ:

  • ಮೆಲ್ವೀನ್ ವರ್ಗೀಸ್ : 155ನೇ ರ‍್ಯಾಂಕ್‌
  • ಸೂರಜ್ . ಡಿ: 197ನೇ ರ‍್ಯಾಂಕ್‌
  • ಆಕಾಶ್ ಎ.ಎಲ್ : 210ನೇ ರ‍್ಯಾಂಕ್‌
  • ಚೆಲುವರಾಜ್ ಆರ್: 238ನೇ ರ‍್ಯಾಂಕ್‌
  • ಸೌರಭಾ ಕೆ: 260ನೇ ರ‍್ಯಾಂಕ್‌
  • ಶೃತಿ ಯರಗಟ್ಟಿ ಎಸ್ : 362ನೇ ರ‍್ಯಾಂಕ್‌
  • ಪೂಜಾ ಮುಕಂದ: 390ನೇ ರ‍್ಯಾಂಕ್‌
  • ಭಾನುಪ್ರಕಾಶ್ ಜೆ: 448ನೇ ರ‍್ಯಾಂಕ್‌
  • ಡಾ. ವರುಣ್ ಗೌಡ: 594ನೇ ರ‍್ಯಾಂಕ್‌
  • ಅಕ್ಷಯ್ ಕುಮಾರ್ ರಾಜಗೌಡ ಪಾಟೀಲ್: 746ನೇ ರ‍್ಯಾಂಕ್‌
  • ಯಲಗುರೇಶ್ ಅರ್ಜನ್ ನಾಯಕ್ : 890ನೇ ರ‍್ಯಾಂಕ್‌
    UPSC result
    ಯುಪಿಎಸ್‌ಸಿ ಪರೀಕ್ಷೆಯಲ್ಲಿ ಡಾ ರಾಜ್​ಕುಮಾರ್ ಅಕಾಡೆಮಿಯಿಂದ 11 ಮಂದಿ ಪಾಸ್

ಬೆಳಗಾವಿ ಯುವತಿ ಶೃತಿಗೆ 362ನೇ ರ‍್ಯಾಂಕ್‌: ಇನ್ನು ಬೆಳಗಾವಿ ಜಿಲ್ಲೆಯ ಯುವತಿ ಶೃತಿ ಯರಗಟ್ಟಿ ಅವರು 362ನೇ ರ‍್ಯಾಂಕ್‌ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ನಿವಾಸಿಯಾಗಿರುವ ಶೃತಿ ಯರಗಟ್ಟಿ ಅವರು ಮೂಲತಃ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರು. ಶಿರಢಾಣ ಗ್ರಾಮದ ಡಾ ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಶೃತಿ, ಧಾರವಾಡದ ಕೆಸಿಡಿ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿಎಸ್‌ಸಿ ವ್ಯಾಸಂಗ ಮಾಡಿ 7 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಶೃತಿ ಯರಗಟ್ಟಿ, ಈಗ ಆರನೇ ಬಾರಿ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 362ನೇ ರ‍್ಯಾಂಕ್‌ ಪಡೆಯುವ ಮೂಲಕ ತಮ್ಮ ಗುರಿ ಮುಟ್ಟಿದ್ದಾರೆ. ಇನ್ನು, ಶಿವಮೊಗ್ಗದ ಎಂ ನಾಗರಾಜ್ ಹಾಗೂ ನಮಿತಾ ಅವರ ಪುತ್ರಿ ಮೇಘನಾ 617ನೇ ರ‍್ಯಾಂಕ್‌ ಗಳಿಸಿದ್ದಾರೆ.

ಇದನ್ನೂ ಓದಿ:ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ..ಇಶಿತಾ ಕಿಶೋರ್​ ಈ ವರ್ಷದ ಟಾಪರ್​

Last Updated : May 23, 2023, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.