ETV Bharat / state

ಕಾಂಗ್ರೆಸ್​ ಮುಖಂಡನಿಂದ ದಬ್ಬಾಳಿಕೆ ಆರೋಪ.. ಜಮೀನು ವಿವಾದಕ್ಕೆ ರೋಸಿಹೋದ ಬಡ ಕುಟುಂಬ

author img

By

Published : Jul 6, 2021, 11:01 AM IST

devanahlli
ಜಮೀನು ವಿವಾದ

ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದ ತೋಟದ ಮನೆಗಳ ಜಾಗದ ಬಳಿಯ ಸರ್ವೆ ನಂಬರ್ 112ರಲ್ಲಿರುವ 22 ಗುಂಟೆ ಜಾಗದಲ್ಲಿ ನಾರಾಯಣಮ್ಮ ಮತ್ತು ಮೋಟಪ್ಪ ದಂಪತಿ ವಾಸವಾಗಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಮುಖಂಡನ ಜಮೀನಿಗೆ ದಾರಿ ಮಾಡಲು ಈ ಜಮೀನು ಅಡ್ಡವಾಗಿದೆ ಎಂದು ರೌಡಿಗಳನ್ನು ಕಳುಹಿಸಿ ಅವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ದೇವನಹಳ್ಳಿ: ಕಾಂಗ್ರೆಸ್ ಮುಖಂಡನ ಜಮೀನಿಗೆ ಅಡ್ಡವಾಗಿ ಬಡಕುಟುಂಬವೊಂದರ ಜಮೀನು ಇದ್ದು, ಆ ಜಾಗವನ್ನು ಖಾಲಿ ಮಾಡಿಸುವಂತೆ ರೌಡಿಗಳನ್ನು ಕಳುಹಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನ್ಯಾಯ ಪರವಾಗಿರಬೇಕಾದ ಪೊಲೀಸರು ಸಹ ಮುಖಂಡನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದ ತೋಟದ ಮನೆಗಳ ಜಾಗದ ಬಳಿಯ ಸರ್ವೆ ನಂಬರ್ 112ರಲ್ಲಿರುವ 22 ಗುಂಟೆ ಜಾಗದಲ್ಲಿ ನಾರಾಯಣಮ್ಮ ಮತ್ತು ಮೋಟಪ್ಪ ದಂಪತಿ ವಾಸವಾಗಿದ್ದಾರೆ. ಹಸು ಸಾಕಾಣಿಕೆ ಮಾಡುತ್ತಿರುವ ಇವರ ಕುಟುಂಬ ಇದೇ 22 ಗುಂಟೆ ಜಾಗದಲ್ಲಿ ಮೇವು ಬೆಳೆದು ಜೀವನ ನಿರ್ವಹಣೆ ಮಾಡುತ್ತಿದೆ. ಅನೇಕ ವರ್ಷಗಳಿಂದ ಇದೇ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದು, ಶಿವಕುಮಾರ್ ಎಂಬುವರ ಕುಟುಂಬದಿಂದ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ.

ದಬ್ಬಾಳಿಕೆಗೆ ರೋಸಿಹೋದ ಬಡಕುಡುಂಬ

ಸರ್ವೆ ನಂಬರ್ 112 ರ 22 ಗುಂಟೆ ಜಾಗದ ಸುತ್ತಲೂ ಕಾಂಗ್ರೆಸ್​ ಮುಖಂಡ ಜಿ.ಎಸ್. ರಾಮಚಂದ್ರಪ್ಪ ಅವರ ನಾಲ್ಕೈದು ಎಕರೆ ಜಮೀನು ಇದ್ದು, ಇವರ ಜಮೀನಿಗೆ ರಸ್ತೆ ಮಾಡಿಸಲು ನಾರಾಯಣಮ್ಮ ಅವರ 22 ಗುಂಟೆ ಜಮೀನು ಅಡ್ಡವಾಗಿದೆ. ಈ ಜಮೀನು ಕಬಳಿಸುವ ಕಾರಣಕ್ಕೆ ನಾರಾಯಣಮ್ಮರೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದ ಶಿವಕುಮಾರ್ ಈಗ ರಾಮಚಂದ್ರಪ್ಪ ಅವರ ಪರ ನಿಂತಿದ್ದು, ಜಮೀನು ಅವರಿಗೆ ಮಾರಾಟ ಮಾಡಿದ್ದಾನಂತೆ. ನಾರಾಯಣಮ್ಮ ಕುಟುಂಬವನ್ನು ಜಮೀನಿದಿಂದ ಓಡಿಸಲು ರೌಡಿಗಳನ್ನ ಕರೆಸಿ ಕೊಲೆ ಬೆದರಿಕೆ ಹಾಕಿ ಜಮೀನು ಖಾಲಿ ಮಾಡುವಂತೆ ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.

ರಾಮಚಂದ್ರಪ್ಪ ಜಮೀನು ಉಳುಮೆ ಮಾಡುವಾಗ ಇಬ್ಬರ ನಡುವೆ ಜಗಳವಾಗಿದೆ. ಈ ಸಮಯದಲ್ಲಿ ಅಸ್ವಸ್ಥರಾಗಿರುವ ನಾರಾಯಣಮ್ಮ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರ ಪೊಲೀಸರು ರಾಮಚಂದ್ರಪ್ಪ ಅವರ ಪರವಾಗಿದ್ದು, ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಾರಂತೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ವಿಚಾರಣೆ ಇದೆ. ಕೋವಿಡ್ ಹಿನ್ನೆಲೆ ಕೋರ್ಟ್​ನಲ್ಲಿ SOP ಇದ್ದು, ಈ ಸಮಯದಲ್ಲಿ ಅಕ್ರಮವಾಗಿ ಶಿವಕುಮಾರ್​ಅವರಿಂದ ಜಮೀನು ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದಾರೆಂಬುದು ನಾರಾಯಣಮ್ಮ ಅವರ ಆರೋಪವಾಗಿದೆ.

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಮಚಂದ್ರಪ್ಪ ಅವರ ಮಗ ಚನ್ನಕೇಶವ, ಶಿವಕುಮಾರ್​ ಅವರಿಂದ ನಾವು ಜಮೀನು ಖರೀದಿ ಮಾಡಿದ್ದು, ಉಳುಮೆ ಮಾಡುತ್ತಿರುವ ಸಮಯದಲ್ಲಿ ಪರಸ್ಪರ ಜಗಳವಾಗಿದೆ. ಖರೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮಲ್ಲಿವೆ ಎಂದಿದ್ದಾರೆ.

ಅಂಗೈ ಅಗಲದ ಜಮೀನಿನಲ್ಲಿ ಮೇವು ಬೆಳೆದು ಹಸು ಸಾಕಣಿಕೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಬಡ ಕುಟುಂಬ ಇದೀಗ ಬಲಾಢ್ಯರ ದಬ್ಬಾಳಿಕೆಗೆ ರೋಸಿಹೋಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.