ETV Bharat / state

ದಲಿತರು ಅಣ್ಣ ತಮ್ಮಂದಿರಿದ್ದಂತೆ, ಹೇಳಿಕೆ ರಾಜಕೀಯ ದುರ್ಬಳಕೆ ಮಾಡುವವರಿಗೆ ಅಂಜುವುದಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

author img

By

Published : Nov 30, 2022, 3:46 PM IST

Updated : Nov 30, 2022, 4:50 PM IST

ದೊಡ್ಡಬಳ್ಳಾಪುರ ತಾಲೂಕಿನ ಮಧುರೆನಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಕುಮಾರಸ್ವಾಮಿ ಅವರು, 13ನೇ ದಿನದ ಪಂಚರತ್ನ ರಥಯಾತ್ರೆ ಆರಂಭಿಸಿದರು.

Former CM Kumaraswamy spoke at a press conference.
ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಗ್ರಾಮದಲ್ಲಿ ವಾಸ್ತವ್ಯ ಮಾಡಿದ ಕುಮಾರಸ್ವಾಮಿಯವರು, ಇಲ್ಲಿಂದ 13ನೇ ದಿನದ ಪಂಚರತ್ನ ರಥಯಾತ್ರೆ ಆರಂಭಿಸಿದರು.

ಇದಕ್ಕೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರನ್ನು ನನ್ನ ಅಣ್ಣ ತಮ್ಮದಿರಂತೆ ನೋಡಿಕೊಂಡವನು ನಾನು, ರಾಜಕೀಯ ದುರ್ಬಳಕೆ ಮಾಡುವರಿಗೆ ಅಂಜುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿ ಎಂ ಇಬ್ರಾಹಿಂ ಅಸ್ಪೃಶ್ಯರಲ್ಲ ಎಂಬ ಹೆಚ್ ಡಿಕೆ ಪದ ಬಳಕೆ ಕುರಿತಂತೆ ದಲಿತ ಸಂಘಟನೆ ಮುಖಂಡರ ಆಕ್ಷೇಪಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಮುಸ್ಲಿಮರ ಬಗ್ಗೆ ಚರ್ಚೆ ಬಂದಾಗ ಬಿಜೆಪಿ ಪಕ್ಷ ರಾಜ್ಯ ರಾಷ್ಟ್ರದಲ್ಲಿ ಮುಸ್ಲಿಮರು ಪಾಕಿಸ್ತಾನಿಗಳು ಪಾಕಿಸ್ತಾನಕ್ಕೆ ಹೋಗಲಿ ಎಂಬ ಪ್ರಕರಣಗಳು ನಡೆದಿವೆ. ಆದರೆ, ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಆಗಬಾರದೇನು, ಅವರನೇನು ಆನ್ ಟಚಬಲ್ ನಾ, ಈ ಹಿನ್ನೆಲೆಯಲ್ಲಿ ಪದ ಬಳಕೆ ಮಾಡಿದ್ದೇನಷ್ಟೇ ಎಂದು ತಿಳಿಸಿದರು. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡಿದಕ್ಕೆ ಅವರನೇನು ಅಸ್ಪೃಶ್ಯರಾ ಎಂದು ಹೇಳಿದ್ದಾರೆ. ಅವರ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ ಎಂದರು.

ದಲಿತರು ನನ್ನ ಅಣ್ಣ ತಮ್ಮಂದಿರು: ಕುಮಾರಸ್ವಾಮಿ ಮಹಾ ಅಪರಾಧ ಮಾಡಿದಂತೆ ಯೋಜಿತ ರೀತಿಯಲ್ಲಿ ಎತ್ತಿಕಟ್ಟು ನೋಡುತ್ತಿದ್ದಾರೆ. ದಲಿತರು ನನ್ನ ಅಣ್ಣ ತಮ್ಮಂದಿರು, ಸಹಾಯ ಕೇಳಿಕೊಂಡು ನನ್ನ ಮನೆಗೆ ಬರುವ ಶೇಕಡಾ 50 ರಷ್ಟು ಜನರು ದಲಿತ ಸಮುದಾಯದವರು, ಅವರನ್ನು ಕೂರಿಸಿ ಮಾತಾಡಿಸಿ ತಿಂಡಿ ಕೊಟ್ಟು ಕಳಿಸಿದ್ದೇನೆ, ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವರಿಗೆ ನಾನು ಅಂಜುವುದಿಲ್ಲ ಎಂದರು.
ಇದನ್ನೂಓದಿ:ಸದ್ಯದಲ್ಲೇ ಸಿದ್ದರಾಮಯ್ಯ ಜೀವನಾಧಾರಿತ ಬಯೋಪಿಕ್ ತೆರೆಗೆ?

Last Updated : Nov 30, 2022, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.