ETV Bharat / state

ಶಾಲೆ ಕೆಡವಿದ ಹೊನ್ನಾವರ ಗ್ರಾ.ಪಂ. ಅಧ್ಯಕ್ಷನನ್ನು ವಜಾಗೊಳಿಸಿದ ಸರ್ಕಾರ

author img

By

Published : Dec 24, 2019, 10:38 AM IST

ದುರುದ್ದೇಶಪೂರ್ವಕವಾಗಿ ಅಧಿಕಾರಿಗಳ ಅನುಮತಿ ಪಡೆಯದೆ ಸರ್ಕಾರಿ ಉರ್ದು ಶಾಲೆ ಕೆಡವಿದ ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Dismissed order
ಗ್ರಾಪಂ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಸರ್ಕಾರ

ದೊಡ್ಡಬಳ್ಳಾಪುರ: ದುರುದ್ದೇಶಪೂರ್ವಕವಾಗಿ ಅಧಿಕಾರಿಗಳ ಅನುಮತಿ ಪಡೆಯದೇ ಸರ್ಕಾರಿ ಉರ್ದು ಶಾಲೆ ಕೆಡವಿದ ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಚನ್ನಗಂಗಯ್ಯ ವಜಾಗೊಂಡಿರುವ ತಾಲೂಕಿನ ಹೊನ್ನಾವರ ಗ್ರಾಮ ಪಂಚಾಯತ್ ಅಧ್ಯಕ್ಷ.

Dismissed order
ಆದೇಶದ ಪ್ರತಿ

ಪಂಚಾಯತ್​ ವ್ಯಾಪ್ತಿಯ ಪುಟ್ಟಯ್ಯನ ಅಗ್ರಹಾರದ ಸರ್ಕಾರಿ ಉರ್ದು ಶಾಲೆಯನ್ನ ದುರುದ್ದೇಶಪೂರ್ವಕವಾಗಿ ಕೆಡವಿದ್ದಾರೆ. ಶಿಥಿಲಗೊಂಡಿದ್ದ ಶಾಲೆಯನ್ನು ಕೆಡುವವ ಮುನ್ನ ತಾಲೂಕಿನ ಕಾರ್ಯನಿರ್ವಹಣಾ ಅಧಿಕಾರಿ ಅನುಮತಿ ಪಡೆದಿರಲಿಲ್ಲ.

Dismissed order
ಆದೇಶದ ಪ್ರತಿ

ಅಲ್ಲದೆ, ಶಾಲಾ ಕೊಠಡಿ ಕಿಟಕಿ, ಬಾಗಿಲು ಮತ್ತು ಪಿಠೋಪಕರಣಗಳನ್ನ ಶಾಲೆಯ ವಶಕ್ಕೆ ನೀಡಿರುವುದಿಲ್ಲ. ಈ ಬಗ್ಗೆ ಪಂಚಾಯತ್​ ಅಧ್ಯಕ್ಷ ಚನ್ನಗಂಗಯ್ಯ ವಿರುದ್ಧ ದೂರು ನೀಡಲಾಗಿತ್ತು.

ವಿಚಾರಣೆ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) 48(5)ರ ಅನ್ವಯ ಕರ್ತವ್ಯ ನಿರ್ವಹಣೆಯಲ್ಲಿ ನಿರಂತರ ಅಲಕ್ಷ್ಯತೆ ಮತ್ತು ದುರ್ನಡತೆ ತೋರಿದ ಹೊನ್ನಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಚನ್ನಗಂಗಯ್ಯನನ್ನು ಅಧ್ಯಕ್ಷ ಮತ್ತು ಸದಸ್ಯ ಸ್ಥಾನದಿಂದ ತೆಗೆದು ಹಾಕಿ ಅದೇಶ ಹೊರಡಿಸಿರುವ ಬಗ್ಗೆ ಆದೇಶಿಸಲಾಗಿದೆ.

Intro:ಅನುಮತಿ ಇಲ್ಲದೆ ಸರ್ಕಾರಿ ಉರ್ದು ಶಾಲೆ ಕೆಡವಿದ ಗ್ರಾಮ ಪಂಚಾಯತ್ ಅಧ್ಯಕ್ಷ

ಶಾಲೆ ಕೆಡವಿದ ಹೊನ್ನವಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಸರ್ಕಾರ
Body:ದೊಡ್ಡಬಳ್ಳಾಪುರ : ದುರುದ್ದೇಶ ಪೂರ್ವಕವಾಗಿ ಅಧಿಕಾರಿಗಳ ಅನುಮತಿ ಪಡೆಯದೆ ಸರ್ಕಾರಿ ಉರ್ದು ಶಾಲೆ ಕೆಡವಿದ ಗ್ರಾಮ ಪಂಚಾಯತ್ ಅಧ್ಯಕ್ಷನ್ನ ಸರ್ಕಾರ ವಜಾಗೊಳಿಸಿ ಆದೇಶ ಹೊರಡಿಸಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹೊನ್ನವಾರ ಗ್ರಾಮ ಪಂಚಾಯತ್ ಅಧ್ಯಕ್ಷ ಚನ್ನಗಂಗಯ್ಯ ಪಂಚಾಯ್ತಿ ವ್ಯಾಪ್ತಿಯ ಪುಟ್ಟಯ್ಯನ ಅಗ್ರಹಾರದ ಸರ್ಕಾರಿ ಉರ್ದು ಶಾಲೆಯನ್ನ ದುರುದ್ದೇಶ ಪೂರ್ವಕವಾಗಿ ಕೆಡಿವಿರುತ್ತಾರೆ. ಶಿಥಿಲಗೊಂಡಿದ್ದ ಶಾಲೆಯನ್ನು ಕೆಡುವ ಮುನ್ನ ತಾಲೂಕಿನ ಕಾರ್ಯನಿರ್ವಹಣ ಅಧಿಕಾರಿಯ ಅನುಮತಿ ಪಡೆಯದೆ ಶಾಲಾ ಕಟ್ಟಡ ನೆಲಸಮಗೊಳಿಸಿರುತ್ತಾರೆ ಮತ್ತು ಶಾಲಾ ಕೊಠಡಿಯ ಕಿಟಕಿ, ಬಾಗಿಲು ಮತ್ತು ಪಿಠೋಪಕರಣಗಳನ್ನ ಶಾಲೆಯ ವಶಕ್ಕೆ ನೀಡಿರುವುದಿಲ್ಲ. ಈ ಬಗ್ಗೆ ಪಂಚಾಯತಿ ಅಧ್ಯಕ್ಷ ಚನ್ನಗಂಗಯ್ಯನ ವಿರುದ್ಧ ದೂರಿದ್ದು. ವಿಚಾರಣೆ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ , 1993ರ ಪ್ರಕರಣ 48(4) 48(5) ರ ಅನ್ವಯ ಕರ್ತವ್ಯ ನಿರ್ವಹಣೆಯಲ್ಲಿ ನಿರಂತರ ಅಲಕ್ಷ್ಯತೆ ಮತ್ತು ದುರ್ನಾಡತೆಯ ತೋರಿದ ಹೊನ್ನವಾರ ಗ್ರಾಮ ಪಂಚಾಯತ್ ಅಧ್ಯಕ್ಷ ಚನ್ನಗಂಗಯ್ಯರವರನ್ಶು ಅಧ್ಯಕ್ಷ ಮತ್ತು ಸದಸ್ಯ ಸ್ಥಾನದಿಂದ ತೆಗೆದು ಹಾಕಿ ಅದೇಶ ಹೊರಡಿಸಿದೆ.
Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.