ETV Bharat / state

ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ದೊರೆತರೆ ಭಾರತಕ್ಕೆ ವಿಶ್ವಗುರುವಿನ ಗೌರವ: ಕಿರಣ್ ಕುಮಾರ್

author img

By

Published : May 12, 2019, 8:09 AM IST

ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ 720 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು

ಗ್ರಾಜುಯೇಷನ್ ಡೇ

ನೆಲಮಂಗಲ: ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಗ್ರಾಜುಯೇಷನ್ ಡೇ

ಪದವಿ ಪೂರೈಸಿದ 720 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಸಲಹೆಯನ್ನೂ ನೀಡಲಾಯ್ತು.

ಇಸ್ರೋದ ಮಾಜಿ ಮುಖ್ಯಸ್ಥ ಕಿರಣ್ ಕುಮಾರ್ ಮಾತನಾಡಿ, ಸಾಕಷ್ಟು ವಿದ್ಯಾರ್ಥಿಗಳು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಅವಕಾಶಗಳು ಕಡಿಮೆ ಇದ್ದರೂ, ಅಭಿವೃದ್ಧಿಯತ್ತ ನಮ್ಮ ದೇಶ ಮುಂದೆ ಹೋಗುತ್ತಿದೆ. ಹೆಚ್ಚಿನ ಅವಕಾಶಗಳು ನಮ್ಮ ದೇಶದ ವಿದ್ಯಾರ್ಥಿಗಳಿಗೆ ದೊರೆತರೆ, ವಿಶ್ವದಲ್ಲಿಯೇ ಭಾರತ ವಿಶ್ವಗುರು ಆಗುವುದರಲ್ಲಿ ಅನುಮಾನವಿಲ್ಲ ಎಂದರು.

Intro:ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಗ್ರಾಜುಯೇಷನ್ ಡೇ

ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿದ ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್
Body:ನೆಲಮಂಗಲ: ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿದ ವಿದ್ಯಾರ್ಥಿಗಳಿಗೆ ಸಂಭ್ರಮದ ದಿನ. ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಗ್ರಾಜುಯೇಷನ್ ಡೇ ಆಚರಣೆ ಮಾಡಲಾಗಿದೆ. ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿ ವಿಜ್ಞಾನದತ್ತ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಸಲಹೆ ನೀಡಿದರು.

ಬೆಂಗಳೂರು ಹೊರವಲಯ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಇಂದು ಗ್ರಾಜುಯೇಷನ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಇಸ್ರೋದ ಮಾಜಿ ಮುಖ್ಯಸ್ಥರಾದ ಎ.ಎಸ್ ಕಿರಣ್ ಕುಮಾರ್ ಹಾಗೂ ಕಾಲೇಜು ಆಡಳಿತ ಮಂಡಲಿ ಕಡೆಯಿಂದ ಪದವಿ ಪೂರೈಸಿದ 720 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಕಾಲೇಜ್ ತುಂಬೇಲ್ಲ ಗ್ರಾಜುಯೇಷನ್ ಡ್ರೆಸ್ ಧರಿಸಿದ ವಿದ್ಯಾರ್ಥಿಗಳೇ ಕಾಣುತ್ತಿದ್ದು .ಭವಿಷ್ಯದ ಕನಸ್ಸೊಂದನ್ನು ಪೂರೈಸಿದ ಸಂತಸ ಅವರಲ್ಲಿತ್ತು.

ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಇಸ್ರೋದ ಮಾಜಿ ಮುಖ್ಯಸ್ಥ ಕಿರಣ್ ಕುಮಾರ್, ಸಾಕಷ್ಟು ವಿಧ್ಯಾರ್ಥಿಗಳು ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಮುಂದೆ ಬರುತ್ತಿದ್ದಾರೆ. ನಮ್ಮ ದೇಶದಲ್ಲಿ ಅವಕಾಶಗಳು ಕಡಿಮೆ ಇದೆ, ಅಭಿವೃದ್ಧಿಯತ್ತ ನಮ್ಮ ದೇಶ ಮುಂದೆ ಹೋಗುತ್ತಿದೆ. ಹೆಚ್ಚಿನ ಅವಕಾಶಗಳು ನಮ್ಮ ದೇಶದ ವಿಧ್ಯಾರ್ಥಿಗಳಿಗೆ ದೊರೆತರೆ, ನಮ್ಮ ದೇಶ ವಿಶ್ವಗುರು ಆಗುವುದರಲ್ಲಿ ಅನುಮಾನವಿಲ್ಲ ಎಂದರು.

1-ಬೈಟ್: ಎ‌.ಎಸ್‌. ಕಿರಣ್ ಕುಮಾರ್, ಇಸ್ರೋ ಮಾಜಿ ಅಧ್ಯಕ್ಷ
2-ಬೈಟ್: ನಾಗಭೂಷಣ್, ಕಾಲೇಜು ಮುಖ್ಯಸ್ಥ
Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.