ETV Bharat / state

ಹಾಲಿನ ಪ್ಯಾಕೇಟ್ ತಂದುಕೊಟ್ಟ ಗ್ರಾಹಕರಿಗೆ ಹಾಲಿನ ದರದಲ್ಲಿ 1ರೂ. ರಿಯಾಯತಿ ನೀಡಲು ಬಮೂಲ್ ಚಿಂತನೆ..!

author img

By

Published : Oct 6, 2019, 3:44 AM IST

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಸುಮಾರು 2 ಲಕ್ಷ ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಉತ್ತಮ ಹಾಲು ಉತ್ಪಾದಕರಿಗೆ, ಹಾಲಿನ ಕ್ಯಾನ್ ವಿತರಣಾ ಕಾರ್ಯಕ್ರಮ ನಡೆಯಿತು.

ಹಾಲಿನ ಪ್ಯಾಕೇಟ್ ತಂದುಕೊಟ್ಟ ಗ್ರಾಹಕರಿಗೆ ಹಾಲಿನ ದರದಲ್ಲಿ 1ರೂ. ರಿಯಾಯತಿ ನೀಡಲು ಬಮೂಲ್ ಚಿಂತನೆ..!

ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಸುಮಾರು 2 ಲಕ್ಷ ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಉತ್ತಮ ಹಾಲು ಉತ್ಪಾದಕರಿಗೆ, ಹಾಲಿನ ಕ್ಯಾನ್ ವಿತರಣಾ ಕಾರ್ಯಕ್ರಮ ನಡೆಯಿತು.

ಹಾಲಿನ ಪ್ಯಾಕೇಟ್ ತಂದುಕೊಟ್ಟ ಗ್ರಾಹಕರಿಗೆ ಹಾಲಿನ ದರದಲ್ಲಿ 1ರೂ. ರಿಯಾಯತಿ ನೀಡಲು ಬಮೂಲ್ ಚಿಂತನೆ..!

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಪ್ಲಾಸ್ಟಿಕ್ ನಿಷೇಧ. ಈ ಹಿನ್ನಲೆ, ನಮ್ಮ ಬಮೂಲ್​ನಲ್ಲಿ ಪ್ಲಾಸ್ಟಿಕ್ ನಿಷೇಧದ ಜೊತೆಗೆ ಹಾಲಿನ ಪ್ಲಾಸ್ಟಿಕ್ ಮರುಚಕ್ರೀಕರಣಕ್ಕೆ ಒತ್ತು ನೀಡಲಿದ್ದೇವೆ. ಹಾಲಿನ ಪ್ಯಾಕೇಟ್ ತಂದುಕೊಟ್ಟ ಗ್ರಾಹಕರಿಗೆ ಹಾಲಿನ ದರದಲ್ಲಿ ಒಂದು ರೂಪಾಯಿ ರಿಯಾಯತಿ ನೀಡುವ ಕ್ರಮದ ಬಗ್ಗೆ ಬಮೂಲ್ ಚಿಂತನೆ ನಡೆಸಿದೆ. ರೈತರು ಪರಿಶುದ್ಧ ಮತ್ತು ಗುಣಮಟ್ಟದ ಹಾಲನ್ನು ಬಮೂಲ್​ಗೆ ನೀಡಿದಾಗ ಮಾತ್ರ ಸಹಕಾರ ಸಂಘಗಳು ಹಾಗೂ ಬಮೂಲ್ ಎರಡು ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ ಎಂದರು.

ನೆಲಮಂಗಲ ತಾಲೂಕು ಕಳೆದ ಹಲವಾರು ವರ್ಷಗಳಿಂದ ಮಾಡದ ಸಾಧನೆಯನ್ನು ಕಳೆದ ಮೂರು ತಿಂಗಳಲ್ಲಿ ಮಾಡಿದೆ. ಹಾಲಿನ ಗುಣಮಟ್ಟದಲ್ಲಿ ನೆಲಮಂಗಲ ತಾಲೂಕು 92.23 ಎಸ್​ಎನ್​ಎಫ್​ ಹಾಗೂ ಜಿಡ್ಡಿನ ಅಂಶದಲ್ಲಿ 4.2 ಅಂಕ ಗಳಿಸಿ ದಾಖಲೆ ಮಾಡಿ ಪ್ರಥಮ ಸ್ಥಾನದಲ್ಲಿದೆ ಎಂದರು.

Intro:ಹಾಲಿನ ಪ್ಯಾಕೇಟ್ ತಂದುಕೊಟ್ಟ ಗ್ರಾಹಕರಿಗೆ ಹಾಲಿನ ದರದಲ್ಲಿ ಒಂದು ರೂಪಾಯಿ ರಿಯಾಯತಿ ಬಮೂಲ್ ಚಿಂತನೆBody:ನೆಲಮಂಗಲ : ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಹಾಲು ಉತ್ಪಾದಕರ ಸಹಕಾರ ಸಂಘ ದಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಸುಮಾರು ೨ ಲಕ್ಷ ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಉತ್ತಮ ಹಾಲು ಉತ್ಪಾದಕರಿಗೆ, ಹಾಲಿನ ಕ್ಯಾನ್ ವಿತರಣಾ ಕಾರ್ಯಕ್ರಮ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿದ ತಾಲೂಕು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್ ಮಾತನಾಡಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಪ್ಲಾಸ್ಟಿಕ್ ನಿಷೇಧ . ಈ ಹಿನ್ನಲೆಯಲ್ಲಿ ನಮ್ಮ ಬಮೂಲ್ ನಲ್ಲಿ ಪ್ಲಾಸ್ಟಿಕ್ ನಿಷೇಧದ ಜೊತೆಗೆ ಹಾಲಿನ ಪ್ಲಾಸ್ಟಿಕ್ ಮರುಚಕ್ರೀಕರಣಕ್ಕೆ ಒತ್ತು ನೀಡಲಿದ್ದೇವೆ, ಹಾಲಿನ ಪ್ಯಾಕೇಟ್ ತಂದುಕೊಟ್ಟ ಗ್ರಾಹಕರಿಗೆ ಹಾಲಿನ ದರದಲ್ಲಿ ಒಂದು ರೂಪಾಯಿ ರಿಯಾಯತಿ ದರದಲ್ಲಿ ಹಾಲು ನೀಡುವ ಕ್ರಮದ ಬಗ್ಗೆ ಬಮೂಲ್ ಚಿಂತನೆ ನಡೆಸಿದೇ, ರೈತರು ಪರಿಶುದ್ಧ ಮತ್ತು ಗುಣಮಟ್ಟದ ಹಾಲನ್ನು ಬಮೂಲ್ ಗೆ ನೀಡಿದಾಗ ಮಾತ್ರ ಸಹಕಾರ ಸಂಘಗಳು ಹಾಗೂ ಬಮೂಲ್ ಎರಡು ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ ಎಂದರು.

ನೆಲಮಂಗಲ ತಾಲೂಕು ಕಳೆದ ಹಲವಾರು ವರ್ಷಗಳಿಂದ ಮಾಡದ ಸಾಧನೆಯನ್ನು ಕಳೆದ ಮೂರು ತಿಂಗಳಲ್ಲಿ ಮಾಡಿದೇ, ಗುಣಮಟ್ಟದಲ್ಲಿ ನೆಲಮಂಗಲ ತಾಲೂಕು ಬಮೂಲ್ ನಲ್ಲಿ ಪ್ರಥಮ ಸ್ಥಾನ ಪಡೆದಿದೆ, ಹಾಲಿನ ಗುಣಮಟ್ಟದಲ್ಲಿ ನಮ್ಮ ತಾಲೂಕು 92.23 ಎಸ್.ಎನ್.ಎಫ್, ಹಾಗೂ ಜಿಡ್ಡಿನ ಅಂಶದಲ್ಲಿ 4.2 ಅಂಕ ಗಳಿಸಿ ದಾಖಲೆ ಮಾಡಿ ಪ್ರಥಮ ಸ್ಥಾನದಲ್ಲಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಮೂಲ್ ಉಪ ವ್ಯವಸ್ಥಾಪಕ ಗೋಪಾಲಗೌಡ ದೊಡ್ಡೇರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್, ಅಧ್ಯಕ್ಷ ಬಾಳಗಂಗಯ್ಯ, ಉಪಾಧ್ಯಕ್ಷ ಶಿವಣ್ಣ, ಗ್ರಾಮ ಪಂಚಾಯತಿ ಸದಸ್ಯ ಚಂದ್ರಮೋಹನ್, ಪುಷ್ಪಲತಾ, ಮಾಜಿ ಡೇರಿ ಅಧ್ಯಕ್ಷ ಶಿವಾನಂದಮೂರ್ತಿ, ಊರಿನ ಮುಖಂಡ ಮಹೇಶ್, ಬಮೂಲ್ ಕಲ್ಯಾಣ ಟ್ರಸ್ಟ್ ನ ರಮೇಶ್, ಸಿಬ್ಬಂದಿಗಳಾದ ಶ್ರೀಕಂಠೇಶ್ವರ, ನೀಲಕಠಯ್ಯ ಸಂಘದ ನಿರ್ದೇಶಕರಾದ ಚಂದ್ರಶೇಖರಯ್ಯ, ಬಾಳಯ್ಯ, ಗಂಗಾಧರಯ್ಯ, ಮಮತ, ದ್ರಾಕ್ಷಾಯಿಣಮ್ಮ, ಪ್ರಕಾಶ್, ಸಿದ್ದಲಿಂಗಪ್ಪ, ರಾಮಕೃಷ್ಣ, ಚಾಂದ್ ಪಾಷಾ, ಗಂಗಯ್ಯ ಹಾಜರಿದ್ದರು.

01a-ಬೈಟ್ : ಭಾಸ್ಕರ್, ನಿರ್ದೇಶಕ. ಬೆಂಗಳೂರು ಹಾಲು ಒಕ್ಕೂಟ



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.