ETV Bharat / state

ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್.. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ: ಸಿದ್ದರಾಮಯ್ಯ ವಾಗ್ದಾಳಿ

author img

By

Published : Sep 27, 2022, 4:13 PM IST

what-is-the-relation-between-caste-and-corruption-asks-ex-cm-siddaramaiah
ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್... ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ: ಸಿದ್ದರಾಮಯ್ಯ ವಾಗ್ದಾಳಿ

ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್. ಸಿಎಂ ಮತ್ತು ಸರ್ಕಾರದ ಮೇಲೆ ಆರೋಪ ಮಾಡಿದ್ದೇವೆ. ಜಾತಿ ಮೇಲಲ್ಲ. ಭ್ರಷ್ಟಾಚಾರ ಯಾರು ಮಾಡಿದರೂ ಭ್ರಷ್ಟಾಚಾರವೇ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾಗಲಕೋಟೆ: ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್​ ಕುಮಾರ್​ ಕಟೀಲ್ ಒಬ್ಬ ವಿದೂಷಕ ಇದ್ದಂಗೆ. ಅವರಿಗೆ ಪಾಪ ಮೆಚುರಿಟಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಜಿಲ್ಲೆಯ ಜಮಖಂಡಿ ತಾಲೂಕಿನ ನಾಗನೂರಿನ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು ಎಂಬ ನಳಿನ್​ ಕುಮಾರ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ನಾವು ಅಧಿಕಾರದಲ್ಲಿದ್ದಾಗ ವಿಪಕ್ಷದಲ್ಲಿದ್ದಾಗ ಬಿಜೆಪಿಯುವರು ಆಗಲೇ ಯಾಕೆ ಇದನ್ನು ಪ್ರಸ್ತಾಪ ಮಾಡಲಿಲ್ಲ?. ಇವರ ಬಾಯಲ್ಲೇನು ಕಡಬು ಸಿಕ್ಕಿ ಹಾಕಿಕೊಂಡಿತ್ತಾ?. ನಮ್ಮ ಕಾಲದ್ದೂ ಸೇರಿ ಕಳೆದ 16 ವರ್ಷ ಹಿಂದಿನ ಪ್ರಕರಣಗಳ ಬಗ್ಗೆ ತನಿಖೆ ಮಾಡಿಸಿ. ನಿಮಗ್ಯಾಕೆ ಭಯ ಎಂದು ತಿರುಗೇಟು ನೀಡಿದರು.

ನಮ್ಮ ಸರ್ಕಾರವನ್ನು ಮೋದಿ ಶೇ.10ರಷ್ಟು ಕಮಿಷನ್​ ಅಂತ ಆರೋಪ ಮಾಡಿದ್ದರು. ಅದಕ್ಕೆ ಯಾವ ದಾಖಲೆ ಕೊಟ್ಟಿದ್ರಾ?. ಆವಾಗ ಯಾವ ದಾಖಲೆ ನೀಡಿದ್ದರು?. ಈ ಕಟೀಲ್ ಆಗ ಎಲ್ಲಿದ್ದ?. ಆಗ ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿದ್ದರು. ನರೇಂದ್ರ ಮೋದಿ ಕಡೆಯಿಂದ ಹೇಳಿಸಿದವರೇ ಇವರೇ ಅಲ್ವಾ ಎಂದು ಕಿಡಿಕಾರಿದರು.

ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್... ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ: ಸಿದ್ದರಾಮಯ್ಯ ವಾಗ್ದಾಳಿ

ಎಸಿಬಿ ರದ್ದು ಮಾಡಿದ್ದು ಹೈಕೋರ್ಟ್​​: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ, ಇದನ್ನು ರದ್ದು ಮಾಡಿದ್ದು ಇವರಾ?. ಎಸಿಬಿ ರದ್ದು ಮಾಡಿದ್ದು ಹೈಕೋರ್ಟ್​. ಬಿಜೆಪಿಯವರಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಲೋಕಾಯುಕ್ತದ ಬಗ್ಗೆ ಇವರಿಗೆ ಮಾತನಾಡಲು ಯಾವ ನೈತಿಕತೆ ಇದೆ. ಹಿಂದೆ ಲೋಕಾಯುಕ್ತ ಅಧಿಕಾರಿ ಮಗ ಲೋಕಾಯುಕ್ತರ ಮನೆಯಲ್ಲೇ ಲಂಚ ತೆಗೆದುಕೊಳ್ಳುತ್ತಿದ್ದ. ಅದಕ್ಕಾಗಿ ನಾನು ಎಸಿಬಿಗೆ ಹೆಚ್ಚು ಪವರ್ ಕೊಟ್ಟಿದ್ದು ನಿಜ. ಈಗ ಭ್ರಷ್ಟಾಚಾರದಲ್ಲಿ ಬಿಜೆಪಿಗರು ಸಿಕ್ಕಾಕೊಂಡ ಬಿಟ್ಟಿದ್ದಾರಲ್ಲಾ, ಅದಕ್ಕೆ ಇವನ್ನೆಲ್ಲ ಬಿಜೆಪಿಯವರು ಹೇಳುತ್ತಿರುವುದು ಎಂದು ಹೇಳಿದರು.

ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ?: ಈಗ ಜನರ ಗಮನ ಬೇರೆಡೆ ಸೆಳೆಯಲು ನನ್ನ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಕಮಿಷನ್ ಆರೋಪದ ಬಗ್ಗೆ ಸಿಎಂಗೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಅಧಿವೇಶನದಲ್ಲೇ ಹೇಳಿದ್ದೆ. ಅದಕ್ಕೆ ಉತ್ತರ ನೀಡಲಿಲ್ಲ. ಅದನ್ನೆಲ್ಲಾ ಬಿಟ್ಟು ಈಗ ಜಾತಿಗೆ ನಿಂತಿದ್ದಾರೆ. ಜಾತಿಗೂ, ಭ್ರಷ್ಟಾಚಾರಕ್ಕೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್. ಸಿಎಂ ಮತ್ತು ಸರ್ಕಾರದ ಮೇಲೆ ಆರೋಪ ಮಾಡಿದ್ದೇವೆ. ಜಾತಿ ಮೇಲಲ್ಲ. ಭ್ರಷ್ಟಾಚಾರ ಯಾರು ಮಾಡಿದರೂ ಭ್ರಷ್ಟಾಚಾರವೇ. ಆದರೆ, ಕ್ಷುಲ್ಲಕ ವಿಚಾರ ಜನರ ಮುಂದಿಟ್ಟು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ. ಈಗ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ನೋ ಸ್ಟ್ರಾಂಗ್, ನೋ ಎಲಿಮೀಸ್: ಇದೇ ವೇಳೆ ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್... ಲೆಸ್ ಸ್ಟ್ರಾಂಗ್, ಲೆಸ್ ಎನಿಮೀಸ್... ನೋ ಸ್ಟ್ರಾಂಗ್, ನೋ ಎನಿಮೀಸ್ ಎಂದ ಸಿದ್ದರಾಮಯ್ಯ, ನಾನು ಸ್ಟ್ರಾಂಗ್ ಇರುವುದಕ್ಕೆ ಬಿಜೆಪಿಗರಿಗೆ ನನ್ನ ಮೇಲೆ ಕೋಪ. ದೊಡ್ಡಬಳ್ಳಾಪುರ ಸಮಾವೇಶದಲ್ಲಿನ ಬಿಜೆಪಿಗರು ಮಾತನಾಡಿದ್ದು ಯಾರ ಬಗ್ಗೆ?. ನನ್ನ ಕಂಡರೆ ಬಿಜೆಪಿಗರಿಗೆ ಭಯ. ಈ ಭಯದಿಂದ ನನ್ನ ವಿರುದ್ಧ ಹಿಂಗೆಲ್ಲ ಮಾಡುತ್ತಾರೆ ಎಂದು ಕುಟುಕಿದರು.

ಪಿಎಫ್ಐ ಬೆಳೆಸಿದ್ದೇ ಸಿದ್ದರಾಮಯ್ಯ ಎಂಬ ಕಟೀಲ್ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಯಾರೇ ತಪ್ಪಿತಸ್ಥರಿಗೂ ನಾವು ಸಹಾಯ ಮಾಡಿಲ್ಲ. ಅದರ ಪ್ರಶ್ನೆಯೂ ಬರುವುದಿಲ್ಲ ಎಂದರು.

ಇದನ್ನೂ ಓದಿ: ಲೋಕಾಯುಕ್ತ ಇದ್ದಿದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು: ನಳೀನ್ ಕುಮಾರ್ ಕಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.