ETV Bharat / state

ಬದಾಮಿಯ ನೆರೆ ಪೀಡಿತ ಸ್ಥಳಕ್ಕೆ ಸಿದ್ದು ಪುತ್ರ ಡಾ.ಯತ್ರಿಂದ್ರ.. ತಂದೆಯ ಅನುಪಸ್ಥಿತಿ ತುಂಬಿದ ಮಗ!

author img

By

Published : Aug 11, 2019, 3:35 PM IST

ಡಾ.ಯತ್ರಿಂದ್ರ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು

ಮಲಪ್ರಭಾ ನದಿ ಪ್ರವಾಹದಿಂದ ಬದಾಮಿ ಮತ ಕ್ಷೇತ್ರದಲ್ಲಿ ಕೆಲ ಗ್ರಾಮಗಳು ಜಲಾವೃತ್ತಗೊಂಡಿದ್ದು, ಸಂತ್ರಸ್ತರು ತೊಂದರೆ ಪಡುತ್ತಿರುವ ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಪುತ್ರ ಡಾ.ಯತ್ರಿಂದ್ರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವ ಮೂಲಕ ತಂದೆಯ ಅನುಪಸ್ಥಿ ತುಂಬುತ್ತಿದ್ದಾರೆ.

ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದ ಬದಾಮಿ ಮತಕ್ಷೇತ್ರದಲ್ಲಿ ಕೆಲ ಗ್ರಾಮಗಳು ಜಲಾವೃತಗೊಂಡು ಸಂತ್ರಸ್ತರು ತೊಂದರೆ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಸಿದ್ದರಾಮಯ್ಯನವರ ಪುತ್ರ ಡಾ.ಯತ್ರಿಂದ್ರ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭೇಟಿ ನೀಡಿ ಸಮಸ್ಯೆ ಆಲಿಸುವ ಮೂಲಕ ಸಿದ್ದರಾಮಯ್ಯನವರ ಅನುಪಸ್ಥಿತಿ ತುಂಬುತ್ತಿದ್ದಾರೆ.

yathindra
ಶಾಸಕ ಡಾ.ಯತ್ರಿಂದ್ರ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ..

ಮಲಪ್ರಭಾ ನದಿಯಿಂದ ಪ್ರವಾಹ ಉಂಟಾಗಿರುವ ಪಟ್ಟದಕಲ್ಲು, ಶಿರಬಡಗಿ, ಗೋನಾಳ,ಮಂಗಳಗುಡ್ಡ,ಆಸಂಗಿ,ಕ್ಯಾಡ್ ಹೆಬ್ಬಳ್ಳಿ,ಕೊಣ್ಣೂರ ಸೇತುವೆ ಸೇರಿ ಇತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಸರ್ಕಾರದಿಂದ ಪರಿಹಾರ ನೀಡುವ ಕಾರ್ಯ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯನವರು ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾಗಿರುವ ಹಿನ್ನೆಲೆಯಲ್ಲಿ ತಮ್ಮ ಬದಾಮಿ ಕ್ಷೇತ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ಹೇಳಲಾಗುತ್ತಿಲ್ಲ ಅಂತಾ ಹೇಳಿದ್ದರು. ಆದರೆ, ಅವರ ಬದಲು ಅವರ ಪುತ್ರ ಬಂದು ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂಚಾರ ಮಾಡಿ ತಂದೆಯ ಕಾರ್ಯ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

Intro:AnchorBody:ಬಾಗಲಕೋಟೆ-- ಮಲ್ಲಪ್ರಭಾ ನದಿ ಪ್ರವಾಹ ದಿಂದ ಬಾದಾಮಿ ಮತಕ್ಷೇತ್ರದಲ್ಲಿ ಕೆಲ ಗ್ರಾಮಗಳು ಜಲಾವೃತ್ತಗೊಂಡು,ಸಂತ್ರಸ್ಥರು ತೊಂದರೆ ಪಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಭೇಟ್ಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನವರ ಪುತ್ರ ಡಾ.ಯತ್ರಿಂದ್ರ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭೇಟ್ಟಿ ನೀಡಿ ಸಮಸ್ಯೆ ಆಲಿಸುವ ಮೂಲಕ ಸಿದ್ದರಾಮಯ್ಯ ನವರು ಅನುಪಸ್ಥಿಯನ್ನು ತುಂಬುತ್ತಿದ್ದಾರೆ.ಮಲ್ಲಪ್ರಭಾ ನದಿಯಿಂದ ಪ್ರವಾಹ ಉಂಟಾಗಿರುವ ಪಟ್ಟದಕಲ್ಲು, ಶಿರಬಡಗಿ ಗೋನಾಳ,ಮಂಗಳಗುಡ್ಡ,ಆಸಂಗಿ,ಕ್ಯಾಡ್ ಹೆಬ್ಬಳ್ಳಿ,ಕೊಣ್ಣೂರ ಸೇತುವೆ ಸೇರಿದಂತೆ ಇತರ ಪ್ರದೇಶದಲ್ಲಿ ಭೇಟ್ಟಿ ಪರಿಶೀಲನೆ ನಡೆಸುವ ಜೊತೆಗೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ,ಸರ್ಕಾರ ದಿಂದ ಪರಿಹಾರ ನೀಡುವ ಕಾರ್ಯ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ನವರು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಚಾರ ಸಾಧ್ಯ ಇಲ್ಲಾ ಎಂದು ತಿಳಿಸಿದ್ದರು. ಈಗ ಅವರ ಪುತ್ರ ಬಂದು ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂಚಾರ ಮಾಡಿ ತಂದೆ ಕಾರ್ಯ ಮಾಡುತ್ತಿರುವದು ಚರ್ಚೆ ಗೆ ಗ್ರಾಸವಾಗಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.