ETV Bharat / state

ತೋಟಗಾರಿಕೆ ಮೇಳದ ಮೇಲೂ ಕೊರೊನಾ ಕರಿಛಾಯೆ

author img

By

Published : Jan 2, 2021, 5:41 PM IST

Updated : Jun 29, 2022, 10:43 AM IST

ಬಾಗಲಕೋಟೆ ಜಿಲ್ಲೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಇಂದಿನಿಂದ 3 ದಿನಗಳ ಕಾಲ ತೋಟಗಾರಿಕಾ ಮೇಳ ಆಯೋಜಿಸಿದ್ದು, ಇದರಲ್ಲಿ ರೈತರಿಗೆ ವಿವಿಧ ಬೆಳೆಗಳ ಕುರಿತು ಮಾಹಿತಿ ಸಹ ನೀಡಲಾಗ್ತಿದೆ.

horticulture mela organized in bagalkote
ತೋಟಗಾರಿಕೆ ಮೇಳ ಆಯೋಜನೆ

ಬಾಗಲಕೋಟೆ: ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ‌ ನಡೆಯಲಿರುವ ತೋಟಗಾರಿಕೆ ಮೇಳವು ಈ ಬಾರಿ‌ ಕೊರೊನಾ ಕಾರಣಕ್ಕೆ‌ ಕಳೆಗುಂದಿದೆ.

ತೋಟಗಾರಿಕೆ ಮೇಳ ಆಯೋಜನೆ

ವಸ್ತು ಪ್ರದರ್ಶನ, ಮಾರಾಟ ಮೇಳದ‌ ಮಳಿಗೆಗಳು ಇಲ್ಲದೆ ಬರೀ ಫಲಪುಷ್ಪ ಪ್ರದರ್ಶನ, ತರಕಾರಿ, ಹಣ್ಣು-ಹಂಪಲುಗಳ ಜೊತೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆಯಲಾದ ವಿವಿಧ ಬಗೆಯ ಪುಷ್ಪಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯ ನಡೆದಿದೆ.

ಕೊರೊನಾ ನಿಯಮ ಪಾಲಿಸುವ ದೃಷ್ಟಿಯಿಂದ ಹೆಚ್ಚಿನ ರೈತರಿಗೆ ಮಾಹಿತಿ ನೀಡದೆ ಕೆಲವೇ ರೈತರಿಗೆ ವಿಶ್ವವಿದ್ಯಾಲಯಕ್ಕೆ ಆಗಮಿಸಿ, ವೀಕ್ಷಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಆನ್​​ಲೈನ್​ನಲ್ಲಿ ಕೂಡ ಮಾಹಿತಿ ನೀಡಲಾಗ್ತಿದ್ದು, ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡುವ ಕಾರ್ಯ ಜರುಗಿದೆ. ಹೆಚ್ಚು ಜನ ಇಲ್ಲದೆ ಈ ಬಾರಿ‌ ಮೇಳ ನಡೆಯುತ್ತಿದೆ.

ಇನ್ನು ತರಕಾರಿಗಳಲ್ಲಿ ವಿವಿಧ ಬೆಳೆ ಹಾಗೂ ವಿದೇಶಿ ತಳಿ ಬೆಳೆದು ರೈತರು ಯಾವ ರೀತಿ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಮಾಹಿತಿ ಸೇರಿದಂತೆ ತರಕಾರಿ, ಹಣ್ಣುಗಳ ಪ್ರದರ್ಶನ ಏರ್ಪಡಿಸಲಾಗಿದೆ. ಜೊತೆಗೆ ಕೊರೊನಾ ಹೋಗಲಾಡಿಸುವುದಕ್ಕೆ ಕಷಾಯ, ಔಷಧ ಉಪಯೋಗ, ಮಾರಾಟ, ಪ್ರದರ್ಶನ ಕೂಡ ನಡೆಸಲಾಗಿದೆ. ಇದರಲ್ಲಿ ಲವಂಗ, ಚಕ್ಕಿ, ದಾಲ್ಚಿನ್ನಿ ಸೇರಿದಂತೆ ಇತರ ಆಹಾರ ಪದಾರ್ಥಗಳಿಂದ ನೋವು ನಿವಾರಕ ಎಣ್ಣೆ ತಯಾರಿಸಿ ರೈತರು ಮಾರಾಟ ಮಾಡಿ ಹೇಗೆ ಹೆಚ್ಚಿನ ಆದಾಯ ಗಳಿಸಬಹುದು‌ ಎಂಬುದರ ಕುರಿತು ಮಾಹಿತಿ ನೀಡಲಾಗುತ್ತಿದೆ.

ಇದನ್ನೂ ಓದಿ:ನಾಲ್ಕೇ ದಿನಗಳಲ್ಲಿ ಭಾರತ-ಇಂಗ್ಲೆಂಡ್​ ನಡುವೆ ವಿಮಾನ ಸೇವೆ ಪುನಾರಂಭ: ಹರ್ದೀಪ್ ಸಿಂಗ್ ಪುರಿ

Last Updated : Jun 29, 2022, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.