ETV Bharat / state

ಆಸ್ತಿಗಾಗಿ ಜೋಡಿ ಕೊಲೆ: ಆರೋಪಿ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ ಪೊಲೀಸರು

author img

By

Published : Mar 13, 2023, 9:51 PM IST

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಸೋಮವಾರಪೇಟೆಯ ಕುರುಬರ ಓಣಿಯಲ್ಲಿ ಆಸ್ತಿ ವಿಚಾರಕ್ಕಾಗಿ ಜೋಡಿ ಕೊಲೆ ನಡೆದಿದೆ.

ಬಾಗಲಕೋಟೆ
ಬಾಗಲಕೋಟೆ

ಬಾಗಲಕೋಟೆ : ಆಸ್ತಿ ವಿಚಾರಕ್ಕಾಗಿ ಕಲಹ ಉಂಟಾಗಿ, ಸಂಬಂಧಿಕರಿಂದಲೇ ಇಬ್ಬರು ಸಹೋದರಿಯರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಸೋಮವಾರ ಪೇಟೆಯ ಕುರುಬರ ಓಣಿಯಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಯಲ್ಲವ್ವ ಭುಜಂಗ (48) ಹಾಗೂ ಬೌರವ್ವ ಭುಜಂಗ (45) ಕೊಲೆಯಾದ ದುರ್ದೈವಿಗಳು. ಸಹೋದರ ಅತ್ತಿ ಮಗ ಕಟ್ಟಿಗೆ ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಬಗ್ಗೆ ಮಾಹಿತಿ ಇದೆ.

ಘಟನೆ ಮಾಹಿತಿ ಪಡೆದ ಬನಹಟ್ಟಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಮದುವೆಯಾದರೂ ತವರು ಮನೆಯಲ್ಲಿ ವಾಸವಿದ್ದ ಇಬ್ಬರು ಮಹಿಳೆಯರು, ನಿತ್ಯ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಕೊಲೆಗೆ ಆಸ್ತಿಯ ವಿಚಾರವೋ ಅಥವಾ ಅನೈತಿಕ ಸಂಬಂಧವೇ ಎಂಬುದು ಪೊಲೀಸರು ತನಿಖೆ ನಡೆಸಬೇಕಾಗಿದೆ.

ಹಲಗೆ ಬಾರಿಸುವ ವಿಚಾರವಾಗಿ ಗಲಾಟೆ; ಯುವಕನಿಗೆ ಚೂರಿ ಇರಿದು ಕೊಲೆ: ಇನ್ನೊಂದೆಡೆ ಹೋಳಿ ಹಬ್ಬದ ಸಂದರ್ಭದಲ್ಲಿ ಹಲಗೆ ಬಾರಿಸುವ ವಿಚಾರವಾಗಿ ಗಲಾಟೆ ನಡೆದು ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯ ಮುಧೋಳ ನಗರದ ಟೀಚರ್ಸ್​​ ಕಾಲೋನಿಯಲ್ಲಿ ಮಾರ್ಚ್​ (8 ) ರಂದು ನಡೆದಿದೆ. ಮೃತ ಯುವಕನನ್ನು ಗಿರೀಶ್​ ಪಾಲೋಜಿ (22) ಎಂದು ಗುರುತಿಸಲಾಗಿದೆ. ಈ ಸಂಬಂಧ ಓರ್ವ ಅಪ್ರಾಪ್ತ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹನುಮಂತ ಕಾಂಬಳೆ, ಅನಿಲ ಕಾಂಬಳೆ, ರಾಘವೇಂದ್ರ ಕಾಂಬಳೆ, ಸುಚಿತ್ ಬಂಡಿವಡ್ಡರ್, ಕಾರ್ತಿಕ್ ಮಳಗಾವಿ ಎಂದು ಗುರುತಿಸಲಾಗಿದೆ.

ಮೃತ ಗಿರೀಶ್ ಸಂಬಂಧಿ ಹೇಮಂತ್ ಪಾಲೋಜಿ ಹಾಗೂ ಹನುಮಂತ ಕಾಂಬಳೆ ಮಧ್ಯೆ ಮೊದಲು ಹಲಗೆ ಬಾರಿಸುವ ವಿಚಾರಕ್ಕೆ ಜಗಳ ನಡೆದಿದೆ. ಹೇಮಂತ್ ಪಾಲೊಜಿ ಹನುಮಂತ ಕಾಂಬಳೆಗೆ ಇಲ್ಲಿ ಹಲಗೆ ಬಾರಿಸಬೇಡ ಎಂದು ಹೇಳಿದ್ದಾನೆ. ಅಷ್ಟಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ‌ ಎಂಬುದು ತಿಳಿದು ಬಂದಿದೆ. ಈ ವೇಳೆ, ಹೇಮಂತ್ ಗಿರೀಶ್​ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಇನ್ನೊಂದು ಕಡೆ ಹನುಮಂತ ತನ್ನ ಸಂಬಂಧಿಕರನ್ನು ಕರೆದುಕೊಂಡು ಬಂದಿದ್ದಾನೆ.

ಇದನ್ನೂ ಓದಿ : ಗಗನಸಖಿ‌ ಅನುಮಾನಾಸ್ಪದ ಸಾವು ಪ್ರಕರಣ: ಹತ್ಯೆ ಪ್ರಕರಣ ದಾಖಲು, ಪ್ರಿಯಕರ ಪೊಲೀಸ್ ವಶಕ್ಕೆ

ಅಲ್ಲದೇ ಇಲ್ಲಿನ ಕಾಮಣ್ಣನ ಗಡಿಗೆಯನ್ನು ಒಡೆದಿದ್ದಾನೆ. ಇದು ಎರಡು ಗುಂಪುಗಳ ನಡುವಿನ ಜಗಳ‌ಕ್ಕೆ ಕಾರಣವಾಗಿದೆ. ಜಗಳದಲ್ಲಿ ಹೇಮಂತ್ ಹಾಗೂ ಇತರರು ಪರಾರಿಯಾಗಿದ್ದು, ಈ ವೇಳೆ ಗಿರೀಶ್​ಗೆ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದು ಕೊಲೆ ‌ಮಾಡಲಾಗಿದೆ. ಈ ವೇಳೆ, ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರೂ ಯಾರೊಬ್ಬರು ಗಿರೀಶ್ ಹತ್ತಿರ ಸುಳಿದಿಲ್ಲ. ಬಳಿಕ ಗಿರೀಶ್​ನನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಯಾದಗಿರಿ ದರೋಡೆ‌ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.