ETV Bharat / state

ಲೈಂಗಿಕ‌ ಕಾರ್ಯಕರ್ತೆಯರ ಬಗ್ಗೆ ವಿವಾದಿತ ಹೇಳಿಕೆ: ಕ್ಷಮೆ ಕೋರಿದ ಬಿ.ಕೆ.ಹರಿಪ್ರಸಾದ್​

author img

By

Published : Jan 18, 2023, 2:15 PM IST

ಲೈಂಗಿಕ‌ ಕಾರ್ಯಕರ್ತೆಯರ ಬಗ್ಗೆ ನೀಡಿದ ಹೇಳಿಕೆ ವಿಚಾರವಾಗಿ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ಕ್ಷಮೆ ಯಾಚಿಸಿದ್ದಾರೆ.

BK Hariprasad
ಬಿ ಕೆ ಹರಿಪ್ರಸಾದ್

ಬಾಗಲಕೋಟೆ : ಹೊಸಪೇಟೆಯಲ್ಲಿ ಲೈಂಗಿಕ‌ ಕಾರ್ಯಕರ್ತೆಯರ ಬಗ್ಗೆ ಹೇಳಿಕೆ ವಿಚಾರವಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದು, ಕೆಲವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಲೈಂಗಿಕ ಕಾರ್ಯಕರ್ತೆಯ ವೃತ್ತಿಯ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದರು. ಇದೆೇ ವೇಳೆ, ಲೈಂಗಿಕ ಕಾರ್ಯಕರ್ತೆಯರ ಮನಸ್ಸಿಗೆ ನೋವಾಗಿದ್ಧರೆ ನಾನು ಕ್ಷಮೆ ಕೋರುತ್ತೇನೆ ಎಂದರು. ಬಾಗಲಕೋಟೆಯ ನವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ತಮ್ಮನ್ನು ತಾವೇ ಮಾರಿಕೊಂಡಿರುವ ನಾಯಕ ಒಬ್ಬ ಪ್ರೊಡ್ಯೂಸರ್ ಈ ರೀತಿ ಹಾಗೂ ಗರತಿಯರ ತರಹ ಹೇಳಿಕೆ ನೀಡಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಹರಿಪ್ರಸಾದ್‌ ಕಿಡಿಕಾರಿದ್ದರು. ಯಶವಂತಪುರದಲ್ಲಿ ಪೊರಕೆ ಹಾಗೂ ಚಪ್ಪಲಿ ತಗೊಂಡು ಯಾಕೆ ಹೊಡಿಸಿಕೊಂಡರು ಎಂಬುದನ್ನು ಕೇಳಿ. ಅವರ ಹೇಳಿಕೆ ಬಗ್ಗೆ ಟೀಕೆ, ಟಿಪ್ಪಣಿ ಕೊಡಲ್ಲ. ನಾನು ರಾಜಮಾರ್ಗದಿಂದ ಬಂದವನು. ಅವರಂತೆ ಸಿಕ್ರೇಟ್ ಬಾಗಿಲಲ್ಲಿ ಬಂದಿಲ್ಲ. ಸೈದ್ಧಾಂತಿಕವಾಗಿ ಕೆಲ ವಿಚಾರದಲ್ಲಿ ಭಿನ್ನ ಅಭಿಪ್ರಾಯವಿದ್ದರೂ ಸಹ ವಾಜಪೇಯಿ ಹಾಗೂ ಅಡ್ವಾಣಿಯವರು ಪಕ್ಷವನ್ನು ವಿಲೀನ ಮಾಡಿದಾಗ ಮಾರಾಟವಾಗಿದ್ದಾರೆ ಎಂದು ಯಾರೂ ಹೇಳಿರಲಿಲ್ಲ ಎಂದರು.

ಬಿ.ಸಿ.ಪಾಟೀಲ್ ಅವರು ಮಂತ್ರಿಯಾಗಲು ಏನೇನ್ ಮಾಡಿದ್ದಾರೆ ಅಂತಾ ನಾನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಸ್ಕ್ರಾಪ್ ರವಿ, ಫೈಟರ್ ರವಿ, ಸಿಟಿ ರವಿ ಹೀಗೆ ರವಿಗಳು ಬಹಳಷ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ನಾನು ಪಕ್ಷ ಬದಲಾವಣೆ ವಿಚಾರದಲ್ಲಿ ಇವರ ತರಹ ಗೋಸುಂಬೆಯಂತೆ ನಡೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಗ್ದಾಳಿ ಮುಂದುವರಿಸಿದ ಬಿ.ಕೆ.ಹರಿಪ್ರಸಾದ್​, ಮುನಿರತ್ನ ಏನು ಅಂತಾ ನನಗೆ ಚೆನ್ನಾಗಿ ಗೊತ್ತು ಎಂದು ಟಾಂಗ್ ಕೊಟ್ಟರು. ಬಿಜೆಪಿಯ ಶಾಸಕ ಯತ್ನಾಳ್ ಅವರು ಒಬ್ಬರಿಗೆ ಪಿಂಪ್ ಅಂತಾರೆ, ಸಪ್ಲೈ‌ ಮಾಡಿ ಮಂತ್ರಿ‌ ಆಗಿದ್ದಾರೆ ಅಂತಾ ಹೇಳಿದ್ದಾರೆ. ಸಿಎಂ ಭಾಷೆಯಲ್ಲಿ ಹೇಳೋದಾದರೆ, ಅವರಿಗೆ ಧಮ್ ತಾಕತ್ ಇದ್ರೆ ಯತ್ನಾಳ್ ಹೇಳಿಕೆ ಬಗ್ಗೆ ತನಿಖೆ ಮಾಡಲಿ. ಬಿಜೆಪಿಯವರಿಗೆ ಗಂಡಸ್ತನ ಇದ್ರೆ ಎರಡು ವರ್ಷದಿಂದ ಮಾತನಾಡುತ್ತಿರುವ ಯತ್ನಾಳ್ ವಿರುದ್ದ ಕ್ರಮ ತೆಗೆದುಕೊಳ್ಳಲಿ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಬಿ.ಕೆ.ಹರಿಪ್ರಸಾದ್​ ಅವರನ್ನು ಪಿಂಪ್ ಎಂದು ಕರೆಯಬಹುದಾ?: ಸಚಿವ ಬಿ.ಸಿ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.