ETV Bharat / sports

Olympics ಕುಸ್ತಿ: ರವಿ, ದೀಪಕ್​ಗೆ ಸುಲಭ ಸವಾಲು.... ಅನ್ಶು ಮಲ್ಲಿಕ್​ಗೆ ಯುರೋಪಿಯನ್ ಚಾಂಪಿಯನ್ ಎದುರಾಳಿ​

author img

By

Published : Aug 3, 2021, 3:40 PM IST

86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ ತಮ್ಮ ಮೊದಲ ಪಂದ್ಯದಲ್ಲಿ ಆಫ್ರಿಕನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ನೈಜೀರಿಯಾದ ಎಕೆರೆಕೆಮೆ ಅಗಿಯೊಮೋರ್ ವಿರುದ್ಧ ಸ್ಪರ್ಧಿಸಲಿದ್ದಾರೆ.

Ravi and Deepak get good draw;
ರವಿ, ದೀಪಕ್​ ಪೂನಿಯಾ

ಟೋಕಿಯೋ: ಭಾರತದ ಸ್ಟಾರ್ ಕುಸ್ತಿಪಟುಗಳಾದ ರವಿ ದಹಿಯಾ ಮತ್ತು ದೀಪಕ್​ ಪೂನಿಯಾ ಮಂಗಳವಾರ ಬಿಡುಗಡೆಯಾಗಿರುವ ಡ್ರಾನಲ್ಲಿ ಸುಲಭದ ಸವಾಲು ಪಡೆದಿದ್ದಾರೆ. ರವಿ ಕೊಲಂಬಿಯಾದ ​ಟೈಗ್ರೆರೋಸ್ ಉರ್ಬಾನೋ ಅವರನ್ನು ಎದುರಿಸಲಿದ್ದಾರೆ. ಭಾರತೀಯ ಕುಸ್ತಿಪಟುಗೆ ಸೆಮಿಫೈನಲ್​ ಪ್ರವೇಶಿಸುವುದು ಕಷ್ಟ ಪಡಬೇಕಾಗಿಲ್ಲ.

2019ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದಿರುವ ದಹಿಯಾ ಏಷ್ಯನ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಕೊಲಂಬಿಯಾ ಕುಸ್ತಿಪಟುವಿನ ವಿರುದ್ಧ ಗೆಲುವು ಸಾಧಿಸಿದರೆ, ನಂತರ ಅಲ್ಜೀರಿಯಾದ ಅಬ್ದೆಲ್ಹಾಕ್ ಖೇರಾಬಾಚ್ ಅಥವಾ ಬಲ್ಗೆರಿಯಾದ ಜಾರ್ಜಿ ವ್ಯಾಲೆಂಟಿನೋವ್ ವಾಂಗೆಲೋವ್​ ಸವಾಲು ಎದುರಿಸಲಿದ್ದಾರೆ.

ಸೆಮಿಫೈನಲ್​ನಲ್ಲಿ ಟಾಪ್ ಸೀಡ್ ಆಗಿರುವ ಸರ್ಬಿಯಾದ ಸ್ಟೆವನ್​ ಆ್ಯಂಡಿಯಾ ಮಿಕಿಕ್​ ಅಥವಾ ಜಪಾನ್​ನ ಯುಕಿ ತಕಹಶಿ ವಿರುದ್ಧ ಸೆಣಸಾಡುವ ಸಾಧ್ಯತೆಯಿದೆ.86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ ತಮ್ಮ ಮೊದಲ ಪಂದ್ಯದಲ್ಲಿ ಆಫ್ರಿಕನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ನೈಜೀರಿಯಾದ ಎಕೆರೆಕೆಮೆ ಅಗಿಯೊಮೋರ್ ವಿರುದ್ಧ ಸ್ಪರ್ಧಿಸಲಿದ್ದಾರೆ.

2019ರ ವಿಶ್ವ ಚಾಂಪಿಯನ್​ಶಿಪ್​ ಫೈನಲಿಸ್ಟ್ ಆಗಿರುವ ದೀಪಕ್​ ಮೊದಲ ಪಂದ್ಯ ಗೆದ್ದರೆ, ಚೀನಾದ ಜುಶೆನ್ ಲಿನ್ ಅಥವಾ ಪೆರು ಕುಸ್ತಿಪಟು ಎಡಿಸನ್​ ಆ್ಯಂಬ್ರೋಸಿಯೋ ಗ್ರೀಫ್​ ವಿರುದ್ಧ ಕಣಕ್ಕಿಳಿಯಲಿದ್ದಾರೆ.19 ವರ್ಷದ ಅನ್ಶು ಮಲಿಕ್​ಗೆ ಮಹಿಳೆಯರ ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್​ ಇರಾನ್​ನ ಕುರಚಿಕಿನಾ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಈ ಪಂದ್ಯ ಗೆದ್ದರೆ ಅವರು ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ರಷ್ಯಾದ ವಲೇರಿಯಾ ಕೊಬ್ಲೋವ್​ ಅಥವಾ ಮೆಕ್ಸಿಕೋದ ಆಲ್ಮಾ ಜೇನ್​ ಅವರನ್ನು ಎದುರಿಸಲಿದ್ದಾರೆ.

ಪದಕ ಭರವಸೆ ಮೂಡಿಸಿರುವ ಬಜರಂಗ್​ ಪೂನಿಯಾ ಮತ್ತು ವಿನೇಶ್ ಫೋಗಟ್​ ಆಗಸ್ಟ್​ 6ರಂದು ಕಣಕ್ಕಿಳಿಯಲಿದ್ದಾರೆ. ಅವರ ಡ್ರಾ ಇನ್ನೂ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: ಕುಸ್ತಿಯಲ್ಲಿ ಸೋನಮ್​ ಮಲಿಕ್​ಗೆ ನಿರಾಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.