ETV Bharat / sports

ದುಬೈ ಓಪನ್​: ದ್ವಿತೀಯ ಸುತ್ತಿನಲ್ಲೇ ಮುಗ್ಗರಿಸಿದ ಸಾನಿಯಾ ಜೋಡಿ

author img

By

Published : Feb 20, 2020, 8:14 PM IST

ಫ್ರಾನ್ಸ್​ನ ಕ್ಯಾರೋಲಿನ್​ ಗ್ರಾಸಿಯಾ ಜೊತೆಗೂಡಿ ದುಬೈ ಓಪನ್​ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ ಮಿರ್ಜಾ 6-2, 6-4 ನೇರ ಸೆಟ್​ಗಳ ಅಂತರದಲ್ಲಿ 5ನೇ ಶ್ರೇಯಾಂಕದ ಚೀನ್​ - ಜೆಕ್​ ಜೋಡಿಯಾದ ಸೈಸೈ ಝೆಂಗ್ ​-ಬಾರ್ಬೊರಾ ಕ್ರೆಸಿಕೋವಾ ವಿರುದ್ಧ ಸೋಲು ಕಂಡರು.
Dubai Open
ಸಾನಿಯಾ ಜೋಡಿಗೆ ಸೋಲು

ದುಬೈ: ಭಾರತದ ಸ್ಟಾರ್​ ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ದುಬೈ ಓಪನ್​ನ ಮಹಿಳೆಯರ ಡಬಲ್ಸ್​ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋತು ಹೊರಬಿದ್ದಿದ್ದಾರೆ.

ಫ್ರಾನ್ಸ್​ನ ಕ್ಯಾರೋಲಿನ್​ ಗ್ರಾಸಿಯಾ ಜೊತೆಗೂಡಿ ದುಬೈ ಓಪನ್​ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ ಮಿರ್ಜಾ 6-2, 6-4 ನೇರ ಸೆಟ್​ಗಳ ಅಂತರದಲ್ಲಿ 5ನೇ ಶ್ರೇಯಾಂಕದ ಚೀನ್​-ಜೆಕ್​ ಜೋಡಿಯಾದ ಸೈಸೈ ಝೆಂಗ್​-ಬಾರ್ಬೊರಾ ಕ್ರೆಸಿಕೋವಾ ವಿರುದ್ಧ ಸೋಲು ಕಂಡರು.

ಇದಕ್ಕೂ ಮುನ್ನ ಮಂಗಳವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ - ಗ್ರಾಸಿಯಾ ಮೊದಲ ಸುತ್ತಿನ ಪಂದ್ಯದಲ್ಲಿ 6-4, 4-6, 10-8 ರಷ್ಯಾದ ಅಲ್ಲಾ ಕುದ್ರಿಯವತ್ಸೇವ ಹಾಗೂ ಸ್ಲೊವೇನಿಯಾದ ಕ್ಯಾತರಿನಾ ಸ್ರೆಬೋತ್ನಿಕ್​ ವಿರುದ್ಧ ಗೆಲುವು ಸಾಧಿಸಿದ್ದರು.

ತಾಯಿಯಾದ 2 ವರ್ಷಗಳ ನಂತರ ಟೆನಿಸ್​​​​ ಜಗತ್ತಿಗೆ ಮರಳಿದ್ದ ಸಾನಿಯಾ ಮಿರ್ಜಾ ಅವರು ಹೋಬರ್ಟ್​ ಇಂಟರ್​ನ್ಯಾಷನಲ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನಂತರ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್​ ಓಪನ್​ ಮೊದಲ ಸುತ್ತಿನ ಪಂದ್ಯದಲ್ಲೇ ಕಣಕಾಲು ನೋವಿಗೆ ತುತ್ತಾಗಿ ಪಂದ್ಯದಿಂದ ಅರ್ಧದಲ್ಲೇ ನಿವೃತ್ತಿ ಪಡೆದಿದ್ದರು. ಇದೀಗ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ದುಬೈ ಓಪನ್​ನಲ್ಲಿ ಕಣಕ್ಕಿಳಿದರೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.