ATP Finals: ವಿಶ್ವದ ನಂ.1 ಜೊಕೊವಿಕ್​​ಗೆ ಶಾಕ್​ ನೀಡಿದ ಜ್ವೆರೆವ್ ಫೈನಲ್​ಗೆ ಲಗ್ಗೆ

author img

By

Published : Nov 21, 2021, 10:57 AM IST

TP Finals: Zverev stuns Djokovic to set up title clash with Medvedev

ಎಟಿಪಿ ಫೈನಲ್ಸ್​ ಟೆನಿಸ್​ ಟೂರ್ನಿಯ (ATP Finals) ಸೆಮಿಫೈನಲ್​ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ ಅಲೆಕ್ಸಾಂಡರ್ ಜ್ವೆರೆವ್ ಅವರು ಫೈನಲ್​​ ತಲುಪಿದ್ದಾರೆ.

ಟುರಿನ್: ವಿಶ್ವದ ನಂ.1 ಸರ್ಬಿಯಾದ ನೊವಾಕ್ ಜೊಕೊವಿಕ್ (Novak Djokovic) ಅವರಿಗೆ ಸೋಲುಣಿಸಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ (Alexander Zverev) ಅವರು ಎಟಿಪಿ ಫೈನಲ್ಸ್‌ ಟೆನಿಸ್​ ಟೂರ್ನಿಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಪ್ರಶಸ್ತಿಗಾಗಿ ರಷ್ಯಾದ ಮೆಡ್ವೆಡೆವ್ ವಿರುದ್ದ ಜ್ವೆರೆವ್ ಪೈಪೋಟಿ ನಡೆಸಲಿದ್ದಾರೆ.

ಸೆಮಿಫೈನಲ್​ನಲ್ಲಿ ಮೂರು ಸೆಟ್‌ಗಳ ಹಣಾಹಣಿಯಲ್ಲಿ ಜ್ವೆರೆವ್, 7-6(4), 4-6, 6-3 ಸೆಟ್‌ಗಳ ಅಂತರದಿಂದ ಜೊಕೊವಿಕ್​ರನ್ನು ಮಣಿಸಿದರು. ಆಕರ್ಷಕ ಆಟ ಪ್ರದರ್ಶಿಸಿದ 2020ರ ಟೋಕಿಯೊ ಒಲಿಂಪಿಕ್ಸ್​ (Tokyo Olympics 2020) ಚಿನ್ನದ ಪದಕ ವಿಜೇತ ಅಲೆಕ್ಸಾಂಡರ್ ಜ್ವೆರೆವ್, ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರನಿಗೆ ಸೋಲಿನ ಆಘಾತ​ ನೀಡಿದರು. ಈ ಹಿಂದೆ 2018ರ ಟೂರ್ನಿಯ ಫಿನಾಲೆಯಲ್ಲೂ ಕೂಡ ಜ್ವೆರೆವ್ ಮೇಲುಗೈ ಸಾಧಿಸಿದ್ದರು. ಸುಮಾರು 2 ಗಂಟೆ 29 ನಿಮಿಷಗಳ ಕಾದಾಟವು ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿತು.

24 ವರ್ಷ ವಯಸ್ಸಿನ ಜ್ವೆರೆವ್, ಪಂದ್ಯದಲ್ಲಿ 35 ವಿನ್ನರ್ಸ್​ಗಳನ್ನು ಬಾರಿಸಿದರು. ಅಲ್ಲದೆ, ಈ ಗೆಲುವಿನೊಂದಿಗೆ ಜೊಕೊವಿಕ್ ವಿರುದ್ಧದ ಯುಎಸ್ ಓಪನ್ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು. ನೊವಾಕ್​ ವಿರುದ್ಧ ATP ಗೆಲುವಿನ ಬಲಾಬಲವನ್ನು 4-7ಕ್ಕೆ ಸುಧಾರಿಸಿಕೊಂಡಿದ್ದಾರೆ. ಎಟಿಪಿ ಫೈನಲ್ಸ್‌ ಪ್ರಶಸ್ತಿಗಾಗಿ ರಷ್ಯಾದ ಮೆಡ್ವೆಡೆವ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ನಡುವೆ ಹೋರಾಟ ನಡೆಯಲಿದೆ.

ಇದನ್ನೂ ಓದಿ: IND vs NZ 3rd T20I: ನ್ಯೂಜಿಲೆಂಡ್‌ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ ಕ್ಲೀನ್‌ಸ್ವೀಪ್‌ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.