ETV Bharat / sports

ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದ ಚಾಂಪಿಯನ್​ ವಿಂಡೀಸ್​

author img

By

Published : Nov 4, 2021, 11:42 PM IST

ICC Mens T20 World Cup,  ICC Mens T20 World Cup 2021,  ICC Mens T20 World Cup 2021 news, Sri Lanka won, Sri Lanka won against West Indies, Sri Lanka won news, ಐಸಿಸಿ ಟಿ20 ವಿಶ್ವಕಪ್​,  ಐಸಿಸಿ ಟಿ20 ವಿಶ್ವಕಪ್ 2021,  ಐಸಿಸಿ ಟಿ20 ವಿಶ್ವಕಪ್ 2021 ಸುದ್ದಿ, ಶ್ರೀಲಂಕಾಕ್ಕೆ ಗೆಲುವು, ವೆಸ್ಟ್​ ಇಂಡೀಸ್​ ವಿರುದ್ಧ ಶ್ರೀಲಂಕಾಕ್ಕೆ ಗೆಲುವು, ಶ್ರೀಲಂಕಾಕ್ಕೆ ಗೆಲುವು ಸುದ್ದಿ,
ಕೃಪೆ: Twitter

ಅಸಲಂಕಾ ಮತ್ತು ನಿಸ್ಸಾಂಕನ ಅಬ್ಬರದ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ತಂಡ ವಿಂಡೀಸ್​ ತಂಡಕ್ಕೆ 190 ರನ್​ಗಳ ಗುರಿ ನೀಡಿತು. ಬೃಹತ್​ ಮೊತ್ತವನ್ನು ಬೆನ್ನತ್ತಿದ್ದ ವೆಸ್ಟ್​ ಇಂಡೀಸ್​ ತಂಡ ಕಳಪೆ ಪ್ರದರ್ಶನದಿಂದಾಗಿ ಶ್ರೀಲಂಕಾ ವಿರುದ್ಧ 20 ರನ್​ಗಳ ಸೋಲು ಕಂಡಿದ್ದು, ಟೂರ್ನಿಯಿಂದ ಹೊರ ಬಿತ್ತು.

ಅಬುಧಾಬಿ: ಅಸಲಂಕಾ ಮತ್ತು ನಿಸ್ಸಾಂಕ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಶ್ರಿಲಂಕಾ ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 189 ರನ್​ಗಳಿಸಿದ್ದು, ವಿಂಡೀಸ್​ಗೆ 190 ರನ್​ಗಳ ಗುರಿ ನೀಡಿತ್ತು. ಬೃಹತ್​ ಮೊತ್ತವನ್ನು ಬೆನ್ನತ್ತುವ ಭರದಲ್ಲಿ ವಿಂಡೀಸ್​ ತಂಡ ಎಡವಿದ್ದು, ರನ್​ಗಳಿಂದ ಸೋಲು ಕಂಡಿತು. ಈ ಸೋಲಿನ ಮೂಲಕ ವಿಂಡೀಸ್​ ತಂಡ ಟೂರ್ನಿಯಿಂದ ಹೊರ ನಡೆಯಿತು.

ಶ್ರೀಲಂಕಾ ಇನ್ನಿಂಗ್ಸ್​: ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಶ್ರಿಲಂಕಾ ಮೊದಲ ವಿಕೆಟ್​ಗೆ 42 ರನ್​ಗಳ ಜೊತೆಯಾಟ ನೀಡಿತು. ಕುಸಾಲ್ ಪೆರೆರಾ 21 ಎಸೆತಗಳಲ್ಲಿ 29 ರನ್​ಗಳಿಸಿ ಔಟಾದರು. ಪೆರೆರಾ ಔಟಾಗುತ್ತಿದ್ದಂತೆ ಕ್ರೀಸ್​ಗೆ ಆಗಮಿಸಿದ ಅಸಲಂಕಾ 2ನೇ ವಿಕೆಟ್​ಗೆ 91 ರನ್​ಗಳ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ನಿಸ್ಸಾಂಕ 41 ಎಸೆತಗಳಲ್ಲಿ 5 ಬೌಂಡರಿ ಸಹಿತ 51 ರನ್​ಗಳಿಸಿ ಡ್ವೇನ್ ಬ್ರಾವೋಗೆ ವಿಕೆಟ್ ಒಪ್ಪಿಸಿದರು. ಅಸಲಂಕಾ 41 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್​ ಸೇರಿದಂತೆ 68 ರನ್​ಗಳಿಸಿ 19ನೇ ಓವರ್​ನಲ್ಲಿ ರಸೆಲ್​ ಬೌಲಿಂಗ್​ನಲ್ಲಿ ಹೆಟ್ಮಾಯರ್​ಗೆ ಕ್ಯಾಚ್​ ನೀಡಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಶನಕ ಕೇವಲ 14 ಎಸೆತಗಳಲ್ಲಿ 25 ರನ್​ಗಳಿಸಿ ಶ್ರೀಲಂಕಾ ತಂಡ ಬೃಹತ್​ ಮೊತ್ತ ದಾಖಲಿಸುವುದಕ್ಕೆ ಪ್ರಮುಖ ಪಾತ್ರವಹಿಸಿದರು. ಒಟ್ನಲ್ಲಿ ಶ್ರೀಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗಳನ್ನು ಕಳೆದುಕೊಂಡು 189 ರನ್​ಗಳನ್ನು ಗಳಿಸಿತು.

ವೆಸ್ಟ್​ ಇಂಡೀಸ್​ ಪರ ಆಂಡ್ರೆ ರಸೆಲ್ 4 ಓವರ್​ಗಳಲ್ಲಿ 33 ರನ್​ ನೀಡಿ 2 ವಿಕೆಟ್​ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಬ್ರಾವೋ 42ಕ್ಕೆ1 ವಿಕೆಟ್​ ಪಡೆದರೂ ದುಬಾರಿಯಾದರು. ರಾಂಪಾಲ್ 37, ಹೋಲ್ಡರ್ 37 ರನ್​ ಬಿಟ್ಟುಕೊಟ್ಟರು.

ವೆಸ್ಟ್​ ಇಂಡೀಸ್ ಇನ್ನಿಂಗ್ಸ್​: ಶ್ರೀಲಂಕಾ ನೀಡಿದ ಬೃಹತ್​ ಮೊತ್ತವನ್ನು ಬೆನ್ನತ್ತಿದ್ದ ವಿಂಡೀಸ್​ ತಂಡ ಕ್ರಿಸ್ ಗೇಲ್ (1 ರನ್​)ಮತ್ತು ಎವಿನ್ ಲೆವಿಸ್ (8 ರನ್​) ವಿಕೆಟ್​ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಬಳಿಕ ಬಂದ ರೋಸ್ಟನ್ ಚೇಸ್ ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ 9 ರನ್​ಗಳನ್ನು ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು.

ಬಳಿಕ ಬಂದ ಹೆಟ್ಮೆಯರ್ ಅದ್ಭುತ ಪ್ರದರ್ಶನ ನೀಡಿದರು. ಕೇವಲ 54 ಎಸೆತಗಳಲ್ಲಿ 4 ಸಿಕ್ಸರ್​, 8 ಬೌಂಡರಿಗಳ ನೆರವಿನಿಂದ 84 ರನ್​ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಆದ್ರೆ ಬಳಿಕ ಬಂದ ಆಟಗಾರರು ಉತ್ತಮ ಪ್ರದರ್ಶನ ನೀಡದೇ ತಂಡದ ಪರ ಆಂಡ್ರೆ ರಸೆಲ್ 2 ರನ್​, ಕೀರಾನ್ ಪೊಲಾರ್ಡ್ ಶೂನ್ಯ, ಜೇಸನ್ ಹೋಲ್ಡರ್ 8 ರನ್​, ಡ್ವೇನ್ ಬ್ರಾವೋ 2 ರನ್ ಗಳಿಸಿ ಪೆವಿಲಿಯನ್​ ಹಾದಿ ತುಳಿದರು. ಇನ್ನು ಅಕೇಲ್ ಹೊಸೈನ್ 1 ರನ್​ ಕಲೆ ಹಾಕುವ ಮೂಲಕ ಅಜೇಯರಾಗಿ ಉಳಿದರು.

ಒಟ್ನಲ್ಲಿ ವಿಂಡೀಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗಳನ್ನು ಕಳೆದುಕೊಂಡು 169 ರನ್​ಗಳನ್ನು ಕಲೆ ಹಾಕುವ ಮೂಲಕ ಶ್ರೀಲಂಕಾ ವಿರುದ್ಧ 20 ರನ್​ಗಳ ಸೋಲು ಕಂಡಿತು. ಈ ಸೋಲಿನ ಮೂಲಕ ವೆಸ್ಟ್​ ಇಂಡೀಸ್​ ತಂಡ ಟೂರ್ನಿಯಿಂದ ಹೊರ ಬಿತ್ತು.

ಶ್ರೀಲಂಕಾ ಪರ ಬಿನೂರ ಫೆರ್ನಾಂಡೋ, ಚಾಮಿಕಾ ಕರುಣಾರತ್ನೆ ಮತ್ತು ಹಸರಂಗ ತಲಾ ಎರಡು ವಿಕೆಟ್​ಗಳನ್ನ ಪಡೆದು ಮಿಂಚಿದರು. ನಾಯಕ ದಾಸುನ್ ಶನಕ ಮತ್ತು ದುಷ್ಮಂತ ಚಮೀರ ತಲಾ ಒಂದೊಂದು ವಿಕೆಟ್​ಗಳನ್ನು ಪಡೆದು ತಂಡದ ಗೆಲುವಿಗೆ ಕಾರಣರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.