ETV Bharat / sports

Wrestlers Protest: ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಲ್ಲಿ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸುತ್ತೇವೆ - ಸಾಕ್ಷಿ ಮಲ್ಲಿಕ್​

author img

By

Published : Jun 10, 2023, 6:58 PM IST

ಅನುರಾಗ್​ ಠಾಕೂರ್​ ಅವರು ಹೇಳಿದಂತೆ ಜೂನ್​ 15ರ ಒಳಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟಿಸುವುದಾಗಿ ಬಜರಂಗ್​ ಪೂನಿಯಾ ಹೇಳಿದ್ದಾರೆ.

Sakshi Malik opinion on Asian Games participation
ಸಾಕ್ಷಿ ಮಲ್ಲಿಕ್​ - ಬಜರಂಗ್​ ಪೂನಿಯಾ

ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಲ್ಲಿ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸುತ್ತೇವೆ - ಸಾಕ್ಷಿ ಮಲ್ಲಿಕ್​

ಸೋನಿಪತ್ (ಹರಿಯಾಣ): ಲೈಂಗಿಕ ಕಿರುಕುಳ ಆರೋಪದ ಮೇಲೆ ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಶನಿವಾರ ನಡೆದ ಮಹಾ ಪಂಚಾಯತ್​ ಸಭೆಯಲ್ಲಿ ಪಾಲ್ಗೊಂಡಿದ್ದರು. ಕುಸ್ತಿಪಟುಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಿದ ನಂತರವೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಾರೆ ಎಂದು ಇದೇ ವೇಳೆ ಹೇಳಿದರು.

"ಈ ಎಲ್ಲಾ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ನಾವು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇವೆ. ನಾವು ಪ್ರತಿದಿನ ಮಾನಸಿಕವಾಗಿ ಏನನ್ನು ಅನುಭವಿಸುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಹರಿಯಾಣದ ಸೋನಿಪತ್‌ನಲ್ಲಿ ಇಂದು ನಡೆದ ಮಹಾಪಂಚಾಯತ್‌ನಲ್ಲಿ ಸಾಕ್ಷಿ ಮಲಿಕ್ ಹೇಳಿದ್ದಾರೆ.

ಏಷ್ಯನ್ ಗೇಮ್ಸ್ 2023 ಮುಂಬರುವ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆಯಲಿದೆ. ಆದಾಗ್ಯೂ, ಕುಸ್ತಿಪಟುಗಳು ಪಂದ್ಯಾವಳಿಯಿಂದ ಹಿಂದೆ ಸರಿಯುವುದು ಭಾರತದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಏಕೆಂದರೆ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಕಳೆದ ಏಷ್ಯನ್ ಗೇಮ್ಸ್ 2018 ರಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.

ಮಹಾಪಂಚಾಯತ್​ ಜೊತೆ ಚರ್ಚೆ: ಒಲಿಂಪಿಯನ್ ಬಜರಂಗ್ ಪುನಿಯಾ ಅವರು ಮಹಾಪಂಚಾಯತ್ ಸಭೆಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದಾಗ ತಮ್ಮನ್ನು ಬೆಂಬಲಿಸುವ ಜನರ ಮುಂದೆ, ಸರ್ಕಾರದೊಂದಿಗೆ ತಮ್ಮ ಚರ್ಚೆಯನ್ನು ಮುಂದಿಡುವುದಾಗಿ ಹೇಳಿದ್ದಾರೆ. "ನಾವು ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸಿದ್ದರೂ, ನಾವು ಬೆಂಬಲಿಸುವ ಮತ್ತು ನಮ್ಮೊಂದಿಗೆ ನಿಂತಿರುವ ಜನರೊಂದಿಗೆ ಚರ್ಚಿಸುತ್ತೇವೆ..." ಎಂದು ಪುನಿಯಾ ತಿಳಿಸಿದರು.

ಅದರ ಜೊತೆಗೆ, ಜೂನ್ 15 ರೊಳಗೆ ಕ್ರಮ ಕೈಗೊಳ್ಳದಿದ್ದರೆ, ನಾವು ಪ್ರತಿಭಟನೆಗೆ ಕರೆ ನೀಡುತ್ತೇವೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನಾವು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಈ ವೇಳೆ ಹೇಳಿದರು.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗಿನ ಮಾತುಕತೆ ಸಕಾರಾತ್ಮಕವಾಗಿದ್ದು, ವಿವಿಧ ಬೇಡಿಕೆಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗುರುವಾರ ಹೇಳಿದ್ದರು.

ಧರಣಿ ನಿರತ ಕುಸ್ತಿಪಟುಗಳೊಂದಿಗೆ ಅತ್ಯಂತ ಸಕಾರಾತ್ಮಕ ಚರ್ಚೆಯಾಗಿದೆ. ಅವರ ಕಡೆಯಿಂದ ಬಂದಿರುವ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಚರ್ಚಿಸಲಾಗಿದೆ. ಜೂನ್​15ರೊಳಗೆ ಆರೋಪಪಟ್ಟಿ ಸಲ್ಲಿಸಲಾಗುವುದು ಹಾಗೂ ಜೂನ್​ 30ರೊಳಗೆ ಭಾರತ ಕುಸ್ತಿ ಒಕ್ಕೂಟದ ಚುನಾವಣೆ ನಡೆಯಲಿದೆ. ಆಟಗಾರರಿಗಾಗಿ, ಆಂತರಿಕ ದೂರು ಸಮಿತಿಯನ್ನು ರಚಿಸಲಾಗುವುದು ಮತ್ತು ಮಹಿಳಾ ಆಟಗಾರ್ತಿ ಅಥವಾ ಅಧಿಕಾರಿಯನ್ನು ಅದರ ಅಧ್ಯಕ್ಷರನ್ನಾಗಿ ಮಾಡಲಾಗುವುದು" ಎಂದು ಠಾಕೂರ್ ಮಾಧ್ಯಮದವರಿಗೆ ತಿಳಿಸಿದ್ದರು.

ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ತಾತ್ಕಾಲಿಕ ಸಮಿತಿಗೆ ಕುಸ್ತಿಪಟುಗಳಿಂದ ಇಬ್ಬರು ತರಬೇತುದಾರರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಠಾಕೂರ್​ ಹೇಳಿದ್ದು, ಅವರನ್ನು ಅದರ ಸದಸ್ಯರನ್ನಾಗಿ ಮಾಡಲಾಗುವುದು ಎಂದೂ ತಿಳಿಸಿದ್ದಾರೆ. "ಆಟಗಾರರು ಶೀಘ್ರದಲ್ಲೇ ಮ್ಯಾಟ್‌ಗೆ ಮರಳಬೇಕು ಮತ್ತು ಮುಂಬರುವ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ನಾವು ಬಯಸುತ್ತೇವೆ" ಎಂದು ಅನುರಾಗ್​ ಠಾಕೂರ್​ ಹೇಳಿದ್ದರು.

ಇದನ್ನೂ ಓದಿ: ಜೂನ್​ 15ರ ವರೆಗೆ ಪ್ರತಿಭಟನೆ ಸ್ಥಗಿತ, ಹೋರಾಟದಿಂದ ಹಿಂದೆ ಸರಿದಿಲ್ಲ: ಬಜರಂಗ್​ ಪೂನಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.