ETV Bharat / sports

ಫ್ರೆಂಚ್‌ ಓಪನ್‌: ರೂಡ್​ ಮಣಿಸಿ 14ನೇ ಬಾರಿಗೆ ಚಾಂಪಿಯನ್​ ಪಟ್ಟ ಗೆದ್ದ ರಾಫೆಲ್​ ನಡಾಲ್

author img

By

Published : Jun 5, 2022, 9:11 PM IST

Updated : Jun 5, 2022, 10:01 PM IST

French Open title.. ಫ್ರೆಂಚ್‌ ಓಪನ್‌ ಟೆನ್ನಿಸ್‌ ಟೂರ್ನಿಯಲ್ಲಿ ಕೆಂಪು ಅಂಗಳದ ಸರದಾರ ರಾಫೆಲ್​ ನಡಾಲ್​ ಪಾರಮ್ಯ ಮುಂದುವರೆದಿದ್ದು, 14ನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

Rafael Nadal beats Casper Ruud to win 14th French Open title
ಫ್ರೆಂಚ್‌ ಓಪನ್‌: ರೂಡ್​ ಮಣಿಸಿ 14ನೇ ಬಾರಿ ಚಾಂಪಿಯನ್​ ಪಟ್ಟ ಗೆದ್ದ ರಾಫೆಲ್​ ನಡಾಲ್

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನ್ನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್​​ ಪ್ರಶಸ್ತಿಯನ್ನು 14ನೇ ಬಾರಿಗೆ ಸ್ಪೇನ್​ನ ರಾಫೆಲ್​ ನಡಾಲ್​ ಗೆದ್ದು ಬೀಗಿದ್ದಾರೆ. ಫೈನಲ್​ನಲ್ಲಿ ನಾರ್ವೆಯ ಯುವ ಆಟಗಾರ ಕ್ಯಾಸ್ಪರ್ ರೂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ 22ನೇ ಗ್ರ್ಯಾಂಡ್ ಸ್ಲಾಮ್ ಕಿರೀಟ ಜಯಿಸಿದ್ದಾರೆ.

ರೊಲ್ಯಾಂಡ್​ ಗ್ಯಾರೋಸ್​ನಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್​ ಹಣಾಹಣಿಯಲ್ಲಿ ಕೆಂಪು ಅಂಗಳದ ರಾಜ(clay court king) ಎಂದೇ ಹೆಸರುವಾಸಿಯಾಗಿರುವ ನಡಾಲ್​, ಕ್ಯಾಸ್ಪರ್ ರೂಡ್​​ರನ್ನು 6-3, 6-3 ಹಾಗೂ ನೇರ ಸೆಟ್​ಗಳಲ್ಲಿ ಮಣಿಸಿದರು. ನಡಾಲ್ 14ನೇ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿ ಹಾಗೂ ಒಟ್ಟಾರೆ 22 ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಗೆದ್ದ ಏಕೈಕ ಆಟಗಾರನಾಗಿದ್ದಾರೆ.

36 ವರ್ಷದ ಚಾಂಪಿಯನ್​ ಆಟಗಾರ 22ನೇ ಗ್ರ್ಯಾಂಡ್ ಸ್ಲಾಮ್ ಕಿರೀಟದ ಮೂಲಕ ತಮ್ಮ ಸಮಕಾಲೀನ ದಿಗ್ಗಜ ಎದುರಾಳಿಗಳಾದ ನೊವಾಕ್ ಜೊಕೊವಿಕ್ ಮತ್ತು ರೋಜರ್ ಫೆಡರರ್​ಗಿಂತ ಮತ್ತೊಂದು ಹೆಜ್ಜೆ ಮುಂದೆ ಸಾಗಿದಂತಾಗಿದೆ. ಸರ್ಬಿಯಾ ಮತ್ತು ಸ್ವಿಟ್ಜರ್ಲೆಂಡ್​ ತಾರೆಯರು ತಲಾ 20 ಪ್ರಶಸ್ತಿ ಗೆದ್ದು ಸಮಬಲ ಹೊಂದಿದ್ದಾರೆ. ಅಲ್ಲದೆ, ಒಂದೇ ಋತುವಿನಲ್ಲಿ ನಡಾಲ್ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್​ ಓಪನ್​ ಟ್ರೋಫಿ ಗೆದ್ದಿರುವುದು ಇದೇ ಮೊದಲಾಗಿದೆ.

ಅಂತಿಮ ಪಂದ್ಯದಲ್ಲಿ ಯುವ ಆಟಗಾರ ಕ್ಯಾಸ್ಪರ್ ರೂಡ್ ತಮ್ಮ ಎದುರಾಳಿ ದಿಗ್ಗಜನ ವಿರುದ್ಧದ ಸೆಣೆಸಾಟದಲ್ಲಿ ಪ್ರಬಲ ಪೈಪೋಟಿ ನೀಡುವಲ್ಲಿ ಎಡವಿದರು. ಪಂದ್ಯದ ಆರಂಭದಿಂದಲೂ ಹಿಡಿತ ಸಾಧಿಸಿದ ನಡಾಲ್​ಗೆ ಮೊದಲೆರಡು ಸೆಟ್​ಗಳಲ್ಲಿ ಅಲ್ಪ ಸ್ಪರ್ಧೆಯೊಡ್ಡಿದ ರೂಡ್​(6-3, 6-3), ಬಳಿಕ ಅಂತಿಮ ಸೆಟ್​ನಲ್ಲಿ ಸಂಫೂರ್ಣ ವಿಫಲತೆ ಕಂಡರು. ದಾಖಲೆಯ 14ನೇ ಸಲ ಫ್ರೆಂಚ್​ ಓಪನ್​ ಕಿರೀಟ ರಾಫೆಲ್​ ನಡಾಲ್​ ಪಾಲಾಯಿತು.

ನಡಾಲ್​ ತಾವು ಕೆಂಪು ಅಂಗಳದ ರಾಜ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 2020ರ ಫ್ರೆಂಚ್​ ಓಪನ್​ನಲ್ಲಿ ಚೋಕೊವಿಕ್​ ಮಣಿಸಿ ಪ್ರಶಸ್ತಿ ಗೆದ್ದಿದ್ದ ರಾಫೆಲ್​, 2021ರ ಟೂರ್ನಿಯ ಸೆಮಿಫೈನಲ್​​ನಲ್ಲಿ ಜೋಕೋ ವಿರುದ್ಧವೇ ಸೋತಿದ್ದರು. ಈ ಬಾರಿ ಮತ್ತೆ ಭರ್ಜರಿ ಪುನರಾಗಮನ ಮಾಡಿದ ನಡಾಲ್​ ಕಾರ್ಟರ್​ ಫೈನಲ್​ನಲ್ಲಿ ಚೋಕೊವಿಕ್​ಗೆ ಸೋಲುಣಿಸಿದ್ದರು.

ಇದನ್ನೂ ಓದಿ: ಲಾರ್ಡ್ಸ್‌ ಟೆಸ್ಟ್ : ಕಿವೀಸ್​ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ.. ಮೈದಾನದಲ್ಲಿ ಮರುಕಳಿಸಿದ 2019ರ ವಿಶ್ವಕಪ್​ ಘಟನೆ

Last Updated : Jun 5, 2022, 10:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.