ETV Bharat / sports

ದೇವೇಂದ್ರ ಜಝಾರಿಯಾಗೆ ಪದ್ಮಭೂಷಣ.. ನೀರಜ್ ಚೋಪ್ರಾ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಗರಿ

author img

By

Published : Jan 25, 2022, 9:09 PM IST

ಪ್ಯಾರಾ ಕ್ರೀಡೆಯಲ್ಲಿ ಅನನ್ಯ ಸಾಧನೆ ಮಾಡಿರುವ ಜಝಾರಿಯಾ ಈಗಾಗಲೇ 2012ರಲ್ಲಿ ಪದ್ಮ ಪ್ರಶಸ್ತಿ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ದೇಶದ ಮೊದಲ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದರು. ಇದೀಗ ಅವರಿಗೆ ಪದ್ಮಭೂಷಣ ಒಲಿದಿದೆ.

Padma awards 2022
ಪದ್ಮ ಪ್ರಶಸ್ತಿ ಪುರಸ್ಕೃತ

ನವದೆಹಲಿ: 2022ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು, ಪ್ಯಾರಾ ಅಥ್ಲೀಟ್​ ದೇವೇಂದ್ರ ಜಝಾರಿಯಾ ಅವರು ಕ್ರೀಡಾ ವಿಭಾಗದಲ್ಲಿ ಪದ್ಮ ಭೂಷಣ ಒಲಿದಿದ್ದರೆ, ಇನ್ನಿತರ 7 ಮಂದಿ ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

40 ವರ್ಷದ ಪ್ಯಾರಾ ಜಾವಲಿನ್ ಥ್ರೋವರ್​ 2004ರ ಅಥೆನ್ಸ್​ ಮತ್ತು 2016ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆದರೆ, 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಜಝಾರಿಯಾ ದೇಶಕ್ಕೆ ಕೀರ್ತಿ ತಂದಿದ್ದರು.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪ್ಯಾರಾ ಕ್ರೀಡೆಯಲ್ಲಿ ಅನನ್ಯ ಸಾಧನೆಗೈದಿರುವ ಜಝಾರಿಯಾ ಈಗಾಗಲೇ 2012ರಲ್ಲಿ ಪದ್ಮ ಪ್ರಶಸ್ತಿ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ದೇಶದ ಮೊದಲ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದರು.

ಪದ್ಮಶ್ರೀ ಪ್ರಶಸ್ತಿ ವಿಜೇತರು

  • ಸುಮಿತ್ ಅಂತಿಲ್​: ಪ್ಯಾರಾ ಜಾವಲಿನ್ ಥ್ರೋವರ್​
  • ಪ್ರಮೋದ ಭಗತ್​: ಪ್ಯಾರಾ ಬ್ಯಾಡ್ಮಿಂಟನ್​
  • ನೀರಜ್ ಚೋಪ್ರಾ: ಅಥ್ಲೆಟಿಕ್ಸ್
  • ಫೈಸಲ್ ಅಲಿ ದರ್​ : ಮಾರ್ಷಲ್​ ಆರ್ಟ್ಸ್​ ಕೋಚ್​
  • ಅವನಿ ಲೇಖಾರ: ಪ್ಯಾರಾ ಶೂಟರ್ ​
  • ಬ್ರಹ್ಮಾನಂದ ಸಂಖ್ವಾಲ್ಕರ್: ಮಾಜಿ ಫುಟ್​ಬಾಲ್​ ಆಟಗಾರ
  • ವಂದನಾ ಕಟಾರಿಯಾ : ಭಾರತ ಮಹಿಳಾ ಹಾಕಿ ಆಟಗಾರ್ತಿ

ಇದನ್ನೂ ಓದಿ:ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾಗೆ 'ಪರಮ್​ ವಿಶಿಷ್ಠ ಸೇವಾ ಪದಕ' ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.