ETV Bharat / sports

ಪಾಕಿಸ್ತಾನದ ಅರ್ಷದ್ ವಿರುದ್ಧ ಭಾರತದ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಪೈಪೋಟಿ: ಕುತೂಹಲಕರ ಘಟ್ಟದಲ್ಲಿ ಪುರುಷರ ಜಾವೆಲಿನ್ ಥ್ರೋ ಫೈನಲ್‌

author img

By ANI

Published : Sep 30, 2023, 4:10 PM IST

ಇಬ್ಬರು ಬಲಿಷ್ಠ ಆಟಗಾರರು ಅಕ್ಟೋಬರ್ 4 ರಂದು ಇಲ್ಲಿ ನಡೆಯುವ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಕ್ರೀಡಾಭಿಮಾನಿಗಳ ಕುತೂಹಲ ಇಮ್ಮಡಿಕೊಂಡಿದೆ.

"My fight is against myself, to get better with my technique, throw": Neeraj Chopra on rivalry with Pakistan's Arshad Nadem
"My fight is against myself, to get better with my technique, throw": Neeraj Chopra on rivalry with Pakistan's Arshad Nadem

ಹ್ಯಾಂಗ್‌ಝೌ (ಚೀನಾ): ಭಾರತದ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅಕ್ಟೋಬರ್ 4 ರಂದು ಇಲ್ಲಿ ನಡೆಯುವ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಅರ್ಷದ್ ನದೀಮ್ ಅವರೊಂದಿಗೆ ಪೈಪೋಟಿಗೆ ಇಳಿಯಲಿದ್ದಾರೆ. ತಮ್ಮ ಈವೆಂಟ್​ ಬಗ್ಗೆ ಸ್ವಲ್ಪ ಗಮನ ಹರಿಸುವುದಾಗಿ ನೀರಜ್ ಚೋಪ್ರಾ ಹೇಳಿಕೊಂಡಿದ್ದಾರೆ. ತಮ್ಮ ಗೆಲುವಿನ ಗುರಿಯ ಬಗ್ಗೆ ಹ್ಯಾಂಗ್‌ಝೌನಲ್ಲಿ ಸೇರಿದ್ದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತೊಡೆಸಂದು ಸೆಳೆತದ ನಡುವೆಯೂ ಏಷ್ಯನ್ ಗೇಮ್ಸ್​ನಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿರುವ ನೀರಜ್ ಚೋಪ್ರಾ, ತಮ್ಮ ಮನಸ್ಸನ್ನು ಈ ಗಾಯದಿಂದ ದೂರವಿಡಬೇಕಿದೆ. ಆಟದ ಮೇಲೆ ಹೆಚ್ಚು ಗಮನ ಕೊಡುವುದು ಒಳಿತು. ಈ ಮೂಲಕ ಎಲ್ಲ ರೀತಿಯಿಂದಲೂ ಏಷ್ಯನ್​ ಗೇಮ್ಸ್​​ ಮೇಲೆ ಗಮನ ಹರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ಜಾವೆಲಿನ್ ಥ್ರೋ ಪಟು ಅರ್ಷದ್ ನನ್ನೊಂದಿಗೆ ಆಡಿದಾಗಲೆಲ್ಲ ನಾನು ನನ್ನ ಸಾಮರ್ಥ್ಯವನ್ನು ಉಳಿಸಿಕೊಂಡಿದ್ದೇನೆ. ಈವೆಂಟ್​ನಲ್ಲಿ ಯಾವಾಗಲೂ ಅತ್ಯುತ್ತಮವಾದ ಕೊಡುಗೆಯನ್ನು ನೀಡುವುದು ನನ್ನ ಕೆಲಸ. ಹಾಗೆ ನನ್ನ ಗಮನ ಈವೆಂಟ್ ಮೇಲೆ ಕೇಂದ್ರೀಕೃತವಾಗಿರುತ್ತದೆಯೇ ಹೊರತು, ನನ್ನ ವಿರುದ್ಧ ಯಾರು ಆಡುತ್ತಿದ್ದಾರೆ ಎಂಬುದರ ಮೇಲೆ ಇರಲ್ಲ. ಯುರೋಪಿಯನ್ ಅಥ್ಲೀಟ್‌ಗಳು ಇರದೇ ಇರುವುದರಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿರುತ್ತದೆ. ಹಾಗಾಗಿ ಇಲ್ಲಿ ನನ್ನ ಹೋರಾಟ ನನ್ನ ವಿರುದ್ಧವೇ ಇರುತ್ತದೆ. ಉತ್ತಮ ಪ್ರದರ್ಶನ ತೋರುವುದು ನನ್ನ ಮುಂದಿರುವ ಆಯ್ಕೆ ಎಂದರು.

ಇಬ್ಬರೂ ಅಥ್ಲೀಟ್‌ಗಳು ಒಂಬತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದು, ಏಳು ಬಾರಿ ಹಿರಿಯರ ಮಟ್ಟದಲ್ಲಿ ಮತ್ತು ಎರಡು ಬಾರಿ ಜೂನಿಯರ್ ಮಟ್ಟದಲ್ಲಿ ಮುಖಾಮುಖಿಯಾಗಿದ್ದಾರೆ. 2016ರಲ್ಲಿ ಗುವಾಹಟಿಯಲ್ಲಿ ನಡೆದ ಸೌತ್ ಏಷ್ಯನ್ ಗೇಮ್ಸ್​ನಲ್ಲಿ ಮೊದಲ ಬಾರಿ ಇಬ್ಬರು ಜೊತೆಯಾಗಿ ಸ್ಪರ್ಧೆಗಿಳಿದಿದ್ದರು. ಅಲ್ಲಿ ನೀರಜ್ ಚಿನ್ನ ಪಡೆದರೆ, ನದೀಮ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಸದ್ಯಕ್ಕೆ ನೀರಜ್ ಅವರು ನದೀಮ್ ವಿರುದ್ಧ 9-0 ಮುನ್ನಡೆ ಸಾಧಿಸಿದ್ದಾರೆ. ಸಂಖ್ಯೆಯಲ್ಲಿ ನೀರಜ್ ಪ್ರಾಬಲ್ಯ ಹೊಂದಿದ್ದರೂ, ಅರ್ಷದ್ 2018 ರಿಂದ ಭಾರತೀಯ ಏಸ್ ಪ್ರದರ್ಶನಗಳಿಗೆ ಹತ್ತಿರವಾಗುತ್ತಿದ್ದಾರೆ. ನೀರಜ್ ಅವರ ಗೆಲುವಿಗೆ ಮುಳುವಾಗಲುಬಹುದು ಎಂಬ ಮಾತು ಕೂಡ ಇದೆ.

ಕಾರಣ ಅರ್ಷದ್ ಅವರು ವೈಯಕ್ತಿಕವಾಗಿ ಅತ್ಯುತ್ತಮ ಜಾವೆಲಿನ್ ಥ್ರೋ ವಿಷಯದಲ್ಲಿ ನೀರಜ್‌ಗಿಂತ ಮುಂಚೂಣಿಯಲ್ಲಿದ್ದಾರೆ. 2022ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ 90.18 ಮೀಟರ್​ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನ ಗೆದ್ದಿದ್ದರು. ಅವರು ಈ ಪ್ರಯತ್ನದಿಂದ ಆಗಿನ ವಿಶ್ವ ಚಾಂಪಿಯನ್, ಗ್ರೆನಡಾದ ಆಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿದರು. ಗಾಯದಿಂದ ಬಳಲುತ್ತಿದ್ದ ನೀರಜ್ ಚೋಪ್ರಾ ಈ ಈವೆಂಟ್​ನಿಂದ ಹೊರಗುಳಿದಿದ್ದರು. ಬಲಿಷ್ಠ ಆಟಗಾರರು ಅಕ್ಟೋಬರ್ 4 ರಂದು ಇಲ್ಲಿ ನಡೆಯುವ ಜಾವೆಲಿನ್ ಥ್ರೋ ಫೈನಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಕ್ರೀಡಾಭಿಮಾನಿಗಳನ್ನು ಕುತೂಹಲ ಘಟ್ಟಕ್ಕೆ ತಂದು ನಿಲ್ಲಿಸಿದೆ.

ಇದನ್ನೂ ಓದಿ: ಜಾವೆಲಿನ್: ಡೈಮಂಡ್‌ ಲೀಗ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ನೀರಜ್ ಚೋಪ್ರಾ ವಿಫಲ, 2ನೇ ಸ್ಥಾನಕ್ಕೆ ತೃಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.