ETV Bharat / sports

ಯಾರ ಪಾಲಿಗೆ ಟೆಸ್ಟ್​ ಸರಣಿ?​: ಹರಿಣಗಳಿಗೆ ಬೇಕು 111 ರನ್, ಭಾರತಕ್ಕೆ ಬೇಕು 8 ವಿಕೆಟ್​!

author img

By

Published : Jan 13, 2022, 10:38 PM IST

Updated : Jan 14, 2022, 2:38 PM IST

India vs Australia 3rd test
ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್

3ನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ ರಿಷಭ್​ ಪಂತ್ ಅವರ ಶತಕದ ಹೊರತಾಗಿಯೂ 198 ರನ್​ಗಳಿಗೆ ಸರ್ವಪತನ ಕಂಡಿತು. ಏಕಾಂಗಿ ಹೋರಾಟ ನಡೆಸಿದ ರಿಷಭ್ ಪಂತ್​ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ 100 ರನ್​ಗಳಿಸಿ ಅಜೇಯರಾಗಿ ಉಳಿದುಕೊಂಡರು.

ಕೇಪ್​ ಟೌನ್: ಸರಣಿ ನಿರ್ಣಯಿಸುವ 3ನೇ ಟೆಸ್ಟ್​ ಪಂದ್ಯ ರೋಚಕ ಘಟ್ಟ ತಲುಪಿದ್ದು ಭಾರತ ನೀಡಿದ್ದ 212 ರನ್​ಗಳ ಗುರಿ ಬೆನ್ನಟ್ಟಿರುವ ಆತಿಥೇಯ ತಂಡ 2 ವಿಕೆಟ್​ ಕಳೆದುಕೊಂಡಿದ್ದು 101 ರನ್​ಗಳಿಸಿ ಸುಸ್ಥಿತಿಯಲ್ಲಿದೆ. ನಾಳೆ 4ನೇ ದಿನವಾಗಿದ್ದು ಟೆಸ್ಟ್​ ಸರಣಿ ಗೆಲ್ಲುವುದಕ್ಕೆ ಇನ್ನೂ 111 ರನ್​ಗಳಿಸಬೇಕಿದೆ.

3ನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ ರಿಷಭ್​ ಪಂತ್ ಅವರ ಶತಕದ ಹೊರತಾಗಿಯೂ 198 ರನ್​ಗಳಿಗೆ ಸರ್ವಪತನ ಕಂಡಿದೆ. ಏಕಾಂಗಿ ಹೋರಾಟ ನಡೆಸಿದ ಪಂತ್​ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ 100 ರನ್​ಗಳಿಸಿ ಅಜೇಯರಾಗಿ ಉಳಿದರು.

ಇವರನ್ನು ಹೊರತುಪಡಿಸಿದರೆ ನಾಯಕ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 29 ರನ್​ಗಳಿಸಿದ್ದೇ ತಂಡದ 2ನೇ ಗರಿಷ್ಠ ಸ್ಕೋರ್​ ಆಯಿತು. ಉಳಿದ ಯಾವೊಬ್ಬ ಬ್ಯಾಟರ್​ 10 ರನ್‌ಗಳ ಗಡಿ ದಾಟಲೇ ಇಲ್ಲ.

ಕೆ.ಎಲ್.ರಾಹುಲ್​ 10, ಮಯಾಂಕ್ ಅಗರ್ವಾಲ್ 7, ಪೂಜಾರ 9, ರಹಾನೆ 1, ರವಿಚಂದ್ರನ್ ಅಶ್ವಿನ್​ 7, ಶಾರ್ದೂಲ್ ಠಾಕೂರ್​ 5, ಬುಮ್ರಾ 2, ಉಮೇಶ್ ಯಾದವ್​ ಮತ್ತು ಶಮಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ದಕ್ಷಿಣ ಅಫ್ರಿಕಾ ಪರ ಮಾರ್ಕೊ ಜಾನ್ಸನ್​ 36ಕ್ಕೆ 4, ಕಗಿಸೋ ರಬಾಡ 53ಕ್ಕೆ3, ಲಂಗಿ ಎಂಗಿಡಿ 21ಕ್ಕೆ 3 ವಿಕೆಟ್ ಪಡೆದು ಭಾರತ ತಂಡವನ್ನು 200ರ ಗಡಿಯೊಳಗೆ ನಿಯಂತ್ರಿಸಿದರು.

ಎಲ್ಗರ್​-ಪೀಟರ್ಸನ್​ ಜೊತೆಯಾಟ:

212 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ದ.ಆಫ್ರಿಕಾ ತಂಡ 23 ರನ್​ಗಳಾಗುವಷ್ಟರಲ್ಲಿ ಐಡೆನ್ ಮಾರ್ಕ್ರಮ್​(16) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್​ ನಾಯಕ ಡೀನ್ ಎಲ್ಗರ್​ ಮತ್ತು ಕೀಗನ್ ಪೀಟರ್ಸನ್​ 78 ರನ್​ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಎಲ್ಗರ್​ 96 ಎಸೆತಗಳಲ್ಲಿ ಬೌಂಡರಿ ಸಹಿತ 30 ರನ್​ಗಳಿಸಿದರೆ ಬುಮ್ರಾ ಬೌಲಿಂಗ್​​ನಲ್ಲಿ ಪಂತ್​ಗೆ ಕ್ಯಾಚಿತ್ತು ಔಟಾದರು.

ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಕೀಗನ್ ಪೀಟರ್ಸನ್​ 61 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 48 ರನ್​ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ:IND vs SA Test: ಆಪತ್ತಿನಲ್ಲಿದ್ದ ಭಾರತಕ್ಕೆ ಶತಕ ಸಿಡಿಸಿ ಆಪತ್ಬಾಂಧವನಾದ ರಿಷಬ್​ ಪಂತ್

Last Updated :Jan 14, 2022, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.