ETV Bharat / sports

ಇಂಡಿಯಾ ಓಪನ್‌: 2ನೇ ಸುತ್ತಿಗೆ ಸಿಂಧು, ಶ್ರೀಕಾಂತ್; 5ನೇ ರ್‍ಯಾಂಕ್ ಆಟಗಾರ್ತಿ ಮಣಿಸಿದ ಅಶ್ಮಿತ

author img

By

Published : Jan 11, 2022, 4:15 PM IST

ಪುರುಷರ ವಿಭಾಗದ ಟಾಪ್ ಸೀಡ್ ಕಿಡಂಬಿ ಶ್ರೀಕಾಂತ್ ಇಂಡಿಯಾ ಓಪನ್​ನ ತಮ್ಮ ಮೊದಲ ಪಂದ್ಯದಲ್ಲಿ 21-17, 21-10ರಲ್ಲಿ ಭಾರತದವರೇ ಆದ ಸಿರಿಲ ವರ್ಮಾ ವಿರುದ್ಧ ಗೆಲುವು ಸಾಧಿಸಿದರು.

India Open 2022
ಸಿಂಧು, ಶ್ರಿಕಾಂತ್​ಗೆ ಗೆಲುವು

ನವದೆಹಲಿ: ಭಾರತದ ಯುವ ಶಟ್ಲರ್​ ಅಶ್ಮಿತ ಚಲಿಹಾ ತಮ್ಮ ಇಂಡಿಯಾ ಓಪನ್​ ಟೂರ್ನಿಯ ತಮ್ಮ ಮೊದಲ ಸುತ್ತಿನಲ್ಲೇ ಟೂರ್ನಿಯಲ್ಲಿ 5ನೇ ಶ್ರೇಯಾಂಕಿತ​ ರಷ್ಯಾದ ಇವ್ಗೆನಿಯಾ ಕಾಸೆತ್ಸ್​ಕಾಯಗೆ ಆಘಾತಕಾರಿ ಸೋಲುಣಿಸಿ ದರೆ, ಸಿಂಧು ಸುಲಭ ಜಯದೊಂದಿಗೆ ಮಹಿಳೆಯರ ಸಿಂಗಲ್ಸ್​ನಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದರು. ಇನ್ನು, ಅಗ್ರ ಶ್ರೇಯಾಂಕ ಪಡೆದಿರುವ ಸಿಂಧು ಕೂಡ 2ನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಮಂಗಳವಾರದಿಂದ ಆರಂಭವಾಗಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಅಶ್ಮಿತ ಚಲಿಹಾ ಕೇವಲ 31 ನಿಮಿಷಗಳಲ್ಲಿ ವಿಶ್ವದ 28ನೇ ಶ್ರೇಯಾಂಕದ ರಷ್ಯನ್​ ಶಟ್ಲರ್​ಗೆ 24-22, 21-16ರಲ್ಲಿ ಸೋಲುಣಿಸಿದರು. ಸಿಂಧು ಭಾರತದವರೇ ಆದ ಸಾಯಿಕೃಷ್ಣ ಪ್ರಿಯಾ ಅವರನ್ನು 21- 5, 21-16ರ ಗೇಮ್​ಗಳಲ್ಲಿ ಮಣಿಸಿದರು.

ಭಾರತದ ಉದಯೋನ್ಮುಖ ಶಟ್ಲರ್​ ಲಕ್ಷ್ಯ ಸೇನ್ ಸಹೋದರ ಚಿರಾಗ್ ಸೇನ್ 8-21, 7-21ರಲ್ಲಿ ಮಲೇಷ್ಯಾದ ಸೂಂಗ್ ಜೋ ವೆನ್​​ ವಿರುದ್ಧ ತಮ್ಮ ಮೊದಲ ಸುತ್ತಿನಲ್ಲೇ ಸೋಲುಕಂಡರು.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ದಿ ವಾಲ್​; ರಾಹುಲ್‌ ದ್ರಾವಿಡ್​ಗೆ ಹರಿದುಬಂದ​ ಶುಭಾಶಯಗಳ ಸುರಿಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.