ETV Bharat / sports

ಕ್ರಿಕೆಟ್ ಮೈದಾನಕ್ಕೆ ಬಂದು ತೊಂದರೆ ಮಾಡಿದ 'ಜಾರ್ವೋ'ಗೆ ಬಿಗ್ ಶಾಕ್ ನೀಡಿದ ಐಸಿಸಿ

author img

By ETV Bharat Karnataka Team

Published : Oct 9, 2023, 7:22 AM IST

ನಿನ್ನೆ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ವಿಶ್ವಕಪ್​ ಪಂದ್ಯದ ವೇಳೆ ನಿಯಮಗಳನ್ನು ಉಲ್ಲಂಘಿಸಿ ಆಟದ ಮೈದಾನಕ್ಕೆ ಆಗಮಿಸಿದ್ದ ಜಾರ್ವೋ ಎಂಬ ಯೂಟ್ಯೂಬರ್​ಗೆ ಐಸಿಸಿ ಬಿಗ್ ಶಾಕ್ ನೀಡಿದೆ.

Etv Bharat
Etv Bharat

ಚೆನ್ನೈ (ತಮಿಳುನಾಡು) : ನಿನ್ನೆ ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಕ್ರಿಕೆಟ್ ಅಭಿಮಾನಿ ಜಾರ್ವೋ 69 ಎಂದೂ ಕರೆಯಲ್ಪಡುವ ಡೇನಿಯಲ್ ಜಾರ್ವಿಸ್​ಗೆ ಐಸಿಸಿ ಬಿಗ್ ಶಾಕ್ ನೀಡಿದೆ.

ಹೌದು, ಈ ಬಗ್ಗೆ ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, "ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಏನಾಯಿತು ಎಂಬುದು ನಿಮಗೆಲ್ಲ ತಿಳಿದಿದೆ, ಮತ್ತೆ ಇಂತಹ ಘಟನೆ ಸಂಭವಿಸದಂತೆ ತಡೆಯಲು ಹಾಗೂ ಹೆಚ್ಚುವರಿ ಭದ್ರತಾ ಕ್ರಮಗಳ ಅಗತ್ಯವಿದೆ. ಆದ್ದರಿಂದ ಮುಂದಿನ ಎಲ್ಲ ಪಂದ್ಯಗಳಿಗೆ ಜಾರ್ವೋ ಹಾಜರಾಗದಂತೆ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಜಾರ್ವೋ ಕುರಿತಾದ ಮಾಹಿತಿ : ಜನಪ್ರಿಯ ಮತ್ತು ವಿವಾದಾತ್ಮಕ ಕುಚೇಷ್ಟೆಗಾರ ಡೇನಿಯಲ್ ಜಾರ್ವಿಸ್ ಅಲಿಯಾಸ್​ ಜಾರ್ವೋ ನಿನ್ನೆ ನಡೆದ ಕ್ರಿಕೆಟ್​ ಪಂದ್ಯದ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ಬಂದಿದ್ದ. ಫೀಲ್ಡಿಂಗ್​ ಮಾಡುತ್ತಿದ್ದ ಭಾರತೀಯ ಆಟಗಾರರ ಜೊತೆಗೆ ಜಾರ್ವೋ ಸೇರಿಕೊಂಡಿದ್ದ. ಈ ವೇಳೆ, ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಕಳಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ಜಾರ್ವೋ ಬಳಿಗೆ ಬಂದು ಮಾತನಾಡಿಸಿ ಹೊರಗೆ ಹೋಗು ಎಂದು ಹೇಳಿದ್ದಾರೆ. ಇಂಗ್ಲೆಂಡ್​ನ ಜಾರ್ವೋ bmwjarvo ಹೆಸರಿನ ತನ್ನ YouTube ಚಾನಲ್​ ಮೂಲಕ ಹೆಸರುವಾಸಿಯಾಗಿದ್ದಾರೆ. ಅನೇಕ ಪಂದ್ಯಗಳಲ್ಲಿ ಈತ ಈ ರೀತಿಯ ಪ್ರ್ಯಾಂಕ್​ ವಿಡಿಯೋಗಳನ್ನು ಮಾಡುತ್ತಾ ಫೇಮಸ್​ ಆಗಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದ ವಿರುದ್ಧ ಕೇಸರಿ ಜರ್ಸಿಯಲ್ಲಿ ಆಡುತ್ತಾ ಭಾರತ..? ಬಿಸಿಸಿಐನ ಮೂಲಗಳಿಂದ ಬಂದ ಮಾಹಿತಿ ಇದು..!

ಈ ಹಿಂದೆ ಕೂಡ ಅಂದರೆ 2021 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾದ ಕೆಲವೇ ಸಮಯದ ನಂತರ 'ಜಾರ್ವೋ 69' ಎಂಬ ಹೆಸರಿನ ಜೆರ್ಸಿಯಲ್ಲಿರುವ ವ್ಯಕ್ತಿಯೊಬ್ಬರು ದೃಶ್ಯ ಪರದೆಯ ಬಳಿಯ ಸ್ಟ್ಯಾಂಡ್‌ನಿಂದ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದರು. ಈ ವ್ಯಕ್ತಿಯು ಕ್ರಿಕೆಟ್ ಪ್ಯಾಡ್‌ಗಳು, ನೀಲಿ ಹೆಲ್ಮೆಟ್ ಮತ್ತು ಸರ್ಜಿಕಲ್ ಫೇಸ್ ಮಾಸ್ಕ್ ಧರಿಸಿದ್ದರು. ಇದೀಗ ವಿಶ್ವಕಪ್​ನ ಪಂದ್ಯದಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : World Cup 2023: ಮೈದಾನಕ್ಕೆ ಬಂದು ಆಟಗಾರರಿಗೆ ತೊಂದರೆ ಮಾಡಿದ ಯೂಟ್ಯೂಬರ್​.. ಯಾರೀತ ಜಾರ್ವೋ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.