ETV Bharat / sports

ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023: ಕೊನೆಯ ಐದು ಸೆಕೆಂಡ್​ಗಳಲ್ಲಿ ಪಂದ್ಯ ಡ್ರಾ ಮಾಡಿಕೊಂಡ ಅರ್ಜೆಂಟೀನಾ

author img

By

Published : Jan 21, 2023, 7:08 AM IST

hockey world cup 2023  thrilling draw between Argentina France  draw between Argentina France match  ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023  ಕೊನೆಯ ಐದು ಸೆಕೆಂಡ್​ಗಳಲ್ಲಿ ಪಂದ್ಯ ಡ್ರಾ  ಐದು ಸೆಕೆಂಡ್​ಗಳಲ್ಲಿ ಪಂದ್ಯ ಡ್ರಾ ಮಾಡಿಕೊಂಡ ಅರ್ಜೆಂಟೀನಾ  ಹಾಕಿ ವಿಶ್ವಕಪ್‌ನ ಫೂಲ್​ ಪಂದ್ಯಗಳು ಮುಕ್ತಾಯ  ಅರ್ಜೆಂಟೀನಾ ಮತ್ತು ಫ್ರಾನ್ಸ್​ ನಡುವೆ ನಡೆದ ಪಂದ್ಯ
ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023

ಹಾಕಿ ವಿಶ್ವಕಪ್‌ನ ಫೂಲ್​ ಪಂದ್ಯಗಳು ಮುಕ್ತಾಯಗೊಂಡಿದ್ದು, ನಿನ್ನೆ ಮಧ್ಯಾಹ್ನ ಅರ್ಜೆಂಟೀನಾ ಮತ್ತು ಫ್ರಾನ್ಸ್​ ನಡುವೆ ನಡೆದ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯ ಕಂಡಿತು.

ರೂರ್ಕೆಲಾ, ಒಡಿಶಾ: ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023 ರಲ್ಲಿ ಫ್ರಾನ್ಸ್‌ನೊಂದಿಗೆ ರೋಮಾಂಚಕ 5-5 ಡ್ರಾ ಸಾಧಿಸಿದ ನಂತರ ಅರ್ಜೆಂಟೀನಾ ಪೂಲ್ ಎ ನಲ್ಲಿ ಎರಡನೇ ಸ್ಥಾನ ಗಳಿಸಿದೆ. ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಫ್ರಾನ್ಸ್ ಪೂಲ್-ಎಯಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದಿತ್ತು.

ಫ್ರಾನ್ಸ್ ಕೊನೆಯ ನಿಮಿಷದಲ್ಲಿ ಎಟಿಯೆನ್ನೆ ಟೈನೆವೆಜ್ (10ನೇ) ಮತ್ತು ವಿಕ್ಟರ್ ಚಾರ್ಲೆಟ್ (35, 37, 48, 59ನೇ) ನಾಲ್ಕು ಗೋಲುಗಳ ಮೂಲಕ 5-4 ಮುನ್ನಡೆ ಸಾಧಿಸಿತು. ಆದರೆ 60ನೇ ನಿಮಿಷದಲ್ಲಿ ನಿಕೋಲಸ್ ಡೆಲ್ಲಾ ಟಾರ್ ಪೆನಾಲ್ಟಿ ಕಾರ್ನರ್ ಅನ್ನು ಗೋಲ್​ ಆಗಿ ಪರಿವರ್ತಿಸಿದರು. ಗೋಲು ಗಳಿಸುವ ಮೂಲಕ ಅವರ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಅರ್ಜೆಂಟೀನಾ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಡ್ರಾದೊಂದಿಗೆ ಪೂಲ್ ಎ ನಲ್ಲಿ ಎರಡನೇ ಸ್ಥಾನ ಗಳಿಸಿದರೆ, ಫ್ರಾನ್ಸ್ ಒಂದು ಗೆಲುವು, ಒಂದು ಸೋಲು ಮತ್ತು ಒಂದು ಡ್ರಾದೊಂದಿಗೆ ಮೂರನೇ ಸ್ಥಾನ ಗಳಿಸಿತು. ತನ್ನ ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಡ್ರಾ ಮಾಡಿಕೊಂಡಿದ್ದ ಅರ್ಜೆಂಟೀನಾ ಫ್ರಾನ್ಸ್​ ವಿರುದ್ಧ ಎರಡನೇ ನಿಮಿಷದಲ್ಲಿ ಗೋಲು ದಾಖಲಿಸಿ ಪಂದ್ಯ ಆರಂಭಿಸಿತು. ಫ್ರಾನ್ಸ್ ಕೂಡ ಆಕ್ರಮಣಶೀಲತೆ ಆಟವನ್ನು ಮುಂದುವರಿಸಿತ್ತು. ತನ್ನ 100 ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಎಟಿಯೆನ್ ಬ್ಲೇಸ್ ರೋಗ್ ಅವರ ಸಹಾಯದಿಂದ ಫ್ರಾನ್ಸ್‌ ತಂಡ ತನ್ನ ಮೊದಲನೇ ಗೋಲು ಗಳಿಸಿತು.

ಸ್ಕೋರ್ 1-1 ರಲ್ಲಿ ಸಮನಾಗಿ, ಎರಡನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ತಲಾ ಒಂದು ಪೆನಾಲ್ಟಿ ಕಾರ್ನರ್ ಗಳಿಸಿದವು. ಆದರೂ ಎರಡೂ ತಂಡಗಳು ಅದನ್ನು ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ವಿಕ್ಟರ್ ಮತ್ತು ನಿಕೋಲಸ್ ಗಳಿಸಿದ ಗೋಲುಗಳು ಪಂದ್ಯದ ರೋಚಕತೆಯನ್ನು ಇಮ್ಮಡಿಗೊಳಿಸಿದವು. ನಿಕೋಲಸ್ 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗೋಲು ಗಳಿಸಿದರೆ, ವಿಕ್ಟರ್ 35ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಗಳಿಸಿದರು. ಎರಡು ನಿಮಿಷಗಳ ನಂತರ ವಿಕ್ಟರ್ ಮತ್ತೊಂದು ಗೋಲು ಗಳಿಸಿದ್ದರಿಂದ ಫ್ರಾನ್ಸ್ ತಂಡ 3-2 ರಿಂದ ಮುನ್ನಡೆ ಪಡೆಯಿತು. ಪಂದ್ಯದ 41 ನೇ ನಿಮಿಷದಲ್ಲಿ ನಿಕೋಲ್ಸ್ ಪೆನಾಲ್ಟಿ ಗೋಲು ಗಳಿಸಿದರು ಮತ್ತು ಮೂರನೇ ಕ್ವಾರ್ಟರ್ ಅಂತ್ಯದ ವೇಳೆಗೆ ಎರಡೂ ತಂಡಗಳು 3-3 ರಲ್ಲಿ ಸಮಬಲ ಸಾಧಿಸಿದವು.

59ನೇ ನಿಮಿಷದಲ್ಲಿ ಗೋಲು ಗಳಿಸಲು ಫ್ರಾನ್ಸ್ ಹತಾಶವಾಗಿ ಎದುರು ನೋಡುತ್ತಿತ್ತು. ಅಂತಿಮ ಕ್ಷಣಗಳಲ್ಲಿ ಫ್ರಾನ್ಸ್‌ಗೆ ಪೆನಾಲ್ಟಿ ಸ್ಟ್ರೋಕ್ ನೀಡಲಾಯಿತು ಮತ್ತು ವಿಕ್ಟರ್ ಚೆಂಡನ್ನು ನೆಟ್‌ಗೆ ಹೆಡ್ ಮಾಡಿ ಗೋಲ್​ ಗಳಿಸಿದರು. ಆಗ ಫ್ರಾನ್ಸ್ ತಂಡ 5-4 ಮುನ್ನಡೆ ಸಾಧಿಸಿತ್ತು. ಪಂದ್ಯ ಮುಗಿಯಲು ಕೇವಲ 56 ಸೆಕೆಂಡ್‌ಗಳು ಬಾಕಿ ಇರುವಾಗ ಅರ್ಜೆಂಟೀನಾ ಸೋಲು ಖಚಿತ ಎನಿಸಿತು. ನಂತರ ಅರ್ಜೆಂಟೀನಾದ ಫಾರ್ವರ್ಡ್ ಲೈನ್ ಫ್ರೆಂಚ್ ಅರ್ಧಕ್ಕೆ ಮುರಿಯುವ ಮೂಲಕ ಪೆನಾಲ್ಟಿ ಕಾರ್ನರ್ ಗಳಿಸಿತು. ಈ ವೇಳೆ ನಿಕೋಲಸ್ ಪಂದ್ಯದ ಅಂತ್ಯಕ್ಕೆ ಐದು ಸೆಕೆಂಡುಗಳ ಗೋಲ್​ ಬಾರಿಸುವ ಮೂಲಕ ಸ್ಕೋರ್‌ಗಳನ್ನು ಸಮಗೊಳಿಸುವಂತೆ ಪರಿವರ್ತಿಸಿದರು. ಈ ಮೂಲಕ ರೋಚಕತೆಯಿಂದ ಕೂಡಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.

ನಾಳೆ ಭಾರತ ತಂಡಕ್ಕೆ ಅಗ್ನಿ ಪರೀಕ್ಷೆ: ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023ರಲ್ಲಿ ಭಾರತ ತನ್ನ ಕೊನೆಯ ಪೂಲ್ ಪಂದ್ಯದಲ್ಲಿ ವೇಲ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿರುವುದು ಗೊತ್ತೇ ಇದೆ. ಆದರೆ ಆತಿಥೇಯರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ನೇರ ಸ್ಥಾನ ದೊರೆಯಲು ಈ ಗೆಲುವು ಸಾಕಾಗಲಿಲ್ಲ. ಭಾರತವು ಏಳು ಅಂಕಗಳನ್ನು ಗಳಿಸಿದ್ದು ಪೂಲ್ ಡಿ ಅಗ್ರಸ್ಥಾನಕ್ಕೆ ಸಮನಾಗಿದೆ.

ಗೋಲುಗಳ ಅಂತರದಿಂದ ಇಂಗ್ಲೆಂಡ್ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿದೆ. ಇಂಗ್ಲೆಂಡ್ ತನ್ನ ಅಂತಿಮ ಪೂಲ್ ಪಂದ್ಯದಲ್ಲಿ ಸ್ಪೇನ್ ಅನ್ನು 4-0 ಗೋಲುಗಳಿಂದ ಸೋಲಿಸಿತು. ಭಾರತ ಈಗ ಕೊನೆಯ 8 ರ ಘಟ್ಟ ತಲುಪಲು ಕ್ರಾಸ್ ಓವರ್ ಪಂದ್ಯವನ್ನು ಆಡಬೇಕಾಗಿದೆ. ಭಾರತ ತಂಡ ಈಗ ಜನವರಿ 22 ರಂದು ಪೂಲ್ ಸಿ ನಲ್ಲಿ ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನೊಂದಿಗೆ ಕ್ರಾಸ್‌ಒವರ್ ಪಂದ್ಯವನ್ನು ಆಡಲಿದೆ. ಇದರಲ್ಲಿ ಗೆದ್ದರೆ ಮಾತ್ರ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯಬಹುದಾಗಿದೆ.

ಓದಿ: ಹಾಕಿ ವಿಶ್ವಕಪ್​: ಹೆಚ್ಚು ಗೋಲ್​ ಗಳಿಸಿದ ದೇಶ ಯಾವುದು?, ಭಾರತದ ಹಾದಿ ಏನು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.