ETV Bharat / sports

ಏಷ್ಯನ್ ಕುಸ್ತಿ ಅಖಾಡದಲ್ಲಿ ಬೆಳ್ಳಿ ಗೆದ್ದ ದೀಪಕ್‌ ಪೂನಿಯಾ

author img

By

Published : Apr 19, 2021, 10:03 AM IST

ದೀಪಕ್‌ ಪೂನಿಯಾ ಹೊರತುಪಡಿಸಿ, 92 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸಂಜೀತ್‌, 61 ಕೆ.ಜಿ ವಿಭಾಗದಲ್ಲಿ ರವೀಂದರ್‌ ಅವರಿಗೆ ಕಂಚು ಒಲಿಯಿತು. ಭಾರತವು ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 7 ಪದಕಗಳೊಂದಿಗೆ ಏಷ್ಯನ್ ಚಾಂಪಿಯನ್‌ಶಿಪ್ ಅಭಿಯಾನ ಕೊನೆಗೊಳಿಸಿತು.

ದೀಪಕ್‌ ಪೂನಿಯಾ
ದೀಪಕ್‌ ಪೂನಿಯಾ

ಅಲ್ಮಾಟಿ (ಕಜಕಿಸ್ತಾನ್​) : ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ 86 ಕೆ.ಜಿ ವಿಭಾಗದಲ್ಲಿ ಭಾರತದ ದೀಪಕ್‌ ಪೂನಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ.

86 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಇರಾನ್​​ನ ಹಸನ್​ ಜೊತೆ ದೀಪಕ್‌ ಪೂನಿಯಾ ಆರಂಭದಿಂದಲೂ ಹಿನ್ನಡೆ ಅನುಭವಿಸಿದರು. ಉತ್ತಮ ಹೋರಾಟ ನಡೆಸಿದ ಹಸನ್​ ಸ್ವರ್ಣ ಗೆದ್ದರೆ, ದೀಪಕ್​ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಇನ್ನು, 92 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸಂಜೀತ್‌ ಉಜ್ಬೇಕಿಸ್ತಾನದ ರುಸ್ತಮ್ ಶೋಡೀವ್ ವಿರುದ್ಧ 11-8 ರಿಂದ ಮೇಲುಗೈ ಸಾಧಿಸಿ ಕಂಚು ಸಾಧನೆ ಮಾಡಿದರು.

61 ಕೆ.ಜಿ ವಿಭಾಗದಲ್ಲಿ ರವೀಂದರ್‌ ಅವರಿಗೂ ಕಂಚು ಒಲಿಯಿತು. ಭಾರತವು ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಏಳು ಪದಕಗಳೊಂದಿಗೆ ಏಷ್ಯನ್ ಚಾಂಪಿಯನ್‌ಶಿಪ್ ಅಭಿಯಾನ ಕೊನೆಗೊಳಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.