ETV Bharat / sports

ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ದೀಪಕ್​ ಪೂನಿಯಾಗೆ ವರ್ಷದ ಜೂನಿಯರ್​ ಕುಸ್ತಿಪಟು ಪ್ರಶಸ್ತಿ

author img

By

Published : Dec 17, 2019, 7:00 PM IST

18 ವರ್ಷಗಳ ನಂತರ ಭಾರತಕ್ಕೆ ವಿಶ್ವ ಜೂನಿಯರ್​ ಕುಸ್ತಿ ಚಾಂಪಿಯನ್​ ಪ್ರಶಸ್ತಿ ತಂದುಕೊಟ್ಟಿದ್ದ ಹಾಗೂ 2019ರ ಸೀನಿಯರ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದ 19 ವರ್ಷದ ದೀಪಕ್​ ಪೂನಿಯಾಗೆ  ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (UWW) ನೀಡುವ 'ವರ್ಷದ ಶ್ರೇಷ್ಠ ಜೂನಿಯರ್‌ ಫ್ರೀಸ್ಟೈಲ್‌ ಕುಸ್ತಿಪಟು' ಗೌರವಕ್ಕೆ ಪಾತ್ರರಾಗಿದ್ದಾರೆ.

Best Junior Freestyle Wrestler of the Year
Best Junior Freestyle Wrestler of the Year

ನವದೆಹಲಿ: ಜೂನಿಯರ್​ ವಿಶ್ವಚಾಂಪಿಯನ್​ ಹಾಗೂ ಸೀನಿಯರ್​ ವಿಶ್ವಚಾಂಪಿಯನ್​ಶಿಪ್​ ಬೆಳ್ಳಿಪದಕ ವಿಜೇತ ಕುಸ್ತಿಪಟು ದೀಪಕ್​ ಪೂನಿಯಾ 'ವರ್ಷದ ಜೂನಿಯರ್​ ಫ್ರೀ ಸ್ಟೈಲ್​ ಕುಸ್ತಿಪಟು' ಪ್ರಶಸ್ತಿಗೆ ಭಾಜನರಾಗಿದ್ದಾರೆ.

18 ವರ್ಷಗಳ ನಂತರ ಭಾರತಕ್ಕೆ ವಿಶ್ವ ಜೂನಿಯರ್​ ಕುಸ್ತಿ ಚಾಂಪಿಯನ್​ ಪ್ರಶಸ್ತಿ ತಂದುಕೊಟ್ಟಿದ್ದ ಹಾಗೂ 2019ರ ಸೀನಿಯರ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದ 19 ವರ್ಷದ ಪೂನಿಯಾಗೆ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (UWW) ನೀಡುವ 'ವರ್ಷದ ಶ್ರೇಷ್ಠ ಜೂನಿಯರ್‌ ಫ್ರೀಸ್ಟೈಲ್‌ ಕುಸ್ತಿಪಟು' ಗೌರವಕ್ಕೆ ಪಾತ್ರರಾಗಿದ್ದಾರೆ.

" ಈ ಪ್ರಶಸ್ತಿ ನನಗೆ ದೊರೆತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ವಿಶ್ವದ ಶ್ರೇಷ್ಠ ಕುಸ್ತಿಪಟುಗಳಿರುವಾಗ ನನ್ನನ್ನು ಈ ಪ್ರಶಸ್ತಿಗೆ ಗುರುತಿಸಿರುವುದು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರಲು ಪ್ರೇರಣೆಯಾಗಲಿದೆ" ಎಂದು ದೀಪಕ್​ ಪೂನಿಯಾ ಸಂತಸ ವ್ಯಕ್ತಪಡಿಸಿದ್ದಾರೆ.

86 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುವ ದೀಪಕ್‌, ನೂರ್​ ಸುಲ್ತಾನ್​ನಲ್ಲಿ ನಡೆದ ವಿಶ್ವ ಕುಸ್ತಿಚಾಂಪಿಯನ್​ಶಿಪ್​ನಲ್ಲಿ ಫೈನಲ್​ ತಲುಪಿದ್ದ ಏಕಮಾತ್ರ ಕುಸ್ತಿಪಟುವಾಗಿದ್ದರು. ದುರಾದೃಷ್ಠವಶಾತ್​ ಕಾಲುನೋವಿನಿಂದಾಗಿ ಫೈನಲ್​ನಿಂದ ಹಿಂದೆ ಸರಿದು ಬೆಳ್ಳಿಪದಕಕ್ಕೆ ತೃಪ್ತಿಪಟ್ಟಿದ್ದರು.

ಯುಡಬ್ಲೂಡಬ್ಲೂ ನನಗೆ ಈ ಪ್ರಶಸ್ತಿ ನೀಡಿರುವುದರಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ.ಮುಂದಿನ ವರ್ಷ ನಡೆಯುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪ್ರಶಸ್ತಿಗಾಗಿ ಶೇ 100 ರಷ್ಟು ಪ್ರಯತ್ನ ಪಡುತ್ತೇನೆ. ನನಗೆ ಸಹಕಾರ ನೀಡುತ್ತಿರುವ ಟಾಟಾ ಮೋಟರ್ಸ್​ಗೆ ಧನ್ಯವಾದ ಹೇಳುತ್ತೇನೆ ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.