ETV Bharat / sports

ಏಷ್ಯನ್ ಕುಸ್ತಿ​: ಫೈನಲ್ ಗೆದ್ದು ಚಿನ್ನ ಸಾಧನೆ ಮಾಡುವರೇ ದೀಪಕ್​ ಪೂನಿಯಾ?

author img

By

Published : Apr 18, 2021, 6:08 PM IST

61 ಕೆ.ಜಿ ವಿಭಾಗದ ಸೆಮಿಫೈನಲ್​ನಲ್ಲಿ ರವೀಂದರ್​ 4-7ರಲ್ಲಿ ಕಜಕಸ್ಥಾನದ ಆಡ್ಲಾನ್ ಆಕರೋವ್ ವಿರುದ್ಧ ಸೋಲು ಕಂಡರು. ಆದರೂ ಇವರು ಕಂಚಿನ ಪದಕಕ್ಕಾಗಿ ಕಿರ್ಗಿಸ್ತಾನ್‌ನ ಇಕ್ರೋಮ್ಜೋನ್ ವಿರುದ್ಧ ಭಾನುವಾರ ಕಾದಾಡಲಿದ್ದಾರೆ.

ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್
ದೀಪಕ್ ಪೂನಿಯಾ

ಅಲ್ಮಾಟಿ(ಕಜಕಸ್ತಾನ): ಡಿಫೆನ್ಸ್​ನಲ್ಲಿ ಅದ್ಭುತ ಕೌಶಲ ತೋರಿದ ದೀಪಕ್​ ಪೂನಿಯಾ ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​ನ​ 86 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ರವೀಂದರ್​ (61ಕೆ.ಜಿ) ಮತ್ತು ಸಂಜೀತ್​(92 ಕೆ.ಜಿ) ವಿಭಾಗದಲ್ಲಿ ಕಂಚಿಗಾಗಿ ಭಾನುವಾರ ಪೈಪೋಟಿ ನಡೆಸಲಿದ್ದಾರೆ.

ಈ ಹಿಂದೆ ಕಾಂಟಿನೆಂಟಲ್ ಚಾಂಪಿಯನ್​ಶಿಪ್​ನಲ್ಲಿ 2 ಕಂಚಿನ ಪದಕ ಗೆದ್ದಿರುವ 22 ವರ್ಷದ ಭರವಸೆಯ ಕುಸ್ತಿಪಟು ದೀಪಕ್, ಕೊರಿಯಾದ ಗ್ವಾನುಕ್ ಕಿಮ್​ರನ್ನು ಸೆಮಿಫೈನಲ್​ನಲ್ಲಿ 2-0 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಈಗಾಗಲೇ ವಿಶ್ವಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದಿರುವ ಪೂನಿಯಾ 2021ರ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.

ಇನ್ನು, 61 ಕೆ.ಜಿ ವಿಭಾಗದ ಸೆಮಿಫೈನಲ್​ನಲ್ಲಿ ರವೀಂದರ್​ 4-7ರಲ್ಲಿ ಕಜಕಸ್ಥಾನದ ಆಡ್ಲಾನ್ ಆಕರೋವ್ ವಿರುದ್ಧ ಸೋಲು ಕಂಡರು. ಆದರೂ ಇವರು ಕಂಚಿನ ಪದಕಕ್ಕಾಗಿ ಕಿರ್ಗಿಸ್ತಾನ್‌ನ ಇಕ್ರೋಮ್ಜೋನ್ ವಿರುದ್ಧ ಭಾನುವಾರ ಕಾದಾಡಲಿದ್ದಾರೆ.

92 ಕೆ.ಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡ ಸಂಜೀತ್ ಕಂಚಿನ ಪದಕಕ್ಕಾಗಿ ಉಜ್ಬೇಕಿಸ್ತಾನದ ರುಸ್ತುಮ್ ಶೊಡೀವ್​ ವಿರುದ್ಧ ಸ್ಪರ್ಧಿಸಲಿದ್ದಾರೆ. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.