ETV Bharat / sports

2022 ಕಾಮನ್​ವೆಲ್ತ್​ ಗೇಮ್ಸ್ ​​: ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿ ಇವರಿಗೆಲ್ಲ ಅವಕಾಶ

author img

By

Published : May 16, 2022, 4:41 PM IST

Commonwealth Games 2022
Commonwealth Games 2022

ಲಂಡನ್​​​ನಲ್ಲಿ ನಡೆಯಲಿರುವ 2022ರ ಕಾಮನ್​​​ವೆಲ್ತ್​ ಗೇಮ್ಸ್​​​ನಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳು ಭಾಗಿಯಾಗಲಿದ್ದು, ಇಂದು ಅವರ ಹೆಸರು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ..

ನವದೆಹಲಿ : 2022ರ ಕಾಮನ್​ವೆಲ್ತ್​ ಗೇಮ್ಸ್​​​ನಲ್ಲಿ ಭಾರತದ ಮಹಿಳಾ ಕುಸ್ತಿಪಟುಗಳು ಭಾಗಿಯಾಗಲಿದ್ದು, ಅದಕ್ಕಾಗಿ ಇಂದು ಅಂತಿಮ ಲಿಸ್ಟ್ ರಿಲೀಸ್ ಮಾಡಲಾಗಿದೆ. ಜುಲೈ 25ರಿಂದ ಆಗಸ್ಟ್​​ 8ರವರೆಗೆ ಈ ಕ್ರೀಡಾಕೂಟ ಲಂಡನ್​​ನ ವಿವಿಧ ನಗರಗಳಲ್ಲಿ ಆಯೋಜನೆಗೊಂಡಿದೆ.

50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್​, ವಿನೇಶ್​ ಪೋಗಟ್​​(53 ಕೆಜಿ), ಅನ್ಸು ಮಲಿಕ್​​(57 ಕೆಜಿ), ಸಾಕ್ಷಿ ಮಲಿಕ್​(62ಕೆಜಿ), ದಿವ್ಯಾ ಕರ್ಕನ್​(68ಕೆಜಿ) ಹಾಗೂ ಪೂಜಾ ದಾಂಡೆ(76ಕೆಜಿ) ಆಯ್ಕೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಷನ್​ ಮಾಹಿತಿ ಹಂಚಿಕೊಂಡಿದೆ.

ಈ ಸಲದ ಕಾಮನ್​ವೆಲ್ತ್​ ಗೇಮ್ಸ್​​​ನಲ್ಲಿ ಮಹಿಳೆಯರ ಟಿ-20 ಕ್ರಿಕೆಟ್​ ಸಹ ಆಡಿಸಲು ನಿರ್ಧರಿಸಲಾಗಿದ್ದು, ಉಳಿದಂತೆ ಹಾಕಿ ಪಂದ್ಯಾವಳಿಗಳು ಸಹ ನಡೆಯಲಿವೆ. ಲಂಡನ್​​ನ ಮ್ಯಾಚೆಂಸ್ಟರ್ ಮತ್ತು ಬರ್ಮಿಂಗ್​ಹ್ಯಾಮ್​​ ನಗರಗಳಲ್ಲಿ ಕಾಮನ್​ವೆಲ್ತ್ ಗೇಮ್ಸ್​​ಗಳು ನಡೆಯಲಿವೆ.

  • Indian wrestlers Pooja Gehlot (50 Kg), Vinesh Phogat (53 Kg), Anshu Malik (57 Kg), Sakshi Malik (62 Kg), Divya Kakran (68 Kg) and Pooja Dhanda (76 Kg) selected to represent the country at Commonwealth Games 2022 in Birmingham, England.

    — ANI (@ANI) May 16, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಟಿ - 20 ಚಾಲೆಂಜ್​ ಟ್ರೋಫಿ: ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ: ಮೇ. 23ರಿಂದ ಟೂರ್ನಿ ಆರಂಭ

ಕಾಮನ್​ವೆಲ್ತ್​ ಗೇಮ್ಸ್​​​ನಲ್ಲಿ ಟೀಂ ಇಂಡಿಯಾ, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಪಾಕಿಸ್ತಾನ್, ಶ್ರೀಲಂಕಾ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಭಾಗಿಯಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.